ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿ ಎಸ್.ಎಸ್. ರಾಜಮೌಳಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬಾಹುಬಲಿ ಎಂಬ ಮಹೋನ್ನತ ಸಿನಿಮಾದ ಮೂಲಕ ಭಾರತೀಯ ಸಿನಿಮಾರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ್ದ ವಿಚಾರ ಈಗ ಇತಿಹಾಸ. ಇಂಥ ರಾಜಮೌಳಿಯವರು ನಿರ್ದೇಶಿಸಿರುವ RRR ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ಜನವರಿ 07 ರಂದು RRR ಚಿತ್ರ ತೆರೆಕಾಣಬೇಕಿತ್ತು. ಆದರೆ ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.
RRR ಪ್ರೊಮೋಷನ್ ಗಾಗಿ ಮುಂಬೈಗೆ ಇಡೀ ಚಿತ್ರತಂಡ ತೆರಳಿತ್ತು. ಈ ವೇಳೆ ರಾಜಮೌಳಿ ಅವರ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ನಟ ಜೂ. NTR ಬಹಿರಂಗ ಪಡಿಸಿದ್ದಾರೆ. ಎಸ್‌ಎಸ್ ರಾಜಮೌಳಿ ಅವರು ತಮ್ಮ ವೃತ್ತಿ ಜೀವನದಲ್ಲಿ ಮಾಡಿರುವ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆದ ಚಿತ್ರಗಳೇ.. ಹೀಗೆ ದಾಖಲೆ ಬರೆದ ಸಿನಿಮಾಗಳಲ್ಲಿ 2012 ರಲ್ಲಿ ತೆರೆಕಂಡಿದ್ದ ಈಗ ಸಿನಿಮಾ ಕೂಡ ಒಂದು. ಕೊಲೆ ಆದ ಹೀರೋ ನೊಣದ ರೂಪದಲ್ಲಿ ಬಂದು ಸೇಡು ತೀರಿಸಿಕೊಳ್ಳುವ ಕತೆಯನ್ನು ಅದ್ಭುತವಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದರು ರಾಜಮೌಳಿ.’ಈಗ’ ಸಿನಿಮಾಕ್ಕಾಗಿ ರಾಜಮೌಳಿ ಅವರು ನೊಣಗಳ ಚಲನವಲನಗಳ ಬಗ್ಗೆ ಅಧ್ಯಯನ ನಡೆಸಿದ್ದರು ಎಂಬ ವಿಚಾರವನ್ನು ಜೂ.NTR ತಿಳಿಸಿದ್ದಾರೆ. ರಾಜಮೌಳಿ ನೊಣಗಳನ್ನು ಫ್ರಿಡ್ಜ್ನಲ್ಲಿಟ್ಟು ‘ಹೈಬರ್ನೇಟ್’ ಮಾಡುತ್ತಿದ್ದರು. ನಂತರ ಅವುಗಳ ಚಲನವಲನ, ದೇಹ ರಚನೆ ಮೊದಲಾದವುಗಳನ್ನು ಅಧ್ಯಯನ ಮಾಡುತ್ತಿದ್ದರು ಎಂದು ಜ್ಯೂ ಎನ್ಟಿಆರ್ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಫ್ರಿಡ್ಜ್ ಬಾಗಿಲು ತೆಗೆದರೆ ಆಹಾರಕ್ಕಿಂತ ಹೆಚ್ಚು ನೊಣಗಳೇ ಇರುತ್ತಿದ್ದವು ಎಂದು ನಗುತ್ತಾ ವಿವರಿಸಿದ್ದಾರೆ ಜ್ಯೂ.ಎನ್ಟಿಆರ್.
ಹೈಬರ್ನೇಷನ್ ಎಂದರೆ ತಣ್ಣನೆಯ ವಾತಾವರಣದಲ್ಲಿ ಆವರಿಸುವ ಗಾಢ ನಿದ್ದೆ ಎನ್ನಬಹುದು. ರಾಜಮೌಳಿ ನೊಣಗಳನ್ನು ಫ್ರಿಡ್ಜ್ನಲ್ಲಿಟ್ಟು ಅವುಗಳನ್ನು ಅಧ್ಯಯನ ಮಾಡಲು ಇದೇ ವಿಧಾನ ಅನುಸರಿಸಿದ್ದರು. ಜ್ಯೂ.ಎನ್ಟಿಆರ್ ಮುಂದುವರೆದು ಮಾತನಾಡುತ್ತಾ, ‘‘ಈಗ ಚಿತ್ರದಲ್ಲಿ ನೊಣ ಹಾರಾಡುವುದು ಹಾಗೂ ಅವುಗಳ ದೇಹ ರಚನೆ ಕುರಿತು ತಮ್ಮ ಸ್ಕ್ರಿಪ್ಟ್ ಸರಿಯಿದೆಯೇ ಎಂಬುದನ್ನು ಪರೀಕ್ಷಿಸಲು ರಾಜಮೌಳಿ ಆ ವಿಧಾನ ಅನುಸರಿಸಿದ್ದರು’’ ಎಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
