fbpx
ಸಮಾಚಾರ

ತಾವು ಬಳಸುತ್ತಿದ್ದ ಫೋನ್ ಗೆ ಪುನೀತ್ ಇಟ್ಟಿದ್ದ ರಿಂಗ್ ಟೋನ್ ಯಾವುದು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಎರಡು ತಿಂಗಳಿಗಿಂತ ಜಾಸ್ತಿ ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಇದುವರೆಗೂ ಕರ್ನಾಟಕ ಜನರಿಗೆ ಸಾಧ್ಯವಾಗುತ್ತಿಲ್ಲ.. ಅಪ್ಪು ಆಗಲಿ 2 ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.. ಪ್ರತಿದಿನ ಪ್ರತಿಕ್ಷಣ ಅಪ್ಪು ಅಪ್ಪು ಅಂತ ಕನವರಿಸುತ್ತಿದ್ದಾರೆ.

ಪುನೀತ್ ಕೇವಲ ಒಬ್ಬ ಉತ್ತಮ ನಟ ಮಾತ್ರವಾಗಿರಲಿಲ್ಲ, ಒಬ್ಬ ಗಾಯಕನಾಗಿ ಕೂಡ ಗುರುತಿಸಿಕೊಂಡಿದ್ದರು. ಹೊಸಬರ ಚಿತ್ರಕ್ಕೆ ಸೇರಿದಂತೆ ಇತರೆ ಹೀರೋಗಳ ಚಿತ್ರಗಳಿಗೂ ಪುನೀತ್ ಹಾಡು ಹಾಡಿಕೊಡುತ್ತಿದ್ದರು. ಸಂಗೀತ ಪ್ರೇಮಿಯಾಗಿದ್ದ ಅಪ್ಪು ತಮ್ಮ ಮೊಬೈಲ್ ಗೆ ವಿಶಿಷ್ಟ ರಿಂಗ್ ಟೋನ್ ಅನ್ನು ಇಟ್ಟಿದ್ದರಂತೆ. ಅಪ್ಪು ತಮ್ಮ ಮೊಬೈಲ್ ಗೆ ಇಟ್ಟಿದ್ದ ರಿಂಗ್ ಟೋನ್ ಬಗ್ಗೆ ಯುವ ನಟ ದಾನಿಶ್ ಶೇಠ್ ಹೇಳಿದ್ದಾರೆ.

2015ರ ‘ನಾರ್ಕೋಸ್’ ವೆಬ್ ಸರಣಿ ಪುನೀತ್ ಅವರಿಗೆ ಬಹಳ ಇಷ್ಟವಾಗಿತ್ತು. ಹಾಗಾಗಿ ‘ನಾರ್ಕೊಸ್’ ವೆಬ್ ಸರಣಿಯ ಥೀಮ್ ಸಂಗೀತವನ್ನು ತಮ್ಮ ಮೊಬೈಲ್‌ನ ರಿಂಗ್ ಟೋನ್ ಆಗಿ ಇರಿಸಿಕೊಂಡಿದ್ದರು ಎಂದು ಅವರ ಆಪ್ತರಲ್ಲೊಬ್ಬರಾಗಿದ್ದ ದಾನಿಶ್ ಸೇಠ್ ಹೇಳಿದ್ದಾರೆ.

”ಪುನೀತ್ ಅವರು ವಿಶ್ವ ಸಿನಿಮಾ, ವೆಬ್ ಸರಣಿಗಳ ಬಗ್ಗೆ ತುಂಬಾನೇ ಆಸಕ್ತಿ ಹೊಂದಿದ್ದರು., ‘ನಾರ್ಕೊಸ್’ ರೀತಿಯ ವೆಬ್ ಸೀರಿಸ್ ಗಳನ್ನ ನಮ್ಮಲ್ಲೂ ಮಾಡಬೇಕು ಎಂದು ಹೇಳುತ್ತಿದ್ದರು. ಗುಣಮಟ್ಟದ ಕಂಟೆಂಟ್ ನೀಡುವ ಬಗ್ಗೆ ಪುನೀತ್ ಅವರು ಸದಾ ನಿರತರಾಗಿರುತ್ತಿದ್ದರು” ಎಂದು ದಾನಿಶ್ ಸೇಠ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top