fbpx
ಸಮಾಚಾರ

ಸದ್ಯದಲ್ಲೇ ಶುರುವಾಗಲಿದೆ ಬಿಗ್ ಬಾಸ್ 9ನೇ ಸೀಸನ್: ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಎಂಬ ಹೆಸರು ಗಿಟ್ಟಿಸಿರುವ ಬಿಗ್’ಬಾಸ್ ಕಾರ್ಯಕ್ರಮದ ಎಂಟನೇ ಸೀಸನ್ ಮುಗಿದು ಇನ್ನೂ ಏಳೆಂಟು ತಿಂಗಳುಗಳು ಸವೆದಿದೆ. ಹೀಗಿದ್ದರೂ ಅದಾಗಲೇ ಮತ್ತೊಂದು ಸೀಸನ್ನಿನ ಆರಂಭದ ಬಗ್ಗೆ ಸಾಕಷ್ಟು ವಿಚಾರಗಳು ಬಹಿರಂಗಗೊಳ್ಳುತ್ತಿವೆ.

ಒಂದಷ್ಟು ಮನರಂಜನೆಯ ಜೊತೆಗೆ ಸ್ಪರ್ಧಿಗಳ ನಡುವಿನ ರಂಪಾಟ, ಸಣ್ಣತನ, ಕಿರಿಕ್ಕುಗಳೇ ಜೀವಾಳವಾಗಿರೋ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜನರಿಗೆ ತಕರಾರಿದೆ. ಇದು ನಮ್ಮ ಕನ್ನಡ ನೆಲಕ್ಕೆ ಒಗ್ಗದ ಕಾನ್ಸೆಪ್ಟ್ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿರುತ್ತದೆ. ಇಂಥ ನೂರೆಂಟು ತಾತ್ಸಾರದ ಮಾತುಗಳ ನಡುವೆಯೂ ಬರೋಬ್ಬರಿ ಎಂಟು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಇದೀಗ 9ನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡುತ್ತಿದೆ..

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ 9ನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ.. ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಮಾರ್ಚ್ ವೇಳೆಗೆ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡೋದಂತೂ ಕನ್ಫರ್ಮ್ ಅಂತೇ. ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್‍ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top