fbpx
ಸಮಾಚಾರ

ಜನವರಿ 23: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 23, 2022 ಭಾನುವಾರ
ವರ್ಷ : 1943, ಪ್ಲಾವ
ತಿಂಗಳು : ಪುಷ್ಯ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪಂಚಮೀ : Jan 22 09:14 am – Jan 23 09:12 am; ಷಷ್ಠೀ : Jan 23 09:12 am – Jan 24 08:44 am
ನಕ್ಷತ್ರ : ಉತ್ತರ: Jan 22 10:38 am – Jan 23 11:09 am; ಹಸ್ತ: Jan 23 11:09 am – Jan 24 11:15 am
ಯೋಗ : ಅತಿಗಂಡ: Jan 22 02:07 pm – Jan 23 12:49 pm; ಸುಕರ್ಮ: Jan 23 12:49 pm – Jan 24 11:11 am
ಕರಣ : ತೈತುಲ: Jan 22 09:16 pm – Jan 23 09:12 am; ಗರಿಜ: Jan 23 09:12 am – Jan 23 09:01 pm; ವಾಣಿಜ: Jan 23 09:01 pm – Jan 24 08:44 am

Time to be Avoided
ರಾಹುಕಾಲ : 4:47 PM to 6:12 PM
ಯಮಗಂಡ : 12:31 PM to 1:56 PM
ದುರ್ಮುಹುರ್ತ : 04:41 PM to 05:26 PM
ವಿಷ : 07:35 PM to 09:11 PM
ಗುಳಿಕ : 3:22 PM to 4:47 PM

Good Time to be Used
ಅಮೃತಕಾಲ : None
ಅಭಿಜಿತ್ : 12:08 PM to 12:54 PM

Other Data
ಸೂರ್ಯೋದಯ : 6:50 AM
ಸುರ್ಯಾಸ್ತಮಯ : 6:12 PM

 

 

 

ಕೆಲಸಕ್ಕೆ ಬಾರದ ಜನ ತಲೆ ತಿನ್ನುವ ಸಾಧ್ಯತೆ ಹೆಚ್ಚಿದೆ. ದೂರ ಪ್ರವಾಸ ಮಾಡುವ ಯೋಗವಿದೆ. ಪತಿ ಪತ್ನಿಯರಲ್ಲಿ ಮನಸ್ತಾಪ ಬರುವುದು. ಶಿವ ಪಂಚಾಕ್ಷ ರಿ ಮಂತ್ರವನ್ನು ತಪ್ಪದೆ ಪಠಿಸಿ.

ಅಪರಿಚಿತರನ್ನು ಹೆಚ್ಚು ಪರಿಚಯ ಮಾಡಿಕೊಂಡು ಸಂಕಷ್ಟಕ್ಕೆ ಗುರಿಯಾಗುವಿರಿ. ಅಂತಹವರಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಸಂಗಾತಿಯ ಸಲಹೆಯಂತೆ ನಡೆದರೆ ಕ್ಷೇಮ.

ನಿಮ್ಮ ಉತ್ತಮ ಬೌದ್ಧಿಕ ಶಕ್ತಿಯಿಂದಾಗಿ ಜನರಿಂದ ಗೌರವ ಮತ್ತು ಪ್ರಶಂಸೆಗೆ ಗುರಿಯಾಗುವಿರಿ. ಇದರಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ನಿರ್ಧರಿಸುವಿರಿ.

ಗುರಿ ಸಾಧನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಅಡ್ಡಿಯಾಗಬಲ್ಲದು. ಮನೋಚಾಂಚಲ್ಯದಿಂದ ದೂರಾಗಿ ಹಿಡಿದ ಕಾರ್ಯದಲ್ಲಿ ಗಮನ ಹರಿಸಿ.

 

ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡಿ ಒಳಿತಾಗುವುದು. ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ನೇಹಿತರ ಮುಂದೆ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ.

