fbpx
ಸಿನಿಮಾ

“ಜೇಮ್ಸ್ ಚಿತ್ರತಂಡ ಮೊದಲೇ ಈ ಕೆಲಸ ಮಾಡಬೇಕಿತ್ತು” ಶಿವರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ತಿಂಗಳುಗಳೇ ಕಳೆದರು ಅವರ ನೆನಪು ಸದಾ ನಮ್ಮ ಮನಸಲ್ಲಿ ಹಚ್ಚೆ ಆಗಿ ಉಳಿದಿದೆ. ಅಪ್ಪು ಅವರ ಕೊನೆಯ ಸಿನಿಮಾ “ಜೇಮ್ಸ್” ಅಪ್ಪು ಹುಟ್ಟುಹಬ್ಬದ ದಿನ (ಮಾರ್ಚ್ 17) ಬಿಡುಗಡೆ ಯಾಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿರೋದು ನಮಗೆಲ್ಲಾ ಗೊತ್ತು. ಆದರೆ ಅಪ್ಪು ಅಭಿಮಾನಿಗಳಿಗಿದ್ದ ಒಂದೇ ಬೇಸರ ಎಂದರೆ ಅದು ಅಪ್ಪು ದ್ವನಿಯಲ್ಲಿ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಅಂತ. ಆದರೆ ಇದೀಗ ಅಪ್ಪು ಅಭಿಮಾನಿಗಳಿಗೆ ಸಂತಸದ ಸುದ್ದಿ, ಏಕೆಂದರೆ ಜೇಮ್ಸ್ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಈ ಸಿನಿಮಾವನ್ನು ಅಪ್ಪು ದ್ವನಿಯಲ್ಲೇ ನೋಡಬಹುದು.

ಈ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಮಾತನಾಡುತ್ತ ” ತಂತ್ರಜ್ಞಾನವನ್ನು ಬಳಸಿಕೊಂಡು ಇಂತಹ ಪ್ರಯತ್ನವನ್ನು ಚಿತ್ರ ಮಾಡುತ್ತಿದೆ. ಈ ಶುಕ್ರವಾರದಿಂದ, ಅಭಿಮಾನಿಗಳು ಜೇಮ್ಸ್ ಅನ್ನು ಹೊಸ ಸ್ವರೂಪದಲ್ಲಿ ನೋಡಬಹುದು. ಏಪ್ರಿಲ್ 22 ರಿಂದ ‘ಜೇಮ್ಸ್’ ಚಿತ್ರಕ್ಕೆ ಅಪ್ಪು ಅವರ ಧ್ವನಿ ಸೇರ್ಪಡೆಯಾಗಲಿದ್ದು, ಅಂದಿನಿಂದ ‘ಜೇಮ್ಸ್’ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ” ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಇದರ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಿವಣ್ಣ” ಇಂಥದ್ದೊಂದು ತಂತ್ರಜಾನ ಇದೆ ಅಂತ ನನಗೆ ಮೊದಲು ಗೊತ್ತಿರಲಿಲ್ಲ. ಇದರ ಬಗ್ಗೆ ಕೇಳಿ ನನಗೆ ಖುಷಿ ಆಯಿತು. ಅಪ್ಪು ಅವರ ಧ್ವನಿಯಲ್ಲಿ ಸಿನಿಮಾ ನೋಡೋದು ಖುಷಿ ನಿಡೋ ವಿಚಾರ. ಸಿನಿಮಾ ರಿಲೀಸ್ ಮೊದಲೇ ಈ ತಂತ್ರಜ್ಞಾನವನ್ನು ಬಳಸಿದರೆ ಇನ್ನು ಚೆನ್ನಾಗಿ ಇರುತಿತ್ತು” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top