fbpx
ಸಮಾಚಾರ

ಕತ್ರಿನಾ ಕೈಫ್ ಧರಿಸಿರೋ ಮಂಗಳಸೂತ್ರದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಅಂತೂ ಇಂತೂ ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು  ನಟಿ ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಇವರ ಮದುವೆ ವಿವಾಹ ರಾಯಲ್ ಆಗಿ ಹಾಗು ಅಷ್ಟೇ ಅದ್ಧೂರಿಯಾಗಿ ಎಲ್ಲರ ಕಣ್ಣು ಕುಕ್ಕುವಂತೆ ನೆರವೇರಿತ್ತು. ಆದರೆ ಮದುವೆಯಾದ ಹಲವು ದಿನಗಳ ನಂತರ ಈ ಜೋಡಿ ನಿರಂತರವಾಗಿ ಸೋಶಿಯಲ್ ಮೀಡಿಯಾ ದಲ್ಲಿ ಸುದ್ದಿ ಮಾಡುತ್ತಿದಾರೆ. ನಂತರ ಜುಹುದಲ್ಲಿನ ತಮ್ಮ ಹೊಸ ಮನೆಗೆ ಕಾಲಿಟ್ಟರು. ತಮ್ಮ ಹೊಸ ಮನೆಯಿಂದ ಇತ್ತೀಚಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕತ್ರಿನಾ ಕೈಫ್ ಅವರ ತಮ್ಮ  ಹೊಸ ಮನೆಯ ಸೋಫಾ ಮೇಲೆ ಕುಳಿತು ಸಿಂಪಲ್ ಮೇಕ್ಅಪ್ ಮಾಡಿಕೊಂಡು ಪೋಸ್ ಕೊಟ್ಟಿದಾರೆ. ಹೀಗೆ ಸೋಫಾ ಮೇಲೆ ಕುಳಿತಿರುವ ಫೋಟೋಗಳನ್ನ ಕತ್ರಿನಾ ಕೈಫ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಆ ಫೋಟೋದಲ್ಲಿ ಅವರ ಕೊರಳಲ್ಲಿ ಕಾಣುತ್ತಿರುವ ವಜ್ರದ ಮಂಗಳ ಸೂತ್ರ ಎಲ್ಲರ ಗಮನ ಸೆಳೆಯುತ್ತಿದೆ.,

ಈ ಮಂಗಳಸೂತ್ರದ ವಿಶೇಷತೆ ಏನೆಂದರೆ ಅದನ್ನು ಚಿನ್ನದ ಪ್ಲೇಟ್​ ಮೇಲೆ ಇರಿಸಲಾದ ಎರಡು ಸಣ್ಣ ವಜ್ರದ ಹರಳು ಮತ್ತು ಕಪ್ಪು ಮಣಿಗಳಿಂದ ಡಿಸೈನ್​ ಮಾಡಲಾಗಿದೆ.. ಮಂಗಳ ಸೂತ್ರಕ್ಕೆ ಚಿನ್ನದ ಸರವನ್ನು ಪೋಣಿಸಲಾಗಿದೆ. ಇದರ ಅಂದಾಜು ಬೆಲೆ 5 ಲಕ್ಷ ರೂ. ಎಂದು ಹೇಳಲಾಗುತ್ತಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾರಣಗಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಈ ವಿಶೇಷ ಮಂಗಳ ಸೂತ್ರಕ್ಕೆ ಮಿಲಿಯನ್ ಗಟ್ಟಲೆ ಲೈಕ್ಸ್ ಕೊಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top