fbpx
ಸಮಾಚಾರ

ಯೂಟ್ಯೂಬ್‌ನಲ್ಲಿ ನಿಮ್ಮನ್ನು ಪದೇ ಪದೇ ಕಾಡುವ ಜಾಹಿರಾತುಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಸಾಮಾನ್ಯವಾಗಿ ಯೂಟ್ಯೂಬ್ ನಲ್ಲಿ ವೀಡಿಯೋ ನೋಡುವುದು ಒಮ್ಮೊಮ್ಮೆ ಬೋರ್ ಅನ್ನಿಸುತ್ತದೆ. ಯಾಕೆಂದರೆ ದೂರದರ್ಶನದಲ್ಲಿ ಬಂದAತೆ ಒಂದರ ಹಿಂದೆ ಒಂದು ಎಂಬAತೆ ಹಲವಾರು ಜಾಹೀರಾತುಗಳು ಬರುತ್ತಿರುತ್ತವೆ. ಇದರಿಂದ ವೀಡಿಯೊವನ್ನು ನಿರಂತರವಾಗಿ ವೀಕ್ಷಿಸಲು ಸಾಧ್ಯವಿಲ್ಲ. ಕೆಲವು ಅಗತ್ಯ ಅಥವಾ ಆಸಕ್ತಿದಾಯಕ ವೀಡಿಯೊವನ್ನು ಹುಡುಕುತ್ತಿರುವಾಗ ಜಾಹೀರಾತು ಖಂಡಿತವಾಗಿಯೂ ತೊಂದರೆ ಕೊಟ್ಟೇ ಕೊಡುತ್ತದೆ. ಯಾಕೆಂದರೆ ಆ ಜಾಹಿರಾತು ನೋಡದೆ ಮುಂದೆ ಹೋಗಲು ಸಾಧ್ಯವಿರುವುದಿಲ್ಲ.

ಜಾಹೀರಾತುಗಳು ಯೂಟ್ಯೂಬ್ ಆದಾಯದ ಪ್ರಮುಖ ಮೂಲವಾಗಿದೆ. ಹಾಗಾದರೆ, ಯೂಟ್ಯೂಬ್‌ನಲ್ಲಿ ವೀಡಿಯೋದ ಮಧ್ಯೆ ಬರುವ ಜಾಹೀರಾತನ್ನು ಮ್ಯೂಟ್ ಮಾಡುವುದು ಹೇಗೆ? ಅದಕ್ಕಾಗಿ ಒಂದು ಟ್ರಿಕ್ ಹೀಗಿದೆ.

ಆಡ್ ಬ್ಲಾಕರ್‌ಗಳು :
ಬ್ರೌಸರ್‌ನಲ್ಲಿಯೂ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಬಹುದು, ಜಾಹೀರಾತು ಬ್ಲಾಕರ್‌ಗಳನ್ನು ಬಳಸುವುದರಿಂದ ಜಾಹೀರಾತು-ಮುಕ್ತ ಯೂಟ್ಯೂಬ್ ವೀಕ್ಷಣೆಗೆ ಅದು ಅನುವು ಮಾಡಿಕೊಡುತ್ತದೆ. ಆಡ್‌ಬ್ಲಾಕ್ ಮತ್ತು ಸ್ಟಾಪ್ ಆಡ್‌ನಂತಹ ಜಾಹೀರಾತು ಬ್ಲಾಕರ್‌ಗಳು ಬ್ರೌಸರ್‌ನಲ್ಲಿ ವಿಸ್ತರಣೆಯಾಗಿ ಲಭ್ಯವಿದೆ. ಅದನ್ನು ನಮ್ಮ ಡಿವೈಸ್ ನಲ್ಲಿ ಹಾಕಿಕೊಳ್ಳುವ ಮೂಲಕ ಜಾಹಿರಾತು ಮುಕ್ತ ಯೂಟ್ಯೂಬ್ ಅನ್ನು ಆನಂದಿಸಬಹುದು. ಆಡ್‌ಬ್ಲಾಕರ್‌ಗಳನ್ನು ಹೊರತುಪಡಿಸಿ ಬೇರೆ ಆಯ್ಕೆಗಳೂ ಇವೆ. ಆಡ್ ಬ್ಲಾಕರ್ ಅನ್ನು ಬಳಸದಿದ್ದರೆ, ಯೂಟ್ಯೂಬ್ ವೀಡಿಯೊದ ಯೂಆರ್‌ಎಲ್ ಮತ್ತು ಕೀವರ್ಡ್ಗಳ ಮೂಲಕ ಆಡ್‌ಲೆಸ್‌ಟ್ಯೂಬ್, ವೋಯಿಲಾ ದಂತಹ ಸರ್ಚ್ಎಂಜಿನ್‌ಗಳನ್ನು ಬಳಸಿ ಜಾಹೀರಾತು-ಮುಕ್ತ ವೀಡಿಯೊಗಳನ್ನು ವೀಕ್ಷಿಸಬಹುದು.

