fbpx
ಸಮಾಚಾರ

ಐಪಿಎಲ್ ಪ್ರಯೋಜಕತ್ವದಿಂದ ಹಿಂದೆ ಸರಿದ ವಿವೋ: ಐಪಿಎಲ್ ಇನ್ಮುಂದೆ TATA IPL

ಪ್ರಪಂಚದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಟಿ20 ಲೀಗ್ ಎಂದೇ ಖ್ಯಾತಿಯಾಗಿರುವ ಐಪಿಎಲ್ ಮುಂದಿನ ಆವೃತ್ತಿಗೆ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಇನ್ನೇನು ತಿಂಗಳೊಪ್ಪತ್ತಿನಲ್ಲಿ ಐಪಿಎಲ್ ಮುಂದಿನ ಆವೃತ್ತಿಯ ಮೆಗಾ ಹರಾಜು ಕೂಡ ನಡೆಯಲಿದೆ.. ಈ ಮದ್ಯೆ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವ ಬದಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಮೊಬೈಲ್ ಕಂಪನಿ ‘ವಿವೋ’ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕರಾಗಿ ಹಿಂದೆ ಸರಿದಿದ್ದು ಈಗ ಆ ಜಾಗಕ್ಕೆ ಟಾಟಾ ಗ್ರೂಪ್ ಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ತಿಳಿಸಿದೆ. ಈ ಸಂಬಂಧ ಇಂದು ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ, ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಟಾಟಾ ಗ್ರೂಪ್ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿರುವ ಬಗ್ಗೆ ದೃಢಪಡಿಸಿದ್ದಾರೆ. ಟಾಟಾ ಗ್ರೂಪ್ 2022 ಮತ್ತು 2023 ರ ಋತುಗಳಿಗೆ ಶೀರ್ಷಿಕೆ ಪ್ರಾಯೋಜಕರಾಗಿ ಇರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2018ರಲ್ಲಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ‘ವಿವೋ’ ಪಡೆದುಕೊಂಡಿತ್ತು. ಆದರೆ 2020ರಲ್ಲಿ ಭಾರತ-ಚೀನಾ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಡ್ರೀಮ್ 11ಕ್ಕೆ ಹಕ್ಕುಗಳನ್ನು ಒಂದು ವರ್ಷ ವರ್ಗಾಯಿಸಿಲಾಗಿತ್ತು. ಬಳಿಕ ವೀವೋ ಮತ್ತೆ 2021ರಲ್ಲಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು.. ಈಗ ಐಪಿಎಲ್ ಪ್ರಯೋಜಕತ್ವದಿಂದ ವಿವೋ ಹಿಂದೆ ಸರಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top