fbpx
ಸಮಾಚಾರ

ಸಿಎಂ ಎದುರೇ ವೇದಿಕೆ ಮೇಲೆ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ಜಟಾಪಟಿ

ಸಿಎಂ ಬಸವರಾಜ್ ಬೊಮ್ಮಾಯಿ​ ಎದುರೇ ಬಿಗ್​ ಫೈಟ್​ ಆಗಿದ್ದು, ಸಂಸದರು-ಸಚಿವರ ನಡುವೆ ಮಾತಿನ ಜಟಾಪಟಿ ನಡೆದಿದೆ. ಸಚಿವ ಅಶ್ವಥ್ ನಾರಾಯಣ್ ಮಾತು ಕೇಳಿದ ಸಂಸದ ಡಿಕೆ ಸುರೇಶ್ ಕೆಂಡಾಮಂಡಲವಾಗಿ ವೇದಿಕೆ ಮೇಲೆ ವಾಗ್ವಾದ ನಡೆಸಿದ್ದಾರೆ.

ರಾಮನಗರ ಜಿಲ್ಲಾಡಳಿತದಿಂದ ಡಿಸಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಈ ಘಟನೆ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವತ್ಥ ನಾರಾಯಣ ಮಾತನಾಡುವ ಸಂದರ್ಭದಲ್ಲಿ ಉಪಯೋಗಿಸಿದ ಒಂದು ಪದ ಡಿಕೆ ಸುರೇಶ್ ಆಕ್ರೋಶಕ್ಕೆ ಕಾರಣವಾಯಿತು. ಅಶ್ವತ್ಥ ನಾರಾಯಣ ವಿರುದ್ಧ ರೊಚ್ಚಿಗೆದ್ದ ಡಿಕೆ ಸುರೇಶ್ ಅವರು ಮಾತನಾಡುತ್ತಿದ್ದ ಪೋಡಿಯಂ ಕಡೆ ಆಕ್ರೋಶದಿಂದ ಬಂದರು.

ಭಾಷಣದ ವೇಳೆ ಅಶ್ವಥ್ ನಾರಾಯಣ್ ಅವರು ಅಭಿವೃದ್ಧಿ ಪ್ರಸ್ತಾಪ ಮಾಡಿದ್ದು, ರಾಮನಗರದ ಅಭಿವೃದ್ಧಿ ನಾವಷ್ಟೇ ಮಾಡಿದ್ದೇವೆ ಎಂದು ಹೇಳಿದ್ದಾರೆ. ಸಚಿವರ ಭಾಷಣಕ್ಕೆ ಡಿಕೆ ಸುರೇಶ್ ಬೆಂಬಲಿಗರು ಅಡ್ಡಿ ಪಡಿಸಿದ್ದು, ಸಂಸದರಿಗೆ ಸರಿಯಾದ ಗೌರವ ಕೊಟ್ಟಿಲ್ಲ ಎಂದು ಕೈ ಕಾರ್ಯಕರ್ತರು ಸ್ಟೇಜ್ ಹತ್ತಿ ದಾಂಧಲೆ ನಡೆಸಲು ಮುಂದಾಗಿದ್ದಾರೆ. ಯಾರಪ್ಪಾ ಗಂಡು.. ? ಅಭಿವೃದ್ಧಿಯಲ್ಲಿ ತೋರ್ಸಪ್ಪಾ, ನಾವು ರಾಜಕೀಯ ಮಾಡಲು ಬಂದಿಲ್ಲ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಇದರಿಂದ ರೊಚಿಗಿದ್ದ ಸುರೇಶ್ ಹಾಗು ರವಿ ವಾಗ್ವಾದ ನಡೆಸಿದರು. ಏ ಗಂಡಸ್ ತನ ತೋರ್ಲಿಲಿ ಅವನು ಎಂದು ಸುರೇಶ್ ಜಗಳಕ್ಕಿಳಿದರು. ಈ ಗಲಾಟೆ ಶರುವಾದ ಕೂಡಲೇ, ವೇದಿಕೆ ಎದುರು ಸಹ ಕೂಗಾಟ ಶುರುವಾಯ್ತು. ಗಲಾಟೆ ನಡುವೆ, ಸಿಎಂ ಮಾತನಾಡಿ ನಾನು ಅಭಿವೃದ್ಧಿ ಮಾಡಲು ಬಂದಿದ್ದೆನೆ. ದಯವಿಟ್ಟು ಗಲಾಟೆ ಮಾಡಬೇಡಿ ಎಂದರು.ಕೆಲ ಹೊತ್ತಿನ ಬಳಿಕ ಸಂಸದ ಡಿ.ಕೆ.ಸುರೇಶ್ ಮಾತನಾಡುತ್ತಿದ್ದರೆ, ವೇದಿಕೆ ಮುಂಭಾಗ ಗಲಾಟೆ ನಡೆಯುತ್ತಲೇ ಇತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top