fbpx
ಸಮಾಚಾರ

ಪಾದಯಾತ್ರೆಯಲ್ಲಿ ನಲಪಾಡ್ ಕಾಲರ್ ಹಿಡಿದು ತಳ್ಳಿದ ಡಿಕೆ ಸುರೇಶ್: ನಲಪಾಡ್ ಕೊಟ್ಟ ಸ್ಪಷ್ಟನೆ ಏನು?

ಮೇಕೆದಾಟು ಯೋಜನೆ ಆರಂಭಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಕಾರ್ಯಕ್ರಮ ಕೊರೋನಾ ಅಬ್ಬರದ ನಡೆವೆಯೂ ಭರದಿಂದ ಸಾಗುತ್ತಿದೆ. ಕಳೆದ ಭಾನುವಾರ ಆರಂಭಗೊದ ಈ ಪಾದಯಾತ್ರೆ ಸದ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಕಾಂಗ್ರೆಸ್ ನಾಯಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾದಯಾತ್ರೆ ನಡೆಸುತ್ತಿದ್ದಾರೆ.

ನೆನ್ನೆ (ಮಂಗಳವಾರ) ಮೇಕೆದಾಟು ಪಾದಯಾತ್ರೆಯಲ್ಲಿ ಸಂಸದ ಡಿ.ಕೆ.ಸುರೇಶ್​ ಅವರು ರಾಜ್ಯ ಯುವ ಕಾಂಗ್ರೆಸ್​ ಘಟಕದ ಕಾರ್ಯಾಧ್ಯಕ್ಷ ನಲಪಾಡ್​ ಹ್ಯಾರಿಸ್​ ಅವರ ಕೊರಳ ಪಟ್ಟಿ ಹಿಡಿದು ಬೈಯುತ್ತಲೇ ದೂರ ತಳ್ಳಿದ ಘಟನೆ ನಡೆದಿದೆ. ದೃಶ್ಯಮಾಧ್ಯಮಗಳಲ್ಲಿ ಈ ವಿಡಿಯೋ ಪ್ರಸಾರವಾಗಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಘಟನೆ ಕುರಿತು ನಲಪಾಡ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

 

 

ಫೇಸ್ಬುಕ್ ನಲ್ಲಿ ಲೈವ್ ಬಂದು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ನಲಪಾಡ್ ಅವರು ಸ್ಥಳದಲ್ಲಿ ಏನು ನಡೆಯಿತು, ಡಿ ಕೆ ಸುರೇಶ್ ಪಕ್ಕಕ್ಕೆ ತಳ್ಳಿದ್ದೇಕೆ ಎಂದು ವಿವರಿಸಿದ್ದಾರೆ. ಈ ಮೂಲಕ ಈ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿದವರಿಗೆ, ವಿಡಿಯೊ ನೋಡಿದವರಿಗೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.

ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿರುವ ನಲಪಾಡ್​, ‘ಸಾವಿರಾರು ಜನ ಪಾದಯಾತ್ರೆಗೆ ಬರ್ತಿದ್ದಾರೆ. ಎಲ್ಲರೂ ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಬಳಿ ನಿಂತು ಫೋಟೋ ತೆಗೆಸಿಕೊಳ್ಳೋಕೆ ಮುಗಿಬೀಳ್ತಿದ್ದಾರೆ. ಈ ವೇಳೆ ನಾಯಕರ ಮೈಮೇಲೆ ಕಾರ್ಯಕರ್ತರು ಬೀಳುವುದನ್ನು ತಡೆಯೋದು ನಮ್ಮ ಕರ್ತವ್ಯ. ನಿನ್ನೆಯೂ ಕೂಡ ಹಾಗೆ ಆಯ್ತು. ಡಿಕೆ ಸುರೇಶ್​ ಅವರು ನಾಯಕರ ಮೇಲೆ ಕಾರ್ಯಕರ್ತರು ಮುಗಿಬೀಳೋದನ್ನು ತಡೆಯುತ್ತಿದ್ದರು.”

“ಈ ವೇಳೆ ಅಲ್ಲೇ ಇದ್ದ ನನ್ನನ್ನು ನೋಡದೆ ಹಿಂದಿನಿಂದ ಕಾಲರ್ ಹಿಡಿದು ನನ್ನನ್ನು ಪಕ್ಕಕ್ಕೆ ತಳ್ಳಿ ನೋಡಿದರು. ಅವರು ನನ್ನನ್ನು ನೋಡದೆ ಮಾಡಿರೋದು, ಬೇಕೆಂದೇ ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ. ಡಿ ಕೆ ಸುರೇಶ್ ಅವರಾಗಿರಲಿ, ಡಿ ಕೆ ಶಿವಕುಮಾರ್ ಆಗಿರಲಿ ಎಲ್ಲಾ ಕಾಂಗ್ರೆಸ್ ನ ನಾಯಕರು, ಯುವ ನಾಯಕರು, ಕಾರ್ಯಕರ್ತರು ಅವರೆಲ್ಲರೂ ಕುಟುಂಬವಿದ್ದಂತೆ. ಆ ಸಮಯದಲ್ಲಿ ಬೇರೆ ಯಾರಾಗಿದ್ದರೂ ಅದನ್ನೇ ಮಾಡುತ್ತಿದ್ದರು. ನಾನು ಮತ್ತು ಡಿ ಕೆ ಸುರೇಶ್ ಅವರು ಈಗ ತಾನೇ ಜೊತೆಯಲ್ಲಿ ಊಟ ಮಾಡಿಕೊಂಡು ಬಂದಿದ್ದೇವೆ. ”

“ಇದೆಲ್ಲವನ್ನೂ ದೊಡ್ಡ ವಿಚಾರ ಮಾಡಬೇಡಿ. ಸುರೇಶ್​ ಅವರು ನನ್ನನ್ನು ತಳ್ಳಿದ್ದು ಒಂಚೂರು ನನಗೆ ಬೇಸರ ತಂದಿಲ್ಲ. ದಯವಿಟ್ಟು ಅನಾವಶ್ಯಕವಾಗಿ ಈ ವಿಷಯವನ್ನ ದೊಡ್ಡದು ಮಾಡಬೇಡಿ. ಬೆಂಗಳೂರಿಗೆ ಕುಡಿವ ನೀರಿನ ಸಮಸ್ಯೆ ಉಂಟಾಗಬಾರದು. ಎಲ್ಲರೂ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ’ ಎಂದು ನಲಪಾಡ್ ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top