fbpx
ಸಮಾಚಾರ

ಒಬ್ಬರ ಸಾವನ್ನು ಸಂಭ್ರಮಿಸುವುದು ಖಂಡಿತ ಸರಿಯಲ್ಲ

ತಮ್ಮ ಏಕಮುಖ ಆಲೋಚನೆಗಳ ಮೂಲಕವೇ ಬೆಂಬಲಿಗರು ಮತ್ತು ವಿರೋಧಿಗಳನ್ನು ಸಮನಾಗಿ ಹೊಂದಿರುವವರು ಕನ್ನಡದ ಖಾಸಗಿ ಸುದ್ದಿವಾಹಿನಿಯ ವಾರ್ತಾವಾಚಕ ಅಜಿತ್ ಹನುಮಕ್ಕರ್. ಸೈದ್ಧಾಂತಿಕ ವಿರೋಧದ ಕಾರಣ ಅಜಿತ್ ಅವರು ಒಂದು ವರ್ಗದ ವಿರೋಧವನ್ನು ಕಟ್ಟಿಕೊಂಡಿರುವ ವಿಚಾರ ಅಷ್ಟಾಗಿ ಗುಟ್ಟಾಗಿ ಉಳಿದಿಲ್ಲ.. ಅವರು ಒಂದು ಪಕ್ಷದ ವಕ್ತಾರರಂತೆ ಮಾತನಾಡುತ್ತಾರೆ, ಒಂದು ಸಮುದಾಯದವರನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಾರೆ ಎಂಬ ಇತ್ಯಾದಿ ಆರೋಪಗಳು ಅವರ ಮೇಲಿವೆ.

ಇಂಥಾ ಅಜಿತ್ ಹನುಮಕ್ಕನವರ್ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದರು. ತಮ್ಮ ಮನೆಯಿಂದ ಕಾರಿನಲ್ಲಿ ಪ್ರಯಾಣಿಸುವಾಗ ಹನುಮಕ್ಕನವರ್ ಗೆ ಹೃದಯಾಘಾತವಾಗಿತ್ತು. ಈ ಕೂಡಲೇ ಅವರು ಸದಾಶಿವನಗರದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದರು. ಸ್ವಲ್ಪ ಹೊತ್ತು ಐಸಿಯುನಲ್ಲಿದ್ದ ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗಿ ಮನೆ ಸೇರಿದ್ದಾರೆ.

ಪ್ರಪಂಚದಲ್ಲಿ ಎಷ್ಟೇ ಪ್ರೊಫೆಷನ್ ಗಳಿದ್ದರು ಜರ್ನಲಿಸ್ಟ್ ಗಳಿಗೆ ಇರುವ ಪವರ್ ಬೇರೆ ಪ್ರೊಫೆಷನ್ ಗಳಿಗೆ ಇರುವುದು ಕಡಿಮೆ. ಬರವಣಿಗೆ ಮೂಲಕ ಒಬ್ಬ ವ್ಯಕ್ತಿಗೆ ಹೆಸರನ್ನು ತಂದುಕೊಡಬಹುದು ಆದೇ ಬರವಣಿಗೆ ಮೂಲಕ ಒಬ್ಬ ವ್ಯಕ್ತಿಯ ಜೀವನಕ್ಕೆ ಬೇರೆ ರೀತಿಯ ಎಫೆಕ್ಟ್ ಕೂಡ ಆಗಬಹುದು. ಇಂತಹ ಪವರ್ ಇರುವುದು ಜರ್ನಲಿಸ್ಟ್ ಗಳಿಗೆ ಮಾತ್ರ. ಆದರೆ ಅಜಿತ್ ಅವರ ಸಿದ್ಧಾಂತಗಳು ನಮಗೆ ಇಷ್ಟವಿಲ್ಲದಿದ್ದರೂ ಸರಿ ಅವರ ವಿಚಾರಗಳನ್ನು ವಿರೋಧಿಸೋಣ ಅದು ಸರಿ ಅವರ ಸಾವನ್ನು ಬಯಸುವುದು ಖಂಡಿತ ಸರಿಯಲ್ಲ. ಯಾವುದೇ ಕಾರಣಕ್ಕೂ ದುಖಃವನ್ನು ಸಂಭ್ರಮಿಸುವುದು ಖಂಡಿತ ಸರಿಯಲ್ಲ ನಾವು ನಮ್ಮಂತ ಇರಬೇಕು ಅವರಂತೆ ಮನುಷ್ಯತ್ವ ಕಳೆದುಕೊಂಡು ಮೃಗಗಳಾಗುವುದು ಬೇಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top