fbpx
ಸಮಾಚಾರ

ಸಂಕ್ರಾಂತಿಗೆ ಸರ್ಪ್ರೈಸ್ ನೀಡಿದ ನಟ ಸತೀಶ್: ಮೊದಲ ಬಾರಿಗೆ ಮಗಳ ಹೆಸರು, ಫೋಟೋ ರಿವೀಲ್ ಮಾಡಿದ ನೀನಾಸಂ ಸತೀಶ್

ಕನ್ನಡ ಚಿತ್ರರಂಗದ ಖ್ಯಾತ ನಟ ನೀನಾಸಂ ಸತೀಶ್ ಅವರು ಇದೇ ಮೊದಲ ಬಾರಿಗೆ ತಮ್ಮ ಮಗಳ ಫೋಟೋ ಮತ್ತು ಹೆಸರನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈವರೆಗೂ ತಮ್ಮ ಖಾಸಗಿ ಬದುಕಿನ ಯಾವುದೇ ವಿಚಾರಗಳನ್ನು ಹಂಚಿಕೊಳ್ಳದೇ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದ ಸತೀಶ್ ಅವರು ಸಂಕ್ರಾಂತಿ ವಿಶೇಷವಾಗಿ ತಮ್ಮ ಮಗಳ ಹೆಸರು ಮತ್ತು ಫೋಟೋವನ್ನು ಮಾಡಿದ್ದಾರೆ.

ಸುಪ್ರಿತಾ ಅವರನ್ನು ಮದುವೆ ಮಾಡಿಕೊಂಡಿರುವ ಸತೀಶ್ ಅವರು ಮನಸ್ವಿತಾ ಎಂಬ ಮುದ್ದಾದ ಹೆಣ್ಣು ಮಗಳ ತಂದೆ. ಅವರ ಮಗಳಿಗೆ ಸದ್ಯ ಆರು ವರ್ಷ ವಯಸ್ಸಾಗಿದ್ದು ಆಕೆ ಒಂದು ವರ್ಷವಿದ್ದಾಗ ತೆಗೆದಂತಹ ಫೋಟೋವನ್ನು ಅಭಿಮಾನಿಗಳ ಜೊತೆ ಸತೀಶ್ ಅವರು ಹಂಚಿಕೊಂಡಿದ್ದಾರೆ

“ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸುತ್ತಿದ್ದಾಳೆ ನನ್ನ ಮಗಳು ಮನಸ್ಮಿತ. ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಅವಳ ಮೊದಲ ಫೋಟೋ ಇದು. ಆಕೆಯ ಪ್ರೈವೆಸಿ ಕಾರಣದಿಂದ ಈವರೆಗೂ ನಮ್ಮ ಕುಟುಂಬ ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ. ಆದರೆ ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಫೋಟೋವನ್ನು ಬಹಿರಂಗಪಡಿಸುವಂತೆ ಒತ್ತಾಯ ಮಾಡಿದ ಕಾರಣ ಮೊದಲ ಬಾರಿಗೆ ನನ್ನ ಮಗಳ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಸದಾ ಹೀಗೆ ಇರಲಿ. (ಇದು ಆಕೆ ಮೊದಲ ವರ್ಷ ಇದ್ದಾಗ ತೆಗೆದ ಫೋಟೋಗಳು. ಅವಳಿಗೆ ಈ ಗ ಐದು ತುಂಬಿ ಆರನೇ ವರ್ಷ ನಡೆಯುತ್ತಿದೆ) ಎಂದು ಬರೆದು ಸತೀಶ್ ಪೋಸ್ಟ್ ಮಾಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top