fbpx
ಸಮಾಚಾರ

ಭಾವಿ ಪತಿಯ ಬಗ್ಗೆ ಕೆಲ ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡ ಅದಿತಿ ಪ್ರಭುದೇವ

ಕನ್ನಡ ಚಿತ್ರರಂಗದ ಮುದ್ದು ನಟಿ ಅದಿತಿ ಪ್ರಭುದೇವ ಇತ್ತೀಚಿಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಅದಿತಿ ಮದುವೆಯಾಗುತ್ತಾರೆ ಎಂದು ಯಾರು ಎಣಿಸಿರಲಿಲ್ಲ.. ಕಳೆದ ಡಿಸೆಂಬರ್ ನಲ್ಲಿ ಹುಡಗನೊಬ್ಬನ ಜತೆ ಇರುವ ಫೋಟೋ ವನ್ನ ಅದಿತಿ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಈ ಫೋಟೋದಲ್ಲಿ ಉಂಗುರ ಹೈಲೈಟ್ ಆಗಿತ್ತು. ಈ ಮೂಲಕ ತಾವು ನಿಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಅದಿತಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.​

ತಮ್ಮ ಹುಡುಗನ ಕುರಿತಾಗಿ ಖಾಸಗಿ ವಾಹಿನಿ ಸಂದರ್ಶನದಲ್ಲಿ ಅದಿತಿ ಅವರು ಮಾತನಾಡುತ್ತಾ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯವಾಗಿದೆ. ಆದರೆ ನಿಶ್ಚಿತಾರ್ಥ ಸಡನ್ ನಿರ್ಧಾರವಾಗಿದೆ. ನನ್ನ ಪೋಷಕರು ನನ್ನನ್ನು ಮದುವೆಯಾಗು ಎಂದು ಒತ್ತಾಯ ಮಾಡುತ್ತಿದ್ದರು. ವರನಿಗಾಗಿ ಹುಡುಕಾಟ ಮಾಡಲು ಪ್ರಾರಂಭಿಸಿದ್ದರು. ಅವರು ತೋರಿಸಿರುವ ಹುಡುಗ ಯಶಸ್ ನನಗೂ ಇಷ್ಟವಾದರು. ನಂತರ ಹಾಸನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

ನಮ್ಮಿಬ್ಬರದ್ದೂ ಅರೆಂಜ್ಡ್ ಮದುವೆ. ನನಗೆ ಪ್ರಾಣಿ, ಪಕ್ಷಿ, ಪ್ರಕೃತಿಯೆಂದರೆ ತುಂಬಾ ಇಷ್ಟ. ಕೂರ್ಗಲ್ಲಿ ವಾಸಿಸುತ್ತಿರುವ ಯಶಸ್ ಕೂಡ ಇದೇ ಮನೋಭಾವವನ್ನು ಹೊಂದಿರುವವರಾಗಿದ್ದಾರೆ. ನನ್ನ ವೃತ್ತಿ ಜೀವನಕ್ಕೆ ಯಶಸ್ ಹಾಗೂ ಅವರ ಕುಟುಂಬದವರು ಬೆಂಬಲ ನೀಡಿದ್ದಾರೆ. ಗಾಸಿಪ್‌ಗಳನ್ನು ಹುಟ್ಟುಹಾಕಲು ನನಗೆ ಇಷ್ಟವಿಲ್ಲ. ಇದರಿಂದಾಗಿ ನಿಶ್ಚಿತಾರ್ಥವನ್ನು ಅಧಿಕೃತ ಘೋಷಣೆ ಮಾಡಿದ್ದೇವೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top