fbpx
ಸಮಾಚಾರ

“ಅಂದು ನಾನು ಕುಡಿದಿರಲಿಲ್ಲ” ಗಲಾಟೆ ಬಗ್ಗೆ ದಿವ್ಯಾ ಸುರೇಶ್ ಹೇಳಿದ್ದೇನು?

ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ದಿಯಾಗಿದ್ದ ದಿವ್ಯ ಸುರೇಶ್ ನೈಟ್ ಕಾರ್ಫ್ಯು ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕನ್ನಡ ಮಾಧ್ಯಮಗಳು ವರದಿ ಮಾಡಿದ್ದವು. ” ದಿವ್ಯ ಸುರೇಶ್ ರಾತ್ರಿ ಕುಡಿದು ಗಲಾಟೆ ಮಾಡಿದ್ದಾರೆ, ಪೋಲೀಸರ ಜೊತೆ ರಂಪಾಟ ನಡೆಸಿದ್ದಾರೆ.” ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಈ ವಿಚಾರದ ಬಗ್ಗೆ ಸ್ವತಃ ದಿವ್ಯಾ ಸುರೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಮುಂದು ಬಂದು ಮಾತನಾಡಿದ ದಿವ್ಯಾ ಸುರೇಶ್ ಅವ್ರು, “ಕುಡಿದು ರಂಪಾಟ ಮಾಡಿದೆ ಎಂಬುದು ಸುಳ್ಳು, ನಾನು ಹೋಗಿದ್ದಿದ್ದು ‘ರಾಸ್ತಾ ಕೆಫೆ’ಗೆ ರಾಸ್ತಾ ರೆಸ್ಟೊರೆಂಟ್‌ಗೆ ಅಲ್ಲ. ನಾನು ಕುಡಿದಿದ್ದೆ ಎನ್ನಲು ಏನಾದರೂ ಸಾಕ್ಷ್ಯ ಇದೆಯಾ ಅವರ ಬಳಿ? ಹೋಗಲಿ ನಾನು ಅಸಭ್ಯವಾಗಿ ಏನಾದರೂ ನಡೆದುಕೊಂಡೆನಾ? ಎಂದು ಕೋಪದಿಂದಲೇ ದಿವ್ಯಾ ಸುರೇಶ್ ಪ್ರಶ್ನೆ ಮಾಡಿದ್ದಾರೆ.

‘ಎಲ್ಲಾ ಕಡೆ ರಾಸ್ತ ಪಬ್ ಅಂತ ತೋರಿಸುತ್ತಿದ್ದಾರೆ ದಯವಿಟ್ಟು ಗೂಗಲ್ (Google) ಮಾಡಿ ನೋಡಿ ಅದು ರಾಸ್ತ ಪಬ್ ಅಥವಾ ರಾಸ್ತ ಕೆಫೆ ನಾ ಎಂದು. ಇದನ್ನು ಮೀರಿ ನಾನು ಉತ್ತರ ಕೊಡುವುದಕ್ಕೆ ಆಗೋಲ್ಲ. ಪಬ್‌ಗೆ ಹೋಗಿ ಕುಡಿದಿದ್ದು ಕುಡಿದ ಮತ್ತಲ್ಲಿ ಏನ್ ಏನ್​ ನೀವು ಬಂದು ನೋಡಿದ್ರಾ ನಾನು ಕುಡಿದಿದ್ದೆ ಅಂತಾ? ನಾನು ಕುಡಿದಿದ್ದೆ ಅಂತ ನಿಮ್ಮ ಹತ್ರ ಸಾಕ್ಷಿ ಇದ್ಯಾ? ಆಯ್ತು ಸಾಕ್ಷಿ ಬಗ್ಗೆ ಬಿಡಿ ನಾನು ಏನಾದರೂ ಅಸಭ್ಯವಾಗಿ ವರ್ತಿಸಿದ್ನಾ? ವೈಯಕ್ತಿಕವಾಗಿ ಈ ವಿಚಾರ ಮಾತನಾಡುವುದಕ್ಕೆ ನನಗೇ ಇಷ್ಟ ಇರಲಿಲ್ಲ ಆದರೂ ಈ ವಿಚಾರದ ಬಗ್ಗೆ ನಾನು ಕ್ಲಾರಿಟಿ ಕೊಡಬೇಕು ಅನಿಸಿತು’ ಎಂದಿದ್ದಾರೆ.

“’ಅವತ್ತು 9 ಗಂಟೆಗೆ ರೆಸ್ಟೋರೆಂಟ್ ಕ್ಲೋಸ್ ಆಯ್ತು. 9.10ಕ್ಕೆ ನಾವು ಕೆಳಗೆ ಬಂದ್ವಿ. ಆಗಲೇ ಕ್ಯಾಬ್ ಬುಕ್ ಮಾಡುತ್ತಿದ್ವಿ. ಈ ವೇಳೆ ಪೊಲೀಸರಿಗೂ ನಾವು ಕ್ಯಾಬ್ ಬುಕ್ ಮಾಡುತ್ತಿದ್ದನ್ನು ತೋರಿಸಿದ್ವಿ. ಕ್ಯಾಬ್ ಬಂದ್ಮೇಲೆ ಹೊರಡಿ ಅಂತ ಪೊಲೀಸರು ಕೂಡ ಹೇಳಿದ್ದರು. ಅಷ್ಟರಲ್ಲಿ ಕ್ಯಾಮರಾಗಳ ಮೂಲಕ ನನ್ನನ್ನ ಸೆರೆಹಿಡಿಯಲು ಮುಂದಾದರು. ನಾನು ನಟಿಯಾಗಿರುವುದರಿಂದ ಹೊರಗಡೆ ವಿಡಿಯೋ ಮಾಡಿದರೆ ನನಗೂ ಭಯ ಇದ್ದೇ ಇರುತ್ತೆ. ‘’ಯಾಕೆ ವಿಡಿಯೋ ಮಾಡ್ತಿದ್ದೀರಾ?’’ ಅಂತ ನಾನು ಒಂದೇ ಪ್ರಶ್ನೆ ಕೇಳಿದ್ದು. ಈ ಘಟನೆ ಬಗ್ಗೆ ನನಗೆ ನಿಜಕ್ಕೂ ಬೇಸರ ಆಗಿದೆ’’” ಎಂದು ದಿವ್ಯ ಸುರೇಶ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top