fbpx
ಸಮಾಚಾರ

ಒಬ್ಬ ಮಹಿಳೆ ತನ್ನ ತೋಳಲ್ಲಿ ಸಿಂಹವನ್ನು ಎತ್ತಿಕೊಂಡು ನಡೆದ ವಿಡಿಯೋ ವೈರಲ್ ಆಗಿದೆ.

ನಾವು ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಬೆಕ್ಕು, ನಾಯಿ, ಹಸು  ಪ್ರಾಣಿಗಳನ್ನು ಸಾಕುತ್ತೇವೆ. ಅವು ನಮ್ಮ  ಮನೆಯ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ದಿನ ನಮಗೆ  ತಲೆ ನೋವು ಕೊಡುತ್ತದೆ. ಆದರೆ ಕುವೈತ್ ನಗರದ ದಕ್ಷಿಣ ಪ್ರದೇಶದಲ್ಲಿ  ಒಬ್ಬ ಮಹಿಳೆ  ರಾತ್ರಿ  ಒಂದು ಸಿಂಹದ ಮರಿಯನ್ನು  ತನ್ನ ತೋಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾರಣಗಲ್ಲಿ ವೈರಲ್ ಆಗಿದೆ.

ಅಷ್ಟಕ್ಕೂ ಅವಳು  ಸಿಂಹವನ್ನು ತೋಳಲ್ಲಿ ಹೊತ್ತುಕೊಂಡು ರಾತ್ರಿ  ರಸ್ತೆಯಲ್ಲಿ ಯಾಕೆ ನಡೆದಳು ಅಂತೀರಾ? ಒಬ್ಬ ಮಹಿಳೆ ತನ್ನ ಮನೆಯಲ್ಲಿ  ಹೆಣ್ಣು ಸಿಂಹದ ಮರಿಯೊಂದನ್ನು ಸಾಕಿದ್ದಳು. ಆ ಸಿಂಹ ಮನೆಯಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ಓರಾಡುತ್ತಿತು ಅದನ್ನು ನೋಡಿದ ಜನರು ಗಾಬರಿಗೊಂಡು ಕೆಲವರು  ಬೆಚ್ಚಿ  ಬಿದ್ದಿದಾರೆ. ಮನೆಯಿಂದ ಆಚೇ ಬರದೇ ಭಯದಿಂದ ಒಳಗೆ ಇದ್ದರು. ಆ ವಿಡಿಯೋವನ್ನು ಒಬ್ಬ ವ್ಯೆಕ್ತಿ ತಮ್ಮ ಟ್ವಿಟ್ಟರ್‌ನಲ್ಲಿ ಅಕೌಂಟ್ ನಲ್ಲಿ  ಹಂಚಿಕೊಂಡಿದ್ದಾರೆ.

ಆಗ ಆಕೆ ತಪ್ಪಿಸಿಕೊಂಡ ಸಿಂಹವನ್ನು ತನ್ನ ತೋಳಲ್ಲಿ ಹೊತ್ತುಕೊಂಡು ಹೋಗುತ್ತಿರುವಾಗ  ಕೆಳಗೆ ಹಾರಲು ಸಿಂಹವು ಒದ್ದಾಡುತ್ತಿತು ಆದರೂ ಆಕೆ ಹೇಗೋ  ಮಾಡಿ  ಅದನ್ನು ಮನೆಗೆ ಕರೆದುಕೊಂಡು ಹೋದಳು. ಭಯಭೀತಗೊಳಿಸಿದ ಆ ಸಿಂಹದ ಮರಿಯನ್ನು ಆ ಮಹಿಳೆ ತನ್ನ ಮನೆಗೆ ವಾಪಾಸ್ ತಂದಿದ್ದಾಳೆ. ಈ ಘಟನೆಯ ವಿಡಿಯೋ, ಅಲ್ಲಿ ಇರುವ ಜನರು  ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top