fbpx
ಸಮಾಚಾರ

ಸುದ್ದಿವಾಚಕ ಅಜಿತ್ ಹನುಮಕ್ಕನವರ್ ಗೆ ಹೃದಯಾಘಾತ

ತಮ್ಮ ಏಕಮುಖ ಆಲೋಚನೆಗಳ ಮೂಲಕವೇ ಬೆಂಬಲಿಗರು ಮತ್ತು ವಿರೋಧಿಗಳನ್ನು ಸಮನಾಗಿ ಹೊಂದಿರುವ ಕನ್ನಡದ ಖಾಸಗಿ ಸುದ್ದಿವಾಹಿನಿಯ ವಾರ್ತಾವಾಚಕ ಅಜಿತ್ ಹನುಮಕ್ಕರ್ ಅವರಿಗೆ ಹೃದಯಾಘಾತವಾಗಿದೆ ಎಂದು ಸುದ್ದಿಯಾಗಿದೆ. ಈ ಬಗ್ಗೆ ಸ್ಥಳೀಯ ವೆಬ್ ಪೋರ್ಟಲ್ ಒಂದು ವರದಿ ಮಾಡಿದೆ.

ವರದಿಯ ಪ್ರಕಾರ “ತಮ್ಮ ಮನೆಯಿಂದ ಕಾರಿನಲ್ಲಿ ಪ್ರಯಾಣಿಸುವಾಗ ಹನುಮಕ್ಕನವರ್ ಗೆ ಹೃದಯಾಘಾತವಾಗಿದೆ.ಈ ಕೂಡಲೇ ಅವರು ಸದಾಶಿವನಗರದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ” ಎನ್ನಲಾಗಿದೆ.
ಸಧ್ಯ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಜಿತ್ ಅವರಿಗೆ ವೈದ್ಯರು ಒಂದಷ್ಟು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

“ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಅಜಿತ್ ಗೆ ಮೂರು ಸ್ಟಂಟ್ ಗಳನ್ನು ಅಳವಡಿಸಿದ್ದಾರೆ ಎನ್ನಲಾಗಿದ್ದು ಸ್ವಲ್ಪ ಹೊತ್ತು ಐಸಿಯುನಲ್ಲಿದ್ದ ಅವರನ್ನು ನಂತರ ವಾರ್ಡ್ ಗೆ ಶಿಫ್ಟ್ ಮಾಡಲಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.

ಅದೇನೇ ಇರಲಿ ಅಜಿತ್ ಹನುಮಕ್ಕನವರ್ ಅವರು ಬಹುಬೇಗ ಚೇತರಿಸಿಕೊಂಡು ಎಂದಿನಂತೆ ಕಾರ್ಯ ಮುಂದುವರೆಸಲಿ ಎಂದು ನಮ್ಮ ತಂಡ ಅವರಿಗೆ ಹಾರೈಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top