fbpx
ಮನೋರಂಜನೆ

ಪ್ರೇಮಿಗಳ ದಿನದ ವಿಶೇಷ: ಪ್ರೀತಿಸಿ ಮದುವೆಯಾದ ಚಂದನವನದ ತಾರಾಜೋಡಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಸ್ಯಾಂಡಲ್ವುಡ್ ನಲ್ಲಿ ಪ್ರೀತಿಸಿ ಮದುವೆ ಆಗಿರುವ ಎಷ್ಟೊಂದು ಸೆಲೆಬ್ರೆಟಿಗಳಿದ್ದಾರೆ. ತಾವು ನಟಿಸುತ್ತಿರುವ ಚಿತ್ರದಲ್ಲಿ ಪ್ರೇಮದ ಪಾತ್ರದಲ್ಲಿ ಅಭಿನಯಿಸ್ಸುತ್ತಾ ಪರಸ್ಪರ ಪ್ರೀತಿ ಬೆಳೆದು ವಿವಾಹರಾಗಿದ್ದಾರೆ. ಅಂತಹ ಕೆಲವು ಸೆಲೆಬ್ರೆಟಿಗಳ ವಿವರವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇವೆ.

ಯಶ್-ರಾಧಿಕಾ ಪಂಡಿತ್:
ಅತ್ಯಂತ ಸದ್ದು ಮಾಡುತ್ತಿರುವ ಸ್ಯಾಂಡಲ್ವುಡ್ ನ ಪ್ರಖ್ಯಾತ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಜೋಡಿ ಅತ್ಯಂತ ವಿಶೇಷವಾದದ್ದು. ಇಬ್ಬರು ಒಟ್ಟಿಗೆ ಮೊದಲು ಕಾಣಿಸಿಕೊಂಡಿದ್ದು “ನಂದಗೋಕುಲ” ಎಂಬ ಧಾರಾವಾಹಿಯಲ್ಲಿ. ನಂತರ ಇಬ್ಬರು “ಮೊಗ್ಗಿನ ಮನಸು” ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರು ಒಬ್ಬನೊಬ್ಬರು ಪ್ರೀತಿಸುತ್ತಿರುವ ವಿಷಯವನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ನಂತರ ಈ ಜೋಡಿ 2016 ರಲ್ಲಿ ಮದುವೆಯಾದರು.

ದಿಗಂತ್-ಐಂದ್ರಿತಾ:
ಐಂದ್ರಿತಾ ಮತ್ತು ದಿಗಂತ್ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಯಾಗಿದ್ದರು. ಐಂದ್ರಿತಾ ಭಾಗವಹಿಸಿದ್ದ ಒಂದು ಸಂದರ್ಶನ ನೋಡಿದ್ದ ದಿಗಂತ್ ಈ ಹುಡುಗಿ ಬಹಳ ಕ್ಯೂಟ್ಆಗಿದ್ದಾಳೆ ಎಂದು ಹೇಳಿದರು. ಅಚ್ಚರಿಯಂತೆ ದಿಗಂತ್ ಮತ್ತು ಐಂದ್ರಿತಾ ಇಬ್ಬರು ಒಟ್ಟಿಗೆ “ಮನಸಾರೆ” ಸಿನಿಮಾದಲ್ಲಿ ನಟಿಸಿದ್ದರು. ದಿಗಂತ್ ಶೂಟಿಂಗ್ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿಷಯ ತಿಳಿದ ಐಂದ್ರಿತಾ ಅವರಿಗೆ ಹಣ್ಣನ್ನು ಕಳುಹಿಸಿದರು ಎಂದು ಹೇಳಲಾಗಿದೆ. ನಂತರ ಇಬ್ಬರ ನಡುವೆ ಪರಸ್ಪರ ಪ್ರೀತಿ ಬೆಳೆದು 2018 ರಲ್ಲಿ ವಿವಾಹರಾದರು.

