fbpx
ಸಮಾಚಾರ

“ನಮ್ಮ ತಂದೆ ತೀರಿಕೊಂಡ್ರು” ಹುಚ್ಚ ವೆಂಕಟ್ ಕಣ್ಣೀರು

ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ನಟ ಹುಚ್ಚಾ ವೆಂಕಟ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹಾಗಂತ ಈ ಬಾರಿ ಯಾರ ಮೇಲೋ ಹಲ್ಲೆ ಮಾಡಿ, ಯಾವುದೋ ರಂಖಲು ಮಾಡಿಕೊಂಡು ಅರಚಾಡುತ್ತಾ ಮಾಧ್ಯಮದವರನ್ನು ಭೇಟಿಯಾಗಿಲ್ಲ. ಒಳ್ಳೆ ಬಟ್ಟೆ ಹಾಕೊಂಡು ಡೀಸೆಂಟ್ ವ್ಯಕ್ತಿಯಂತೆ ಮಾದ್ಯಮಮಿತ್ರ ಬಳಿ ಬಂದು ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಇಷ್ಟು ದಿನ ಕಾಣೆಯಾಗಿದ್ದ ವೆಂಕಟ್ ಇಂದು ದಿಢೀರ್ ಅಂತ ಮಾಧ್ಯಮಗಳ ಮುಂದೆ ಬಂದು ತಮ್ಮ ವಯಕ್ತಿಕ ವಿಚಾರಗಳ ಬಗ್ಗೆ ಕೆಲವೊಂದು ವಿಚಾರಗಳನ್ನ ಹಂಚಿಕೊಂಡರು. ಇದೆ ವೇಳೆ ಇತ್ತೀಚಿಗೆ ತಮ್ಮ ತಂದೆ ಕೂಡ ನಿಧನ ಹೊಂದಿದರು ಎಂಬ ವಿಚಾರ ಹೇಳುತ್ತಾರೆ ಭಾವುಕರಾದರು ಹುಚ್ಚ ವೆಂಕಟ್

“ನಾನು ಕೋಪ ಕಡಿಮೆ ಮಾಡಿಕೊಳ್ಳುತ್ತೀನಿ. ಇನ್ನು ಮುಂದೆ ಜನರ ಪ್ರೀತಿ ಗಳಿಸುತ್ತೀನಿ. ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿಬಿಟ್ಟಿದ್ದೀನಿ. ನಾನು ಯಾವ ಕಾರಣಕ್ಕೂ ಮದುವೆಯಾಗುವುದಿಲ್ಲ, ಭವಿಷ್ಯದಲ್ಲಿ ಸಿನಿಮಾ ಮಾಡುತ್ತೇನೆ. ಈಗ ತಿಕ್ಲ ಹುಚ್ಚ ವೆಂಕಟ್ ಅಂತ ಸಿನಿಮಾವನ್ನು ಮಾಡುತ್ತೀನಿ.” ಎಂದು ಹುಚ್ಚ ವೆಂಕಟ್ ಹೇಳಿದರು.

ಹಾಗೆಯೆ, “ಯಾರಾದರೂ ತಮ್ಮ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಿದರೆ ನಟಿಸುತ್ತೇವೆ, ಶಾರ್ಟ್ ಫಿಲಂ ನಲ್ಲಿ ಅವಕಾಶ ನೀಡಿದರೂ ನಟಿಸುತ್ತೇನೆ. ಕಿರುತೆರೆ ಶೋಗಳಲ್ಲಿ ನನ್ನನ್ನು ಕರೆದರೆ ಹೋಗುತ್ತೇನೆ. ಇತ್ತೀಚಿಗೆ ನನ್ನ ತಂದೆ ಕೂಡ ತೀರಿ ಹೋದರು. ನಾನು ಈಗ ತುಂಬಾ ನೋವಿನಲ್ಲಿ ಇದ್ದೇನೆ” ಎಂದು ಹುಚ್ಚ ವೆಂಕಟ್ ವಿನಮ್ರವಾಗಿ ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top