fbpx
ಸಮಾಚಾರ

ಸ್ಟಾರ್ ನಟನ ಜೊತೆ ಲಿವಿಂಗ್ ರಿಲೇಷನ್ ಶಿಪ್: ಸದ್ಯದಲ್ಲಿ ನಟಿ ನಿಧಿ ಅಗರ್ವಾಲ್ ಮದುವೆ?

ಚಿತ್ರರಂಗದ ಬಹುತೇಕ ನಟಿಯರು ಚಿತ್ರಕ್ಕಿಂತಲೂ ಮದುವೆ ವಿಚಾರ ಮತ್ತು ಅಫೇರುಗಳ ಮೂಲಕವೇ ಸದ್ದು ಮಾಡೋದೇ ಹೆಚ್ಚು. ಸದ್ಯ ದಕ್ಷಿಣ ಭಾರತದ ಬಹುಬೇಡಿಕೆಯಲ್ಲಿರೋ ನಟಿ ನಿಧಿ ಅಗರವಾಲ್ ಅವರನ್ನ ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ? ಸಿನಿಮಾ ಮಂದಿಯ ಮದುವೆ, ಅಫೇರು ವಿಚಾರಗಳಲ್ಲಿ ಪದೇ ಪದೇ ಅಂತೆಕಂತೆ ನ್ಯೂಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಪ್ರಿಯ ಬಾಯಿಯ ತುದಿಯಿಂದ ಹರಡುತ್ತಿರುತ್ತವೇ. ಇಂಥ ಗಾಸಿಪ್ ಪ್ರಿಯರಿಗೆ ಇದೀಗ ಆಹಾರವಾಗಿರುವವರು ಸೌತ್ ಹೀರೋಯಿನ್ ನಿಧಿ ಅಗರವಾಲ್

 

 

ಅನೇಕ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಾಯಕಿ ನಿಧಿ ಅಗರ್ವಾಲ್​, ಕಾಲಿವುಡ್​ ನಟ ಸಿಂಬು ಜೊತೆ ಲಿವ್​ ಇನ್​ ರೀಲೆಷನ್​ ಶಿಪ್​ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗುತ್ತಾರೆ ಎಂಬ ಮಾಹಿತಿ ಕೂಡ ಸಿಕ್ಕಿದೆ.

ಆದರೆ, ಇದನ್ನು ಇವರು ಖಚಿತಪಡಿಸಿಲ್ಲ. ಕೆಲವು ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದೇ ಈ ಸುದ್ದಿ ಹರಿದಾಡಲು ಕಾರಣ ಎನ್ನಲಾಗಿದೆ. ಈಗ ಇಬ್ಬರೂ ಸದ್ಯದಲ್ಲೇ ಮದುವೆ ಆಗುತ್ತಿದ್ದಾರೆ ಎನ್ನುವ ವದಂತಿ ಕೂಡ ಹರಿದಾಡಿದೆ. 2022ರ ಆರಂಭದಲ್ಲೇ ಸ್ಟಾರ್​ ಜೋಡಿ ಮದುವೆ ನಡೆಯಲಿದೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಜೋರಾಗಿದೆ.

ಇದೆಲ್ಲಾ ಸುಳ್ಳು:
ಇನ್ನೊಂದೆಡೆ ಈ ಸುದ್ದಿ ಶುದ್ಧ ಸುಳ್ಳು ಎಂದು ನಟಿ ನಿಧಿ ಆಪ್ತರ ವಲಯ ಹೇಳಿದೆ.. ‘ಈ ಸುದ್ದಿ ಹೇಗೆ ಪ್ರಾರಂಭವಾಯಿತು ಎಂದು ನಮಗೆ ತಿಳಿದಿಲ್ಲ. ಆದರೆ ಇದರಲ್ಲಿ ಯಾವುದೇ ಸತ್ಯವಿಲ್ಲ. ‘ಈಶ್ವರನ್’ ಚಿತ್ರದಿಂದ ಸಿಂಬು ಮತ್ತು ನಿಧಿ ಪರಸ್ಪರ ಪರಿಚಯ ಆಗಿದೆ. ಅಷ್ಟೇ. ಅದನ್ನು ಬಿಟ್ಟು ಬೇರೇನು ಇಲ್ಲ’ ಎಂದು ನಿಧಿ ಆಪ್ತರು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top