fbpx
ಸಮಾಚಾರ

ಇಂದಿನ ಪಂದ್ಯದಲ್ಲಿ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ RCB ! RCB ಸಂಭಾವ್ಯ ಪ್ಲೇಯಿಂಗ್ 11 ಇಂತಿದೆ

ಐಪಿಎಲ್ ನಲ್ಲಿ ಇಂದು ಡುಪ್ಲೆಸ್ಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇಂದಿನ ಪಂದ್ಯ ಉಭಯ ತಂಡಗಳಿಗೆ ಬಹಳ ಮುಖ್ಯವಾಗಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಒಂದು ಮಹತ್ವದ ಬದಲಾವಣೆ ಯೊಂದಿಗೆ ಆರ್ ಸಿ ಬಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಮೇಲ್ನೋಟಕ್ಕೆ ಗಮನಿಸಿದರೆ ಆರ್ ಸಿ ಬಿ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಇಂದ ಆರ್ ಸಿ ಬಿ ಗೆ ದೊಡ್ಡ ಮಟ್ಟದ ತೊಂದರೆ ಏನು ಆಗುತ್ತಿಲ್ಲ. ಏಕೆಂದರೆ ನಾಯಕ ಡುಪ್ಲೆಸ್ಸಿ, ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಹೀಗೆ ಉಳಿದ ಆಟಗಾರರು ಜವಾಬ್ದಾರಿಯುತ ಆಟವನ್ನು ಆಡುತ್ತಿದ್ದಾರೆ.

ಆರ್ ಸಿ ಬಿ ಗೆ ಹೆಚ್ಚಾಗಿ ತಲೆ ನೋವಾಗಿರೋದು ಬೌಲಿಂಗ್ ವಿಭಾಗ. ಹ್ಯಾಝೆಲ್ವುಡ್ ಆಗಮನದಿಂದ ಬೌಲಿಂಗ್ ವಿಭಾಗ ಕೊಂಚ ಮಟ್ಟಿಗೆ ಸರಿ ಹೋಗಿದೆ. ಆದರೆ ಆರ್ ಸಿ ಬಿ ಗೆ ದೊಡ್ಡ ಸಮಸ್ಯೆ ಆಗಿರೋದು ಸಿರಾಜ್ ಅವರ ಪರ್ಫಾರ್ಮೆನ್ಸ್. ಅವರನ್ನು ರಿಟೈನ್ ಮಾಡಿದರು ಯಾವುದೇ ಪ್ರಯೋಜನವಿಲ್ಲ. ಏಕಂದರೆ ಆಡಿರುವ 12 ಪಂದ್ಯದಲ್ಲಿ ಅವರು ಕಬಳಿಸಿರುವುದು ಕೇವಲ 8 ವಿಕೆಟ್ ಮಾತ್ರ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ ಅಥವಾ ಚಾಮ ಮಿಲಿಂದ್ ಅವರಿಗೆ ಅವಕಾಶ ನೀಡುವ ಎಲ್ಲ ಸಾಧ್ಯತೆಗಳಿವೆ.

ಆರ್ ಸಿ ಬಿ ಸಂಭಾವ್ಯ ಪ್ಲೇಯಿಂಗ್ 11:
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಜೋಶ್ ಹ್ಯಾಜಲ್​ವುಡ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top