ಬಿಗ್ ಬಾಸ್ ಸೀಸನ್-1ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಫೇಮಸ್ ಆಗಿದ್ದ ಋಷಿಕುಮಾರ ಅಲಿಯಾಸ್ ಕಾಳಿ ಸ್ವಾಮಿಗೆ ನೆನ್ನೆ ರಾತ್ರಿ ಕನ್ನಡ ಪರ ಹೋರಾಟಗಾರರು ಮಸಿ ಬಳಿದು ಪ್ರತಿಭಟನೆ ಮಾಡಿದ್ದರು. ನಾಡಿನ ಹೆಮ್ಮಯ ರಾಷ್ಟ್ರಕವಿ ಕುವೆಂಪು, ಮತ್ತು ನಾಡಪ್ರಭು ಕೆಂಪೇಗೌಡ ಅವರನ್ನು ಅವಮಾನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಋಷಿಕುಮಾರ ಮುಖಕ್ಕೆ ಮಸಿ ಬಳೆಯಲಾಯಿತು.
ನಾಡ ಪ್ರಭು ಕೆಂಪೇಗೌಡ ಹಾಗೂ ಮಹಾನ್ ಕವಿ ಕುವೆಂಪು ಅವರ ವಿರುದ್ಧ ಹೇಳಿಕೆ ಕೊಟ್ಟವ ಯಾರಾದರೇನು?
ಅವನ ಮುಖಕ್ಕೆ ಕಪ್ಪು ಮಸಿ ಬಳಿದವರು "ಕಿಡಿಗೇಡಿಗಳು" ಹೇಗ್ ಆಗುತ್ತಾರೆ ಸ್ವಾಮಿ? @tv9kannada https://t.co/5YZJxxMkwr— ಅನಾಮಧೇಯಾ (@_anaamadheyaa) May 13, 2022
ಬೆಂಗಳೂರಿನ ಮಲ್ಲೇಶ್ವರ ಬಳಿಯಿರುವ ಗಂಗಮ್ಮ ದೇವಾಲಯದಲ್ಲಿ ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿಯನ್ನು ಕನ್ನಡಪರ ಕಾರ್ಯಕರ್ತರು ಅಡ್ಡಹಾಕಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಾಳಿ ಸ್ವಾಮಿಗೂ ಕನ್ನಡಪರರಿಗೂ ಮಾತಿನ ಚಕಮಕಿ ನಡೆಯಿತು.. ಆಗ ನೋಡನೋಡುತ್ತಿದ್ದಂತೆ ಋಷಿಕುಮಾರ ಅವರ ಮುಖಕ್ಕೆ ಮಸಿ ಬಳಿಯಲಾಯಿತು. ಕಾಳಿ ಸ್ವಾಮಿಗೆ ಮಸಿ ಬೆಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
“ನಾಡದ್ರೋಹಿಗಳಿಗೆ ಮಸಿ ಹಚ್ಚದೇ ಏನು ಫೇರ್ ಆ್ಯಂಡ್ ಲವ್ಲಿ ಹಚ್ಚಬೇಕಾ…?”
~ಪೂಚಂತೇ
ಏ ನಾಡದ್ರೋಹಿ @tv9kannada ಅವರೆಂಗೆ ಕಿಡಿಗೇಡಿಗಳಾಗ್ತಾರೋ ತಲೆಕೆಟ್ಟಿದೆಯಾ? pic.twitter.com/QED2EchN4b
— CHINGARI TALKS ✨ (@Sharathdas6) May 13, 2022
ಋಷಿಕುಮಾರಗೆ ಮಸಿ ಬಳಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡ ಸುದ್ದಿ ವಾಹಿನಿಗಳು ಕೂಡ ಇದನ್ನು ವರದಿ ಮಾಡಿ ಪ್ರಸಾರ ಮಾಡಿದವು. ಆದರೆ ಸದಾ ಕನ್ನಡಪರರ ವಿರೋಧ ಕಟ್ಟಿಕೊಳ್ಳುವ ಟಿವಿ9 ವಾಹಿನಿ ಮಾತ್ರ ಕನ್ನಡಿಗರನ್ನ ಮತ್ತೆ ಕೆಣಕಿದೆ.. “ಕಿಡಿಗೇಡಿಗಳಿಂದ ಕಾಳಿ ಸ್ವಾಮಿ ಮುಖಕ್ಕೆ ಮಸಿ” ಎಂಬಂತ ಹೆಡ್ ಲೈನ್ ಗಳನ್ನ ಪ್ರಸಾರ ಮಾಡಿದೆ. ಈ ಮೂಲಕ ಕನ್ನಡಪರರನ್ನು ಕಿಡಿಗೇಡಿಗಳು ಎಂದು ಕರೆದು TV9 ಅವಮಾನ ಮಾಡಿದೆ..
