ಇತ್ತೀಚೆಗಷ್ಟೆ ಎಲ್ಲರ ವಾಟ್ಸಪ್ ಸ್ಟೇಟಸ್ಗಳಲ್ಲಿ ಸಣ್ಣ ಮಗುವೊಂದು ಮೆಣಸಿನ ಕಾಯಿ ತಿನ್ನುವ ವಿಡಿಯೋವೊಂದು ಹರಿದಾಡಿತ್ತು. ಇದೀಗ ಆ ವಿಡಿಯೋ ನಿಜವಾದದಲ್ಲ ಎಂದು ಫ್ಯಾಕ್ಟ್ ಚೆಕ್ ಹೊರ ಹಾಕಿದೆ. ಏನಿದು ಘಟನೆ? ಕಪ್ಪು ಬಿಳುಪು ಬಣ್ಣದಲ್ಲಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹುಡುಗಿಯೊಬ್ಬಳಿಗೆ ಮೆಣಸಿನಕಾಯಿ ನೀಡುತ್ತಾನೆ. ಮೆಣಸಿನಕಾಯಿ ತೆಗೆದುಕೊಂಡ ಹುಡುಗಿ ನೋಡ ನೋಡುತ್ತಿದ್ದಂತೆಯೇ ತಿನ್ನುತ್ತಾಳೆ.
ಕೂಡಲೆ ಆ ವ್ಯಕ್ತಿ ಆಕೆಗೆ ಹತ್ತು ರುಪಾಯಿ ನೀಡುತ್ತಾನೆ. ಆಕೆಯ ಕಣ್ಣಿಂದ ಕಣ್ಣೀರು ಹರಿಯುತ್ತದೆ. ಸಹಾಯ ಮಾಡುವ ಮನಸ್ಸಿದ್ದರೆ ಹಾಗೆ ಹತ್ತು ರುಪಾಯಿ ನೀಡಬಹುದಿತ್ತು, ಹತ್ತು ರುಪಾಯಿ ಆಸೆಗೆ ಮೆಣಸು ತಿನ್ನಿಸಿದ ವಿಡಿಯೋ ನಿಜವೇ ಅಲ್ವಂತೆ! ಅದಕ್ಕಾಗಿ ಒಂದು ಮುಗ್ದ ಮಗುವಿಗೆ ಮೆಣಸಿನಕಾಯಿ ತಿನ್ನಿಸುವ ಅಗತ್ಯವೇನಿತ್ತು? ಕಟುಕ ಸಮಾಜ, ನೋವಲ್ಲೂ ಖುಷಿಯಿದೆ ಅಂತೆಲ್ಲಾ ಸಾಲುಗಳನ್ನು ಬರೆದು ನೆಟ್ಟಿಗರು ಈ ವಿಡಿಯೋ ಹಂಚಿಕೊಂಡಿದ್ದರು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಾಲಕಿಯ ಕುಟುಂಬದವರು ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಬಾಲಕಿ ಬಿಕ್ಷoಕಿಯಲ್ಲ, ಆಕೆ ಬಿಕ್ಷೆಗಾಗಿ ಈ ರೀತಿ ಮಾಡಿದ್ದಲ್ಲ, ಆಕೆ ತನ್ನ ಚಿಕ್ಕಪ್ಪನೊಂದಿಗೆ ಆಟವಾಡುತ್ತಿದ್ದಳು ಎನ್ನುವ ವಿಚಾರವನ್ನು ಹೊರಹಾಕಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಬಂದಿದ್ದನ್ನು ತಕ್ಷಣಕ್ಕೆ ನಂಬಬಾರದು ಎಂಬುದನ್ನು ಈ ವಿಡಿಯೋ ನಿರೂಪಿಸಿದ್ದು ಅದರ ಆಳ-ಅಗಲವನ್ನು ಅರಿತ ಬಳಿಕವಷ್ಟೇ ವಿಡಿಯೋ ಶೇರ್ ಮಾಡಬೇಕೆಂಬುದನ್ನು ಈ ವಿಡಿಯೋ ಸ್ಪಷ್ಟಪಡಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