ಪರ್ಯಾಯ ಅಪ್ಲಿಕೇಶನ್‌ಗಳ ಬಳಕೆ :
ಜಾಹೀರಾತು ಬೇಡ ಎಂದಾದರೆ ಯೂಟ್ಯೂಬ್‌ನಂತೆಯೇ ಪರ್ಯಾಯ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಓಜಿವೈಯೂಟ್ಯೂಬ್, ಡಿಎನ್‌ಎಸ್೬೬, ನ್ಯೂಪೈಪ್, ಆಡ್ ಕ್ಲಿಯರ್ ನಂತಹ ಅಪ್ಲಿಕೇಶನ್‌ಗಳು ಪ್ಲೇಸ್ಟೋರಿನಲ್ಲಿ ಲಭ್ಯವಿದೆ ಮತ್ತು ಅವುಗಳನ್ನು ಡೌನ್ಲೋಡ್ ಮಾಡುವ ಮೂಲಕ ಜಾಹೀರಾತು-ಮುಕ್ತ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಬಹುದು. ಅಗತ್ಯವಿದ್ದರೆ ಮಾತ್ರ ಡೌನ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಬಹುದು. ಯೂಟ್ಯೂಬ್‌ಗೆ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲದಿದ್ದರೆ ನೀವು ಯಾವುದೇ ಜಾಹೀರಾತು ಇಲ್ಲದೆ ಆರಾಮವಾಗಿ ವೀಕ್ಷಿಸಬಹುದು.

ಯೂಟ್ಯೂಬ್ ಪ್ರಿಮಿಯಂ ಬಳಕೆ :
ಯಾವುದೇ ಜಾಹೀರಾತುಗಳಿಲ್ಲದೆ ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಲು ಬಳಕೆದಾರರು ಯೂಟ್ಯೂಬ್ ಪ್ರಿಮಿಯಂ ಅನ್ನು ಖರೀದಿಸಬಹುದು. ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯ ಮಾಸಿಕ ಶುಲ್ಕ ರೂ ೧೨೯ ಆಗಿದೆ. ಈ ಚಂದಾದಾರಿಕೆಯು ಬಳಕೆದಾರರಿಗೆ ಯೂಟ್ಯೂಬ್‌ನಲ್ಲಿ ಜಾಹೀರಾತು-ಮುಕ್ತ ವೀಡಿಯೊ ಮತ್ತು ಸಂಗೀತದ ಆಯ್ಕೆಯನ್ನು ನೀಡುತ್ತದೆ. ಈ ಚಂದಾದಾರಿಕೆಯಲ್ಲಿ ಪರದೆಯು ಲಾಕ್ ಆಗಿರುವಾಗ ಬಳಕೆದಾರರು ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಹೀಗೆ ಯೂಟ್ಯೂಬ್ ನಲ್ಲಿ ಜಾಹಿರಾತುಗಳೇ ಇಲ್ಲದೆ ವಿಡಿಯೋಗಳನ್ನು ವೀಕ್ಷಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top