ಕನ್ನಡ ಪರ ಹೋರಾಟಗಾರರು ,ಸರಿಯಾಗಿ ಕೆಲಸ ಮಾಡಿದರೆ. ಕನ್ನಡ ಅಭಿಮಾನಗಳನ್ನು
ಕಿಡಿಗೇಡಿಗಳು ಎಂದು ಬಿಂಬಿಸಿ ಅವಮಾನ ಮಾಡಿದೆ ಈ @tv9kannada #bantotv9kannada ಅಭಿಯಾನ ಆರಂಭಿಸಿ, ಕನ್ನಡಿಗರ ವಿರುದ್ದ ಯವುದೇ ಮಾದ್ಯಮ ಈ ರೀತಿ ವರ್ತನೆ ಮಾಡಿದರೆ,ban ಮಾಡುವ ಅಭಿಯಾನ ಆರಂಭಿಸಿ
ಈ ಮಾದ್ಯಮದ ವಿರುದ್ದ ಪ್ರತಿಭಟನೆಯ ಮಾಡಬೇಕು ಎಂದು ಆಗ್ರಹಿಸುತೇನೆ pic.twitter.com/Nsi3SQd9n0— Mallesh C Gowda/ಮಲ್ಲೇಶ.ಸಿ (@Mallesha_C_) May 13, 2022
ಅತ್ತ ಕನ್ನಡಪರ ಕಾರ್ಯಕರ್ತರ ಮೇಲೆ ‘ಕಿಡಿಗೇಡಿಗಳು’ ಎಂಬ ಪದ ಪ್ರಯೋಗ ಮಾಡಿದ್ದಕ್ಕೆ ಸದ್ಯ ಟಿವಿ9 ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ.. ಸಾಮಾಜಿಕ ಜಾಲತಾಣದ ಮೂಲಕ ಟಿವಿ9 ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನೆಟ್ಟಿಗರು ಕೂಡಲೇ ಟಿವಿ9
ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.. “ನಾಡದ್ರೋಹಿಗಳಿಗೆ ಮಸಿ ಹಚ್ಚದೇ ಏನು ಫೇರ್ ಆ್ಯಂಡ್ ಲವ್ಲಿ ಹಚ್ಚಬೇಕಾ…?” ಎಂಬ ಪೂರ್ಣಚಂದ್ರ ತೇಜಸ್ವಿ ಅವರ ಹೇಳಿಕೆಯನ್ನು ಕನ್ನಡಿಗರು ಉಲ್ಲೇಖಿಸಿದ್ದಾರೆ..
ಕರ್ನಾಟಕ ಕನ್ನಡ ಕೆಂಪೇಗೌಡ ವಿರೋಧಿ ಟಿವಿ ಚಾನೆಲ್ ಬೀಗ ಜಡಿದು ಕರ್ನಾಟಕ ದ್ರೋಹ ಕೇಸ್ ದಾಖಲಿಸಿ ಕನ್ನಡಿಗರನ್ನು ಕಿಡಿಗೇಡಿಗಳು ಎಂದು ನ್ಯೂಸ್ ಮಾಡಿದ್ದಾರೆ pic.twitter.com/X8MO7YF3vt
— Basheer Ragipete (@BasheerRagipet7) May 12, 2022
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
