fbpx
ಸಮಾಚಾರ

ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಲು ಅಸಲಿ ಕಾರಣ ಏನೆಂದು ಬಹಿರಂಗಪಡಿಸಿದ ಎಬಿ ಡಿವಿಲಿಯರ್ಸ್

ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರ ಎಬಿ ಡಿ ವಿಲಿಯರ್ಸ್2018 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಹಾಗಿದ್ದರೂ ಐಪಿಎಲ್, ಪಿಎಸ್ಎಲ್ ಸೇರಿ ಕೆಲವು ದೇಶೀ ಟೂರ್ನಿಮೆಂಟ್ ಗಳಲ್ಲಿ ಭಾಗವಹಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದ್ದರು. ಆದರೆ ಕಳೆದ ನವೆಂಬರ್ ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳುವ ಮೂಲಕ ಕ್ರಿಕೆಟ್ ನಿಂದ ಸಂಪೂರ್ಣವಾಗಿ ಎಬಿ ಹಿಂದೆ ಸರಿದಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇದ್ದರೂ ಐಪಿಎಲ್ ನಲ್ಲಿ ಆರ್ಸಿಬಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡುತಿದ್ದ ಎಬಿಡಿ ಇದ್ದಕ್ಕಿದ್ದಂತೆ ವಿದಾಯ ಹೇಳಿದ್ದು ಯಾಕೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಸ್ವತಃ ಡಿ ವಿಲಿಯರ್ಸ್ ಅವರೇ ಹೇಳಿಕೊಂಡಿದ್ದಾರೆ. ಹಾಗಾದ್ರೆ ಎಬಿಡಿ ಹೇಳಿದ್ದೇನು? ಮುಂದೆ ಓದಿ

“ತಂಡಕ್ಕೋಸ್ಕರ ಉತ್ತಮ ಪ್ರದರ್ಶನ ತೋರಿದ ಹಾಗೂ ರನ್‌ ಗಳಿಸಿದ ಮೈದಾನದಲ್ಲಿ ನನ್ನನ್ನು ನಾನೇ ಕಂಡುಕೊಂಡೆ. ಒಂದು ಕಾಲದಲ್ಲಿ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ನನ್ನಿಂದ ಈಗ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ನಿವೃತ್ತಿ ಪ್ರಕಟಿಸುವ ನಿರ್ಧಾರ ದಿನದಿಂದ ದಿನಕ್ಕೆ ಗಟ್ಟಿಯಾಯಿತು, ಅಂತಿಮವಾಗಿ ಒಂದು ದಿನ ವಿದಾಯ ಘೋಷಿಸಿದೆ” ಎಂದು ತಿಳಿಸಿದ್ದಾರೆ.

“ಪ್ರತಿಯೊಂದು ರನ್‌, ತಮ್ಮ ಸಾಮರ್ಥ್ಯ ಹಾಗೂ ಕೌಶಲವನ್ನು ಮುಂದಕ್ಕೆ ತಳ್ಳುವ ವ್ಯಕ್ತಿ ನಾನಲ್ಲ. ಆಟವನ್ನು ಆನಂದಿಸುವ ನಿಟ್ಟಿನಲ್ಲಿ ನಾನು ಯಾವಾಗಲೂ ಆಡುತ್ತೇನೆ. ನನ್ನ ಕೌಶಲ್ಯ ಕೆಳಗಿಳಿಯುತ್ತಿದೆ ಎಂದು ಗೊತ್ತಾದ ಬಳಿಕ, ಆಟದಿಂದ ದೂರ ಉಳಿಯಲು ಇದು ಸಕಾಲ ಎಂದು ಭಾವಿಸಿದ್ದೇ, ಹಾಗಾಗಿ ಕ್ರಿಕೆಟ್ ಗೆ ವಿದಾಯ ಘೋಷಿಸಿದೆ” ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top