fbpx
ಸಮಾಚಾರ

ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದ ಕನ್ನಡಿಗ ರಾಹುಲ್: ಲಕ್ನೋ ತಂಡದಲ್ಲಿ ಆಡಲು ರಾಹುಲ್ ಪಡೆಯುತ್ತಿರುವ ಹಣ ಎಷ್ಟು ಗೊತ್ತಾ?

ಟೀಂ ಇಂಡಿಯಾದ ಹಂಗಾಮಿ ನಾಯಕ ಕೆ.ಎಲ್ ರಾಹುಲ್‌ರನ್ನ ಐಪಿಎಲ್ ನ ಹೊಸ ಫ್ರಾಂಚೈಸಿ ಲಕ್ನೋ ಭಾರೀ ಮೊತ್ತಕ್ಕೆ ಖರೀದಿಸಿದೆ. ಬರೋಬ್ಬರಿ 17 ಕೋಟಿ ರೂಪಾಯಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದ್ದು ಮೂಲಕ ಕೆ.ಎಲ್ ರಾಹುಲ್ ಐಪಿಎಲ್‌ನಲ್ಲಿ ಗರಿಷ್ಠ ಮೊತ್ತಕ್ಕೆ ಆಡಲಿರುವ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2017ರಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್​ ಕೊಹ್ಲಿಯನ್ನು 17 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿತ್ತು. ಅವರು ಸತತ 5 ಆವೃತ್ತಿಗಳಲ್ಲಿ 17 ಕೋಟಿ ರೂ. ಪಡೆದಿದ್ದರು.

ಐಪಿಎಲ್‌ 2020 ಮತ್ತು ಐಪಿಎಲ್‌ 2021 ಟೂರ್ನಿಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದ ಕೆಎಲ್‌ ರಾಹುಲ್‌, ಬಳಿಕ ತಂಡದಿಂದ ಹೊರಬರುವ ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕೆ ಪಂಜಾಬ್‌ ತಂಡ ತಾನು ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ರಾಹುಲ್‌ ಅವರನ್ನು ಹೆಸರಿಸದೇ ಹರಾಜಿಗೆ ಬಿಟ್ಟುಕೊಟ್ಟಿತ್ತು. ಇದೀಗ ರಾಹುಲ್ ಅವರು ಲಕ್ನೋ ತಂಡದ ಪಾಲಾಗಿದ್ದಾರೆ.

ರಾಹುಲ್ ಜೊತೆಗೆ ಇನ್ನಿಬ್ಬರು ಆಟಗಾರರನ್ನು ಲಖನೌ ತಂಡ ಖರೀದಿ ಮಾಡಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್‌ ಮಾರ್ಕಸ್ ಸ್ಟಾಯ್ನಿಸ್ ಅವರನ್ನು 9.2 ಕೋಟಿ ಮೊತ್ತಕ್ಕೆ ಹಾಗೂ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಅವರನ್ನು 4 ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ಬಗ್ಗೆ ಲಖನೌ ಫ್ರಾಂಚೈಸ್‌ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top