fbpx
ಸಮಾಚಾರ

2ನೇ ಟೆಸ್ಟ್ ಪಂದ್ಯದಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿಯಲು ಇದುವೇ ಅಸಲಿ ಕಾರಣ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಹೊರಗಿಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಂಡದ ನಾಯಕನ ಹಠಾತ್ ನಿರ್ಗಮನವು ‘ಕಿಂಗ್ ಕೊಹ್ಲಿ’ ಮತ್ತು ಬಿಸಿಸಿಐ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದರ ಸಂಕೇತವೇ ಎಂಬ ಪ್ರಶ್ನೆಯನ್ನು ಕೂಡ ಹುಟ್ಟುಹಾಕಿದೆ. ಆದರೆ ಈ ಆರೋಪವನ್ನು ಬಿಸಿಸಿಐ ಮೂಲಗಳು ತಳ್ಳಿಹಾಕಿವೆ.

ಕೊಹ್ಲಿ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲು ಮುಖ್ಯ ಕಾರಣ ಬೆನ್ನು ಮೂಳೆಯ ಸೆಳೆತ. ಹೌದು, ಬೆನ್ನುಮೂಳೆಯ ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಗೆ ಫಿಸಿಯೋ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಟೆಸ್ಟ್‌ಗೆ ಚೇತರಿಸಿಕೊಂಡು ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಂದಹಾಗೆ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾದ ‘ಫಿಟ್ನೆಸ್ ಫ್ರೀಕ್’ ಎಂದೇ ಖ್ಯಾತಿ., ಟೀಮ್ ಇಂಡಿಯಾಗೆ ಅವರು ಬಂದ ನಂತರ ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿ ವೇಗವನ್ನು ಪಡೆಯಿತು. ಇಂತಹ ಚಾಣಾಕ್ಷ ಆಟಗಾರನಿಗೆ ಏಕಾಏಕಿ ಬೆನ್ನು ನೋವು ಬಂದಿರುವುದು ಆರಂಭದಲ್ಲಿ ಅನುಮಾನವನ್ನು ಸೃಷ್ಟಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top