fbpx
ಸಮಾಚಾರ

“ದೇಶದಲ್ಲಿ ಕೊರೋನಾ ಹೆಚ್ಚಲು ಮೋದಿ ರ‍್ಯಾಲಿಗಳು ಕಾರಣ” ಸಂಸದ ಡಿಕೆ ಸುರೇಶ್ ಕಿಡಿ

ದೇಶದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಲು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುತ್ತಿರುವ ರ್ಯಾಲಿಗಳೇ ಕಾರಣ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ರಾಮನಗರ ಘಟನೆ ಹಿನ್ನೆಲೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದ್ದಿಗಾರರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಕರ್ನಾಟಕದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾಂಗ್ರೆಸ್ ನಾಯಕರ ಪಾದಯಾತ್ರೆಯೇ ಕಾರಣ ಎಂಬ ಅರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ ಸುರೇಶ್ ಅವರು ತಿರುಗೇಟು ನೀಡಿದರು.

ಸುಧಾಕರ್ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್ “ಕಾಂಗ್ರೆಸ್ ಪಾದಯಾತ್ರೆಯಿಂದ ಕರ್ನಾಟಕದಲ್ಲಿ ಕೋವಿಡ್ ಕೇಸ್ ಗಳು ಹೆಚ್ಚಳವಾಗುತ್ತವೆ ಎಂದಾದರೆ ಭಾರತದಲ್ಲಿ ಕೊರೋನಾ ಸೋಂಕು ಉಲ್ಬಣಕ್ಕೆ ನರೇಂದ್ರ ಮೋದಿ ಅವರು ನಡೆಸುತ್ತಿರುವ ಚುನಾವಣಾ ರ್ಯಾಲಿಗಳೇ ಕಾರಣ” ಎಂದು ತಿರುಗೇಟು ನೀಡಿದರು. ಇದೆ ವೇಳೆ “ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿಗಳನ್ನು ನಿಲ್ಲಿಸಿದರೆ ನಾವು ಕೂಡ ಪಾದಯಾತ್ರೆಯನ್ನು ನಿಲ್ಲಿಸುತ್ತವೆ” ಎಂಬ ಮಾತನ್ನು ಕೂಡ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top