fbpx
ಸಮಾಚಾರ

ಭರ್ಜರಿ ನೇಮಕಾತಿ: 5,962 ಗ್ರಾ.ಪಂಗಳಲ್ಲಿ ವಿವಿಧ ಹುದ್ದೆಗಳ ಭರ್ತಿ

ರಾಜ್ಯದಲ್ಲಿರುವ 5,962 ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಾವಿರಾರು ಹುದ್ದೆಗಳು ಖಾಲಿ ಇವೆ. ಪಿಡಿಒ 727, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್ 1, 2- 1,591, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 505 ಹುದ್ದೆಗಳು ಸೇರಿ ಒಟ್ಟು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು ಆಸಕ್ತ ಆಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂದಿಸಿದ ಅಧಿಸೂಚನೆ ಶೀಘ್ರವೇ ಹೊರಬೀಳಲಿದೆ

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1 ಮತ್ತು ಗ್ರೇಡ್‌-2 ವೃಂದದ ನೇಮಕಾತಿಗಾಗಿ ಜಿಲ್ಲಾ ಪಂಚಾಯಿತಿಗಳ ಉಪ ಕಾರ್ಯದರ್ಶಿ (ಅಭಿವೃದ್ಧಿ) ನೇತೃತ್ವದಲ್ಲಿ ಪ್ರಾಧಿಕಾರ ರಚಿಸಲಾಗಿದ್ದು, ಅರ್ಹತೆ ಆಧಾರದ ಮೇಲೆ ಮುಂಬಡ್ತಿ ಮೂಲಕ ಭರ್ತಿ ಮಾಡಲು ಸರ್ಕಾರದಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-2 ವೃಂದದ 343 ಹುದ್ದೆಗಳಿಗೆ (80 ಕಲ್ಯಾಣ ಕರ್ನಾಟಕ (ಕಕ), 263 ಕಕ ಹೊರತುಪಡಿಸಿ) ನೇರ ನೇಮಕಾತಿ ಮಾಡಿಕೊಳ್ಳಲು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 158 ಹುದ್ದೆಗಳನ್ನು (ಕಲ್ಯಾಣ ಕರ್ನಾಟಕ 55, ಕಕ ಹೊರತುಪಡಿಸಿ 103) ನೇರ ನೇಮಕಾತಿ ಮಾಡಲು ಇಲಾಖೆ ಉದ್ದೇಸಿಸಿದ್ದು, ಅದು ಶೀಘ್ರ ಕಾರ್ಯರೂಪಕ್ಕೆ ಬರಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top