fbpx
ಸಮಾಚಾರ

“ಇಂಗ್ಲಿಷ್ ಓಕೆ, ಆದರೆ ನಮ್ಮದೇ ದೇಶದ ಹಿಂದಿ ಏಕೆ ಬೇಡ” ಕಿಚ್ಚನಿಗೆ ಸೈಕೋ ನಟಿ ಅನಿತಾ ಭಟ್ ತಿರುಗೇಟು??

ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ನಡುವಿನ ‘ರಾಷ್ಟ್ರ ಭಾಷೆ’ ಕುರಿತ ಟ್ವೀಟ್ ಮಾತುಕತೆ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ್ದ ಸುದೀಪ್ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದ ಅಜಯ್ ದೇವಗನ್ ‘ ನಿಮ್ಮ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಅಂತೀರಿ. ಹಾಗಿದ್ದಲ್ಲಿ ನಿಮ್ಮ ಚಿತ್ರಗಳನ್ನೇಕೆ ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ಮುಂದೆಯೂ ಕೂಡ ಇದು ನಮ್ಮ ರಾಷ್ಟ್ರಭಾಷೆಯಾಗಿಯೇ ಇರಲಿದೆ.’ ಎಂದು ಟ್ವೀಟ್ ಮಾಡಿದ್ದರು. ಇದು ಸಹಜವಾಗಿ ಕನ್ನಡಿಗರನ್ನು ಕೆರಳಿಸಿದೆ.

ಈ ಬಗ್ಗೆ ಕನ್ನಡ ಚಿತ್ರರಂಗದ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ಸುದೀಪ್ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಹಿಂದಿಯನ್ನು ರಾಷ್ಟ್ರಭಾಷೆ ಎಂದ ಅಜಯ್ ದೇವಗನ್ ಮಾತನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಿಚ್ಚ ಸುದೀಪ್‌ ಬೆಂಬಲಕ್ಕೆ ಕಿಚ್ಚನ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ನಟರ ಅಭಿಮಾನಿಗಳು ,ಚಿತ್ರರಂಗದ ಪ್ರಮುಖರು ಜೊತೆಗೆ ರಾಜಕಾರಣಿಗಳು ಕೂಡ ನಿಂತಿದ್ದಾರೆ. ಈ ಮದ್ಯೆ ಕೆಲವು ಅವಿವೇಕಿಗಳು ಕಿಚ್ಚನ ಮಾತನ್ನು ವಿರೋಧಿಸಿ ಹಿಂದಿ ಮೇಲಿನ ಪ್ರೇಮವನ್ನು ಪ್ರದರ್ಶಿಸುವ ಮೂಲಕ ದಡ್ಡತನ ಮೆರೆದಿದ್ದಾರೆ.

 

 

ಇದೀಗ ‘ಸೈಕೋ’ ಖ್ಯಾತಿಯ ನಟಿ ಅನಿತಾ ಭಟ್ ಕೂಡ ಹಿಂದಿ ಭಾಷೆಗೆ ಸಪೋರ್ಟ್ ಮಾಡುವ ಮೂಲಕ ಕಿಚ್ಚ ನಿಲುವಿಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿದ್ದಾರೆ. ಹಿಂದಿ ಹೇರಿಕೆ ವಿರೋಧಿಸುವ ಕನ್ನಡಪರ ಹೋರಾಟಗಾರರನ್ನು ಅಪಹಾಸ್ಯ ಮಾಡಿ ಮಾಡಲಾಗಿದ್ದ ಕಿಡಿಗೇಡಿಯೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅನಿತಾ ಭಟ್ “ಹಿಂದಿ ನಮಗೆ ಬೇಕು” ಎಂಬರ್ಥದಲ್ಲಿ ರಿಪ್ಲೆ ಮಾಡಿದ್ದಾರೆ.

 

 

“ಹಿಂದಿ ಯಾಕೆ ಬೇಡ? ನಮ್ಮ ಭಾಷೆ ಮೇಲೆ ಪ್ರೀತಿ ಇರಲಿ, ಆದರೆ ಬೇರೆ ಭಾಷೆನ ದ್ವೇಷಿಸೋದು ಯಾಕೆ ಅಂತ ಗೊತ್ತಾಗ್ತಿಲ್ಲ. ಕರ್ನಾಟಕದಲ್ಲಿ ಕನ್ನಡಾನೇ ಮಾತಾಡ್ದೆ ಇರೋವ್ರು ಎಷ್ಟೊಂದು ಜನ ಇದ್ದಾರೆ. ಅವರ ಜೊತೆ ವ್ಯವಹರಿಸೋದಕ್ಕೆ ಒಂದು ಭಾಷೆ ಬೇಡ್ವಾ? ಇಂಗ್ಲಿಷ್ ಓಕೆ ಆದರೆ ನಮ್ಮದೇ ದೇಶದ ಇನ್ನೊಂದು ಭಾಷೆ ಬೇಡ” ಎಂದು ಅನಿತಾ ಭಟ್ ಟ್ವೀಟ್ ಮಾಡಿದ್ದು ಇದು ಕಿಚ್ಚನ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದಂತಿದೆ ಎಂದು ಕನ್ನಡಾಭಿಮಾನಿಗಳು ಹೇಳುತ್ತಿದ್ದಾರೆ.

 

 

ಅಸಲಿಗೆ ನಮಗೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಆದಾಗ್ಯೂ ಹಿಂದಿಗೆ ಏಕೆ ವಿಶೇಷ ಸ್ಥಾನಮಾನ ಎಂಬುದು ಕನ್ನಡಿಗರ ಪ್ರಶ್ನೆ. ಆದರೆ ಕನ್ನಡ ಚಿತ್ರಗಳಲ್ಲೇ ನಟಿಸಿ ಹೆಸರು ಮಾಡಿರುವ ಅನಿತಾ ಅವರ ಹಿಂದಿ ಪ್ರೇಮಕ್ಕೆ ಕನ್ನಡ ಚಿತ್ರರಂಗದ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top
go