ಏಪ್ರಿಲ್ 26, 2022 ಮಂಗಳವಾರ
ವರ್ಷ : 1944, ಶೋಭಾಕೃತ
ತಿಂಗಳು : ಚೈತ್ರ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಏಕಾದಶೀ : Apr 26 01:38 am – Apr 27 12:48 am; ದ್ವಾದಶೀ : Apr 27 12:48 am – Apr 28 12:24 am
ನಕ್ಷತ್ರ : ಶತಭಿಷ: Apr 25 05:13 pm – Apr 26 04:56 pm; ಪೂರ್ವಾ ಭಾದ್ರ: Apr 26 04:56 pm – Apr 27 05:05 pm
ಯೋಗ : ಬ್ರಹ್ಮ: Apr 25 08:55 pm – Apr 26 07:05 pm; ಇಂದ್ರ: Apr 26 07:05 pm – Apr 27 05:36 pm
ಕರಣ : ಬಾವ: Apr 26 01:38 am – Apr 26 01:10 pm; ಬಾಲವ: Apr 26 01:10 pm – Apr 27 12:48 am; ಕುಲವ: Apr 27 12:48 am – Apr 27 12:33 pm
Time to be Avoided
ರಾಹುಕಾಲ : 3:23 PM to 4:57 PM
ಯಮಗಂಡ : 9:11 AM to 10:44 AM
ದುರ್ಮುಹುರ್ತ : 08:33 AM to 09:23 AM, 11:07 PM to 11:53 PM
ವಿಷ : 11:23 PM to 12:59 AM
ಗುಳಿಕ : 12:17 PM to 1:50 PM
Good Time to be Used
ಅಮೃತಕಾಲ : 09:49 AM to 11:24 AM
ಅಭಿಜಿತ್ : 11:52 AM to 12:42 PM
Other Data
ಸೂರ್ಯೋದಯ : 6:04 AM
ಸುರ್ಯಾಸ್ತಮಯ : 6:29 PM
ಮೇಷ (Mesha)
ಮೈಮುರಿದು ದುಡಿಯಿರಿ. ನಿಮ್ಮ ಪ್ರಯತ್ನಬಲ ನಿಮ್ಮನ್ನು ಕೈಹಿಡಿದು ಮುನ್ನಡೆಸಲಿದೆ. ನಿಮ್ಮ ಅಹಂಗೆ ಪೆಟ್ಟು ಬಿದ್ದಾಗ ಕೆರಳದಿರಿ. ಮನದೊಳಗಿನ ಕಿಚ್ಚು ಬಿಟ್ಟು ಸ್ನೇಹಹಸ್ತ ಚಾಚಿರಿ. ಅನಿರೀಕ್ಷಿತ ಬೆಂಬಲ ದೊರಕಲಿದೆ. ಆರ್ಥಿಕ ಸ್ಥಿತಿಯು ವ್ಯವಹಾರಸ್ಥರಿಗೆ ಹೆಚ್ಚಿನ ಆತಂಕ ತರದು.
ವೃಷಭ (Vrushabh)
ನಿಮ್ಮ ಚಿಂತನೆ ಹಾಗೂ ದೈವದ ವಿಧಿಯ ಯೋಚನೆ ಬೇರೆಯದೇ ಆಗಿರುತ್ತದೆ. ಕ್ರೀಡಾಪಟುಗಳಿಗೆ ಅವಮಾನದ ಪ್ರಸಂಗ ತಂದೀತು. ಅವರ ಯೋಚನೆ, ವರ್ತನೆ ಅವರಿಗೇ ನಾಚಿಕೆಯಾಗುವಂತೆ ತೋರೀತು. ತಾಳಿದವನು ಬಾಳಿಯಾನು. ವಿರೋಧಿಗಳು ನೀಡುವ ಕಿರುಕುಳವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ
ಮಿಥುನ (Mithuna)
ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನಡುವೆ ಹೊಂದಾಣಿಕೆ ಚೆನ್ನಾಗಿ ವೃದ್ಧಿಸಲಿದೆ. ವಾಹನ ಗ್ಯಾಸ್, ವಿದ್ಯುತ್ ಬಗ್ಗೆ ಎಚ್ಚರವಿರಲಿ. ಚರ್ಮದ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು. ತೀರ್ಥಕ್ಷೇತ್ರಗಳ ಒಲವಿದ್ದವರಿಗೆ ತೀರ್ಥಕ್ಷೇತ್ರಕ್ಕೂ ಹೋಗಿ ಬರುವ ಅವಕಾಶಗಳಿರುತ್ತವೆ.
