fbpx
ಸಮಾಚಾರ

ಇಂದು RCB ಗೆದ್ದರೆ ಪಾಯಿಂಟ್ಸ್ ಟೇಬಲ್ ನಲ್ಲಿ ದೊಡ್ಡ ಬದಲಾವಣೆಯೇ ಆಗುತ್ತದೆ- ಏನದು ಗೊತ್ತಾ?

ಐಪಿಎಲ್ ನಲ್ಲಿ ಇಂದು ಡುಪ್ಲೆಸ್ಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಪ್ಲೇ ಆಫ್ ಕನಸನ್ನು ಜೀವಂತಗೊಳಿಸಲು ಇಂದಿನ ಪಂದ್ಯ ಉಭಯ ತಂಡಗಳಿಗೆ ಬಹಳ ಮುಖ್ಯವಾಗಿದೆ.

ಆರ್ ಸಿ ಬಿ ಆಡಿರುವ 12 ಪಂದ್ಯದಲ್ಲಿ 7 ರಲ್ಲಿ ಗೆದ್ದು 5 ರಲ್ಲಿ ಸೋತು 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 4 ನೆ ಸ್ಥಾನದಲ್ಲಿದೆ. ಇನ್ನು ಪಂಜಾಬ್ ತಂಡ ಆಡಿರುವ 11 ರಲ್ಲಿ 5 ರಲ್ಲಿ ಗೆದ್ದು 6 ರಲ್ಲಿ ಸೋತು ಅಂಕಪಟ್ಟಿಯಲ್ಲಿ 8 ನೆ ಸ್ಥಾನದಲ್ಲಿದೆ. ಈಗಾಗಿ ಇಂದಿನ ಪಂದ್ಯ ಗೆಲ್ಲಲು ಎರಡು ತಂಡಗಳು ಸಮಬಲ ಹೋರಾಟ ನಡೆಸುತ್ತದೆ.

ಇದೆಲ್ಲದರ ನಡುವೆ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಯಾವುದಾದರು ಒಂದು ತಂಡ ಗೆದ್ದರೆ ಪಾಯಿಂಟ್ಸ್ ಟೇಬಲ್ ನಲ್ಲಿ ಮಹತ್ವದ ಬದಲಾವಣೆ ಆಗೋದು ಖಚಿತ. ಅದರಲ್ಲೂ ಆರ್ ಸಿ ಬಿ ಗೆದ್ದರೆ ಉಳಿದ ತಂಡಗಳ ಪರಿಸ್ಥಿತಿ ಚಿಂತಾಜನಿಕವಾಗುತ್ತದೆ. ಏಕೆಂದರೆ ಇಂದಿನ ಪಂದ್ಯದಲ್ಲಿ ಒಂದು ವೇಳೆ ಪಂಜಾಬ್ ಗೆದ್ದರೆ ಗುಜರಾತ್ ಮತ್ತು ಲಕ್ನೋ ತಂಡಗಳ ನಡುವೆ ಮೊದಲೆರಡು ಸ್ಥಾನಗಳು ಭದ್ರವಾಗುತ್ತವೆ. ಇನ್ನುಳಿದ ತಂಡಗಳೆಂದರೆ ಕೋಲ್ಕತ್ತಾ, ಡೆಲ್ಲಿ, ರಾಜಸ್ಥಾನ್ ಮತ್ತು ಸನ್ ರೈಸರ್ಸ್ ತಂಡಗಳಿಗೆ ಪ್ಲೇ ಆಫ್ ಅವಕಾಶ ಹೆಚ್ಚಿರುತ್ತೆ. ಒಂದು ವೇಳೆ ಆರ್ ಸಿ ಬಿ ಏನಾದರು ಇಂದಿನ ಪಂದ್ಯ ಗೆದ್ದರು ಅಂದರೆ ಈ ತಂಡಗಳ ಪ್ಲೇ ಆಫ್ ಕನಸು ಬಹಳ ಚಿಂತಾಜನಿಕವಾಗುದು ಪಕ್ಕ. ಇನ್ನುಇಂದು ಆರ್ ಸಿ ಬಿ ಗೆದ್ದರೆ ತನ್ನ ಪ್ಲೇ ಆಫ್ ಟಿಕೆಟ್ ಅನ್ನು ಬಹುತೇಕ ಖಚಿತಪಡಿಸ್ಕೊಂಡಂತೆ ಅರ್ಥ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top