ನಾಡಪ್ರಭು ಕೆಂಪೇಗೌಡ ಹಾಗೂ ಕುವೆಂಪು ರಚಿತ ನಾಡಗೀತೆಗೆ ಅವಮಾನ ಎಸಗಿದ್ದಾರೆ ಎಂಬ ಆರೋಪದ ಮೇಲೆ ವಿವಾದಾತ್ಮಕ ಕಾಳಿ ಸ್ವಾಮಿಗೆ ಕನ್ನಡಪರ ಹೋರಾಟಗಾರರು ಮಸಿ ಬೆಳೆದಿರುವ ಘಟನೆ ನಡೆದಿದೆ.
ರಾಷ್ಟ್ರ ಕವಿ ಕುವೆಂಪು ಅವರನ್ನು ಅವಮಾನಿಸಿದ ಕಾಳಿ ಅಸಾಮಿಗೆ ಕಪ್ಪು ಮಸಿ ಬಳಿದ ಕನ್ನಡ ಪರ ಹೋರಾಟಗಾರರು.
🤦🤦🤒🤒. pic.twitter.com/x06orVMgwh— ಉಮ್ಮರ್ ಬ್ಯಾರಿ ಸಾಲೆತ್ತೂರು/Ummar salethur (@USalathur) May 12, 2022
ಬೆಂಗಳೂರಿನ ಮಲ್ಲೇಶ್ವರ ಬಳಿಯಿರುವ ಗಂಗಮ್ಮ ದೇವಾಲಯದಲ್ಲಿ ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿಯನ್ನು ಕನ್ನಡಪರ ಕಾರ್ಯಕರ್ತರು ಅಡ್ಡಹಾಕಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಅವರ ಮುಖಕ್ಕೆ ಮಸಿ ಬಳಿದರು. ಕಾಳಿ ಸ್ವಾಮಿಗೆ ಮಸಿ ಬೆಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ
ಏನಿದು ವಿವಾದ:
ಕೆಲವು ದಿನಗಳ ಹಿಂದೆ ಕಾಳಿಸ್ವಾಮಿ ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅಲ್ಲದೆ ಕುವೆಂಪು ರಚಿತ ನಾಡಗೀತೆಯಲ್ಲಿ ಬರುವ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಸಾಲಿನ ಬಗ್ಗೆ ವ್ಯಂಗ್ಯವಾದಿದ್ದರು. ಇದು ಸಹಜವಾಗಿ ಕನ್ನಡಪರ ಹೋರಾಟಗಾರರನ್ನು ಕೆರಳಿಸಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
