fbpx
ಸಮಾಚಾರ

ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ

ರಾಜ್ಯದ ಎಲ್ಲಾ ಮದರಸಾಗಳಲ್ಲಿ ಇನ್ನು ಮುಂದೆ ಪ್ರತಿದಿನವೂ ತರಗತಿ ಶುರುವಾಗುವ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತೆ ಗಾಯನ ಮಾಡಬೇಕು ಎಂದು ಉತ್ತರಪ್ರದೇಶ ಸರಕಾರ ಆದೇಶ ಹೊರಡಿಸಿದೆ. ಮೇ 12ರ ಗುರುವಾರದಿಂದಲೇ ಆದೇಶ ಜಾರಿಗೆ ಬರಲಿದ್ದು, ಉತ್ತರಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ ಸಚಿವ ದಾನಿಷ್‌ ಆಜಾದ್‌ ಅನ್ಸಾರಿ ಅಧಿಸೂಚನೆ ಹೊರಡಿಸಿದ್ದಾರೆ.

ಮುಂಬರುವ ಶೈಕ್ಷಣಿಕ ಅವಧಿಯಿಂದ ತರಗತಿಗಳು ಪ್ರಾರಂಭವಾಗುವ ಮೊದಲು ರಾಜ್ಯದ ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶ ಪಾಲನೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ವಹಿಸಲಾಗಿದೆ.

ಈವರೆಗೆ ಮದರಸಾಗಳಲ್ಲಿ ಹಮ್‌್ದ ಹಾಗೂ ಸಲಾಂ ಪ್ರಾರ್ಥನೆಗಳನ್ನು ತರಗತಿ ಆರಂಭಕ್ಕೂ ಮುನ್ನ ಮಾಡಲಾಗುತ್ತಿತ್ತು. ಕೆಲವು ಕಡೆ ರಾಷ್ಟ್ರಗೀತೆಯನ್ನೂ ಹಾಡಲಾಗುತ್ತಿತ್ತು. ಆದರೆ ಅದು ಕಡ್ಡಾಯವಾಗಿರಲಿಲ್ಲ. ಈಗ ಕಡ್ಡಾಯವಾಗಿದೆ ಎಂದು ಮದರಿಸ್‌ ಅರೇಬಿಯಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದಿವಾನ್‌ ಸಾಹಬ್‌ ಜಮಾನ್‌ ಖಾನ್‌ ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ 16,461 ಮದರಸಾಗಳಿದ್ದು, ಆ ಪೈಕಿ 560 ಮದರಸಾಗಳು ಸರ್ಕಾರದ ಅನುದಾನ ಪಡೆಯುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top