fbpx
ರಾಜಕೀಯ

ಜೋರ್ಡಾನ್​ ಸಂಸತ್​ ಕಲಾಪದ ವೇಳೆ ಹೊಡೆದಾಡಿಕೊಂಡ ಸಂಸದರು

ಜನಪ್ರತಿನಿಧಿಗಳಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕಾದ ರಾಜಕಾರಣಿಗಳೇ ಸಂಸತ್ತಿನಲ್ಲಿ ಒಬ್ಬರಿಗೊಬ್ಬರು ಪರಸ್ಪರ ಗುದ್ದಾಡುತ್ತಾ ಮತ್ತು ತಳ್ಳುತ್ತಾ ಹೊಡೆದಾಡಿಕೊಂಡಿದರೆ. ಜೋರ್ಡಾನ್ ಸಂಸತ್ತಿನಲ್ಲಿ ಸಾಂವಿಧಾನಿಕ ಸುಧಾರಣೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ. ಈ ಹಿಂದೆ ಕರ್ನಾಟಕದ ವಿಧಾನಸಭೆಯಲ್ಲೂ ಇದೇ ರೀತಿ ಎರಡು ಪಕ್ಷದವರು ಸದನದೊಳಗೆ ಕೂಡ ಇದೆ ರೀತಿ ಜಗಳ ಮಾಡಿಕೊಂಡಿದ್ದರು.

ಸಂಸತ್ತಿನಲ್ಲಿ ಆಗಿದೆ ಗಲಾಟೆಯ ಕಾರಣ ದೇಶದ ಸಂವಿಧಾನದ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಅದರ ನಂತರ ಸಂಸದರು ಪರಸ್ಪರ  ಬಾಯಿಗೆ ಬಂದಂತೆ ಬೈದುಕೊಳ್ಳುತ್ತಾ ಸಂಸತ್​ ಕಲಾಪವನ್ನು ಅಸ್ತವ್ಯಸ್ತಗೊಳಿಸಿದರು. ಇದರ ನಡುವೆ ಸಂಸದರು ಪರಸ್ಪರ ಮೈ ಮುಟ್ಟಿಕೊಂಡು ಹೊಡೆದಾಡಿಕೊಂಡ ಘಟನೆಯೂ ನಡೆಯಿತು.

“>

 

 

ಈಗ ಸೋಶಿಯಲ್ ಮೀಡಿಯಾ ದಲ್ಲಿ  ವಿಡಿಯೋ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ 60,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.   ಸಂಸದರ ವಿಡಿಯೋಗೆ ಅನೇಕರು ಛೀಮಾರಿ ಹಾಕಿದ್ದಾರೆ. ಈ ಹೊಡೆದಾಟದಲ್ಲಿ ಓರ್ವ ಸಂಸದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಬಳಿಕ ಅಧಿವೇಶನವನ್ನು ನಾಳೆಗೆ ಮುಂದೂಡುವಂತೆ ಒತ್ತಾಯಿಸಲಾಯಿತು. ಇದು ನಮ್ಮ ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಸಂಸತ್ತಿನ ಸದಸ್ಯ ಖಲೀಲ್ ಅತಿಯೆಹ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top