ಅಂಬರೀಷ್- ಸುಮಲತಾ:
90 ರ ದಶಕದ ಪ್ರೇಮಕಥೆ ಎಂದಾಕ್ಷಣ ನಮಗೆ ನೆನಪಾಗುವುದೇ ಅಂಬರೀಷ್ ಮತ್ತು ಸುಮಲತಾ ಅವರ ಪ್ರೇಮ ಕೆಥೆ. 1984ರಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಲತಾ, ಅಂಬರೀಶ್​ ಅವರನ್ನು ನೋಡಿದ್ದು, ಒಂದು ಕಾರ್ಯಕ್ರಮವೊಂದರಲ್ಲಿ. ನಂತರ ‘ಆಹುತಿ’ ಸಿನಿಮಾದ ಸೆಟ್​ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅಲ್ಲಿಂದ ಆರಂಭವಾದ ಇವರಿಬ್ಬರ ಪರಿಚಯ ಪ್ರೀತಿಯಾಗಿ ಪರಿವರ್ತಿಸಿ 1991 ರಲ್ಲಿ ವಿವಾಹರಾದರು.

ಪ್ರಜ್ವಲ್ ದೇವ್ರಾಜ್- ರಾಗಿಣಿ:
ಪ್ರಜ್ವಲ್ ದೇವ್ರಾಜ್ ಮತ್ತು ರಾಗಿಣಿ ಅವರ ಪ್ರೀತಿ ಬಹಳ ವರ್ಷದಿಂದ ನಡೆಯುತ್ತಿತ್ತು. ಪ್ರಜ್ವಲ್ ದೇವ್ರಾಜ್ 9 ನೆೇ ಕ್ಲಾಸ್ ನಲ್ಲಿದ್ದಾಗಲೇ ಅವರು ರಾಗಿಣಿ ಅವರನ್ನು ಮೊದಲನೆಯ ಬಾರಿಗೆ ನೋಡಿದರು. ಅವಾಗ ರಾಗಿಣಿ ಅವರು 6 ನೆೇ ತರಗತಿಯಲ್ಲಿ ಓದುತ್ತಿದ್ದರು. ನಂತರ ಇವರಿಬ್ಬರು ಪರಸ್ಪರ ಪರಿಚಯವಾಗಿದ್ದು ಡಾನ್ಸ್ ಕ್ಲಾಸ್ಸಿನಲ್ಲಿ. ಇಬ್ಬರ ಪರಿಚಯ ಪ್ರೀತಿಯಾಗಿ ಪರಿವರ್ತಿಸಿ ಮನೆಯವರ ಒಪ್ಪಿಗೆಯ ಮೇರೆಗೆ 2015 ರಲ್ಲಿ ಮದುವೆಯಾದರು.

ಡಾರ್ಲಿಂಗ್ ಕೃಷ್ಣ- ಮಿಲನ ನಾಗರಾಜ್:
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ್ದ ಜೋಡಿ ಎಂದರೆ ” ಲವ್ ಮಾಕ್‌ಟೇಲ್‌” ಸಿನಿಮಾದ ಡಾರ್ಲಿಂಕ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಜೋಡಿ. 2015ರಲ್ಲಿ ತೆರೆಕಂಡ ‘ಚಾರ್ಲಿ’ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ‘ಚಾರ್ಲಿ’ ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಿತ್ತು. ಈ ವೇಳೆ ಒಂದು ದಿನ ಮಿಲನಾ ಅವರನ್ನು ಕಾರಿನಲ್ಲಿ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದ ಕೃಷ್ಣ ಪ್ರಪೋಸ್‌ ಮಾಡಿದ್ದರು. ಮಿಲನಾ ಕೂಡ ಇವರ ಪ್ರಪೋಸ್​ ಒಪ್ಪಿಕೊಂಡಿದ್ದರು. ಇಬ್ಬರು ವ್ಯಾಲೆಂಟೈನ್ಸ್ ಡೇ ದಿನವೇ ಮದುವೆ ಆಗಿದ್ದು ವಿಶೇಷ.

ಮೇಘನಾ ರಾಜ್- ಚಿರಂಜೀವಿ ಸರ್ಜಾ:
‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಹೆಸರಿನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಪರಸ್ಪರ ಭೇಟಿ ಆಗಿದ್ದರು. ನಂತರ ಮೇಘನಾಗೆ ಮೆಸೇಜ್​ ಮಾಡಿ ಚಿರು ಮಾತು ಆರಂಭಿಸಿದ್ದರು. ದ್ವಾರಕೀಶ್ ನಿರ್ಮಾಣದ ಆಟಗಾರ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇಬ್ಬರು ಒಟ್ಟಿಗೆ ನಟಿಸಿದ್ದರು. ನಂತರ ಇಬ್ಬರ ನಡುವೆ ಪ್ರೇಮ ಬೆಳೆಯಿತು. ನಂತರ ಇಬ್ಬರು 2018 ರಲ್ಲಿ ವಿವಾಹರಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top