ಕರ್ಕ (Karka)
ಜನಬಂಧು ಬಳಗದವರ ನಡುವೆ ಮಿಂಚಲಿದ್ದೀರಿ. ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಆರ್ಥಿಕ ಗಳಿಕೆ ಉತ್ತಮವಿದ್ದರೂಉಳಿತಾಯದ ಬಗ್ಗೆ ಗಮನವಿರಲಿ. ವಿವಾಹಾಪೇಕ್ಷಿಗಳಿಗೆ ಗುರುಬಲದಿಂದ ಕಂಕಣ ಭಾಗ್ಯದ ಯೋಗ ಕೂಡಿ ಬರಲಿದೆ.
ಸಿಂಹ (Simha)
ವಿದ್ಯಾರ್ಥಿಗಳಿಗೆ ವಿದ್ಯಾಬಲ ನೆರವು ನೀಡಲಿದೆ. ತಾಳ್ಮೆಯಿಂದ ಮುಂದಾಗಿ, . ಅಪ್ರತ್ಯಕ್ಷವಾದ ಲಾಭವೊಂದು ಸಾಧ್ಯವಾಗುವ ಹಾಗೆ ಶನೈಶ್ಚರನ ಅಭಯವಿದೆ. ಉತ್ತಮವಾದ ಆರೋಗ್ಯಕ್ಕೆ ತಮ್ಮ ಅಭಿವೃದ್ಧಿಗೆ ಅವಕಾಶಗಳು ಒದಗಿ ಬಂದಾವು.
ಕನ್ಯಾರಾಶಿ (Kanya)
ಬೇಗುದಿಯ ತಾಪಕ್ಕೆ ಕಾರಣವಾದೀತು. ಕೆಲಸದ ಮಹಿಳೆಯರಿಗೆ ಪದೋನ್ನತಿ ಇದೆ, ಗುರು ಅಪರಿಮಿತ ಬಲದೊಂದಿಗೆ ಅನೇಕ ರೀತಿಯ ಅಭಿವೃದ್ಧಿಗೆ ಕಾರಣನಾದಾನು. ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ.
ತುಲಾ (Tula)
ಪಾಲುದಾರಿಕೆ ವಿಚಾರದಲ್ಲಿ ಕೊಂಚ ಬಿಗಿ ಉಸ್ತುವಾರಿ ಇರಲಿ. ಬಾಳ ಸಂಗಾತಿಯ ಹುಡುಕಾಟದ ಬಗ್ಗೆ ಕಿರಿಕಿರಿಯಾದೀತು. ವಾಣಿ ಜ್ಯೋದ್ಯಮಗಳಿಗೆ, ವಣಿಕರಿಗೆ, ಶಿಕ್ಷಣ ತಜ್ಞರಿಗೆ ಇದು ತೇಜ ಕಾಲವಾಗಿದೆ. ಸರಕಾರಿ ಕಛೇರಿಗಳಲ್ಲಿನ ಕೆಲಸಗಾರರಿಗೆ ಹಿನ್ನಡೆ ಉಂಟು.