 

ತಲೆನೋವಾಗಿದ್ದಂತಹ ಜನರೇ ನಿಮಗೆ ಶರಣಾಗುವ ಲಕ್ಷ ಣಗಳು ಸ್ಪಷ್ಟವಾಗಲಿವೆ. ಇದರಿಂದ ನಿಮ್ಮ ಬಾಕಿ ಕೆಲಸಗಳು ಶೀಘ್ರದಲ್ಲಿಯೇ ಮುಗಿಯುವ ಹಂತ ತಲುಪುವವು. ಬಾಕಿ ಬರಬೇಕಿದ್ದ ಹಣ ನಿಮ್ಮ ಕೈಸೇರುವ ಸೂಚನೆಗಳಿವೆ.

 

ಸರಳವಾಗಿರುವ ದಾರಿಯನ್ನು ಕಗ್ಗಂಟಾಗಿಸಲೆಂದೇ ಕೆಲವರು ತರಲೆ ಮಾಡುತ್ತಿರುವರು. ಆದರೆ ದೈವ ಬಲದ ಮುಂದೆ ಮನುಜ ಬಲ ಕ್ಷೀಣಿಸುವುದು. ನೀವು ನಂಬಿದ ದೈವವನ್ನು ಬಲವಾಗಿ ನಂಬಿ. ನಿಮ್ಮ ಕಾರ್ಯಗಳು ಪ್ರಗತಿಯತ್ತ ಸಾಗುವವು.

 

ಯಶಸ್ಸಿನ ದಾರಿಯಲ್ಲಿರುವ ನಿಮ್ಮನ್ನು ಸ್ವಾರ್ಥಿಗಳು ಮುತ್ತಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸಾಕಷ್ಟು ಎಚ್ಚರದಿಂದ ಇರಿ. ನಗುವಾಗ ಎಲ್ಲಾ ನೆಂಟರು ಅಳುವಾಗ ಯಾರೂ ಇಲ್ಲ ಎಂಬಂತೆ ಈಗ ನಿಮ್ಮಲ್ಲಿನ ಹಣದ ನೆರವು ಪಡೆಯಲು ಜನರು ನಿಮ್ಮನ್ನು ಓಲೈಸುವರು.

 

ಯಾರನ್ನೇ ಆಗಲಿ ಅನಿವಾರ್ಯ ಎಂದು ಪರಿಗಣಿಸಲು ಮುಂದಾಗದಿರಿ. ನಿಮ್ಮ ಶಕ್ತಿಯೇ ನಿಮ್ಮ ಸಂಜೀವಿನಿಯಾಗಲಿದೆ. ಗುರು ಹಿರಿಯರ ಮಾತನ್ನು ಗೌರವಿಸಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.

ಅನೇಕ ದಿನಗಳಿಂದಲೂ ಕಾಡುತ್ತಿದ್ದ ಸಮಸ್ಯೆಗಳು ಒಂದು ನಿಶ್ಚಿತ ಪರಿಹಾರ ಕಾಣುವ ಸಾಧ್ಯತೆ ಇದೆ. ಬೃಹತ್‌ ಸಮಸ್ಯೆಯು ಮಂಜುಗಡ್ಡೆಯಂತೆ ಕರಗಿ ಹೋಗುವುದು. ನಿಮ್ಮ ಮುಂದಿನ ದಾರಿ ನಿಚ್ಚಳವಾಗುವುದು.

 

 

ಚಿಕ್ಕ ವಿಷಯವನ್ನು ದೊಡ್ಡದಾಗಿಸಿ ಪ್ರಕರಣವನ್ನು ಹಿಗ್ಗಿಸಲು ಹೋಗಬೇಡಿ. ಬಾಳಸಂಗಾತಿಯ ಕೋಪಕ್ಕೆ ಅವಕಾಶ ಕೊಡದಿರಿ. ಇದ್ದ ವಿಷಯವನ್ನು ಕುಳಿತು ನೇರವಾಗಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ಸಮಸ್ಯೆಗಳ ನಡುವೆಯೇ ಜೀವನ ನಡೆಸುವುದು ಅನಿವಾರ್ಯ. ಅಂತೆಯೇ ನಿಮ್ಮ ಬುದ್ಧಿ ಚಾತುರ್ಯದ ಫಲವಾಗಿ ಸಾಫಲ್ಯತೆ ಸಿಗಲು ಮಕ್ಕಳಿಂದ ಬೆಂಬಲ ದೊರೆಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top