fbpx
ಸಮಾಚಾರ

ಡಬಲ್ ಧಮಾಕ: RRR ಜೊತೆ ಅಬ್ಬರಿಸಿದ್ದಾನೆ ವಿಕ್ರಾಂತ್ ರೋಣ

ಬಹುನಿರೀಕ್ಷಿತ RRR ಸಿನಿಮಾ ಜನವರಿ ಮೊದಲವಾರ ಬಿಡುಗಡೆಯಾಗುತ್ತಿದೆ. ತೆಲುಗಿನ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದಲ್ಲಿ ಮತ್ತು ಸ್ಟಾರ್ ನಟರಾದ ರಾಮ ಚರಣ್, ಜೂ.NTR ಮುಖ್ಯಭೂಮಿಕೆಯಲ್ಲಿ ತಯಾರಾಗಿರುವ RRR ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಇನ್ನೊಂದು ಕಡೆ ಕಿಚ್ಚನ ವಿಭಿನ್ನ ಸಿನಿಮಾ ವಿಕ್ರಾಂತ್ ರೋಣದ ಝಲಕ್ 3ಡಿಯನ್ನು RRR ಚಿತ್ರದ ಜೊತೆ ನೋಡುವ ಅವಕಾಶ ಸಿಗುತ್ತಿದೆ. ಹೌದು, ಸಿನಿಪ್ರಿಯರಿಗೆ ಒಂದೇ ಸಿನಿಮಾದಲ್ಲಿ ಮತ್ತೊಂದು ಸಿನಿಮಾದ ಝಲಕ್ ನೋಡುವ ಅವಕಾಶ ಸಿಗುತ್ತಿದೆ.

ಪ್ರಪಂಚದಾದ್ಯಂತ ಸುಮಾರು 5 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ RRR ಸಿನಿಮಾ ಬಿಡುಗಡೆಯಾಗಲಿದೆ. ಇವುಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ತಿಯೇಟರ್ ಗಳಲ್ಲಿ ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ತುಣುಕುಗಳು ಪ್ರಸಾರವಾಗಲಿವೆ. 3ಡಿ ಹಾಗೂ 2ಡಿಯಲ್ಲಿ ಎರಡರಲ್ಲೂ ತುಣುಕುಗಳು ಬಿಡುಗಡೆಯಾಗಲಿವೆ.

ಜನವರಿ 7ನೇ ತಾರೀಖ್ ವಿಶ್ವಾದ್ಯಂತ ರಾಜಮೌಳಿ ನಿರ್ದೇಶನದ ಥ್ರಿಬಲ್ ಆರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ದಿನದಂದು ಥ್ರಿಬಲ್ ಆರ್ ತೆರೆಕಾಣುವ ಸ್ಕ್ರೀನ್​​​​ಗಳಲ್ಲಿ ವಿಕ್ರಾಂತ್ ರೋಣ ಚಿತ್ರದ ಟೀಸರ್ ಝಲಕ್ ಪ್ರದರ್ಶನ ಕಾಣಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಫಿಲ್ಮ್ ಟೀಮ್​​ನಿಂದ ಅಧಿಕೃತ ಮಾಹಿತಿ ಹೊರ ಬರೋ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top