ವೃಶ್ಚಿಕ (Vrushchika)
ಕಾರ್ಯತಂತ್ರಗಳ ಗಡಿಬಿಡಿಯಿಂದ ಹೊಸತಾದ ಧನಾತ್ಮಕ ಚಿಂತನೆ ಈ ವಾರ ನಿಮಗೆ ಉತ್ತಮವಾಗಿಸಬಲ್ಲದು, ಆರ್ಥಿಕವಾಗಿ ಭಿನ್ನವಾದ ಚೈತನ್ಯ ಉಂಟಾಗಲಿದೆ. ನಿಮ್ಮ ಯೋಜನಾ ಕ್ರಮವೇ ಪರಿವರ್ತನೆಗೆ ಕಾರಣವಾಗುತ್ತದೆ ,ನೀವು ಸರಕಾರಿ ನೌಕರರಾಗಿದ್ದಲ್ಲಿ ಕೆಲವು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಧನು ರಾಶಿ (Dhanu)
ಗುರುಬಲ ಆರ್ಥಿಕವಾಗಿ ಹಲವು ದಾರಿಗಳನ್ನು ತೆರೆದು ತೋರಿದರೂ ಖರ್ಚುವೆಚ್ಚಗಳು ಎಂಬ ಒದ್ದಾಟ ಇದ್ದೇ ಇರುತ್ತದೆ. ಆಗಾಗ ಭ್ರಮೆಯ ನಿರ್ಮಾಣ ಗೋಚರಕ್ಕೆ ಬರುತ್ತದೆ. ಯಾವುದಕ್ಕೂ ಎಚ್ಚರದ ನಡೆಯಾಗಿರಲಿ. ಯಾರಿಗೂ ಸಾಲ ನೀಡದಿರಿ. ಹೊಟೇಲ್ ಉದ್ಯಮದವರಿಗೆ ಕಿರಿಕಿರಿ ತಂದೀತು.
ಮಕರ (Makara)
ವೃತ್ತಿ ರಂಗದಲ್ಲಿ ಯಾರಲ್ಲೂ ನಿಷ್ಠುರ ಕಟ್ಟಿಕೊಳ್ಳದಿರಿ, ಬೇಕರಿ ವ್ಯವಹಾರ ಕಬ್ಬಿಣ ವ್ಯಾಪಾರ ಇತ್ಯಾದಿಗಳಿಂದ ಧನ ಸಂಗ್ರಹವಾಗಲಿದೆ, ವ್ಯಾಪಾರಿ ವರ್ಗ, ವ್ಯವಹಾರಸ್ಥರಿಗೆ ಹೂಡಿಕೆ ಹಾಗೂ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಕಾಲ ಈಗ ಪಕ್ವವಾಗಿದೆ. ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದ ಕೋರ್ಟು ವ್ಯವಹಾರಗಳು ಕೂಡ ಪರಿಹಾರ ಪಡೆಯಲಿವೆ.
ಕುಂಭರಾಶಿ (Kumbha)
ಆತ್ಮವಿಶ್ವಾಸವನ್ನು ವರ್ಧಿಸಿಕೊಳ್ಳಿ ಬಂದ ಅವಕಾಶಗಳನ್ನು ನಿರಾಕರಿ ಸದೆ ನಿಭಾಯಿಸಲು ಮುಂದಾದರೆ ಯಶಸ್ಸು ನಿಮಗಿದೆ, ರಾಜಕೀಯ ಕ್ಷೇತ್ರದವರಿಗಾದರೆ ಹೆಚ್ಚಿನ ಸ್ಥಾನ ಮಾನಗಳಿಗೆ ಅವಕಾಶವಿರುತ್ತದೆ, ಹಿಡಿದ ಕೆಲಸ ಕಾರ್ಯಗಳಲ್ಲಿ ಪ್ರಗತಿ ತೋರಿಬರುತ್ತದೆ.
ಮೀನರಾಶಿ (Meena)
ವೈದ್ಯಕೀಯ ಜಾಹೀ ರಾತು ಉದ್ಯಮ, ಮಾಡೆಲಿಂಗ್ ಮುಂತಾದ ವಿಚಾರಗಳಲ್ಲಿ ಹೆಚ್ಚಿನ ಆದಾಯ ತೋರಿಬಂದೀತು, ವೇಗ ಹಾಗೂ ಚಾಲನೆಯಲ್ಲಿ ಗಮನ ಹರಿಸಿರಿ. ಮಕ್ಕಳ ಚಟುವಟಿಕೆಗಳಿಗೆ ಉತ್ತೇಜನ ನೀಡಿರಿ. ಸಂತಸ ತರಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
