fbpx
ಸಮಾಚಾರ

ನಿಮಗೆ ಸಲ್ಮಾನ್​ ಖಾನ್​ ಗೊತ್ತಾ? ಕಾಗಿಸೋ ರಬಾಡ ಕೊಟ್ಟ ಉತ್ತರ ಕೇಳಿ ದಂಗಾದ ನಿರೂಪಕಿ: ಅಭಿಮಾನಿಗಳು ಆಕ್ರೋಶ

ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಕಗಿಸೋ ರಬಾಡಾ ಅವರ ವಿಡಿಯೋ ಒಂದನ್ನು ಪಂಜಾಬ್ ಕಿಂಗ್ಸ್ ತಂಡ ಶೇರ್ ಮಾಡಿದ್ದೂ ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಅಸಲಿಗೆ ಈ ವಿಡಿಯೋ ದಲ್ಲಿ ಏನಿದೆ ಅಂತದ್ದು ಎಂದು ನೀವು ಯೋಚಿಸುತ್ತಿದ್ದೀರಾ. ಇದಕ್ಕೆ ಉತ್ತರ ಇಲ್ಲಿದೆ.

ಈ ವಿಡಿಯೋದಲ್ಲಿ ಸಂದರ್ಶಕಿ ರಬಾಡಾ ಅವರಿಗೆ ನಿಮಗೆ ಸಲ್ಮಾನ್ ಖಾನ್ ಗೊತ್ತಾ ಎಂದು ಕೇಳಿದಾಗ ಅವರು ನನಗೆ ಸಲ್ಮಾನ್ ಖಾನ್ ಯಾರೋ ಗೊತ್ತಿಲ್ಲ ಆದರೆ ನನಗೆ ರಶೀದ್ ಖಾನ್ ಗೊತ್ತು ಎಂದು ಹೇಳಿದರು. ಯಾವಾಗ ಈ ವಿಡಿಯೋ ಅಪ್ಲೋಡ್ ಆಯ್ತೋ ಅದು ಬಹಳಷ್ಟು ಚರ್ಚೆಗೆ ಕಾರಣವಾಯಿತು.

ಇನ್ನು ಇದಾರೆ ಕುರಿತು ಸಲ್ಮಾನ್ ಖಾನ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕೆಲವರು ಇದು ಸಲ್ಮಾನ್ ಖಾನ್ ಅವರಿಗೆ ಮಾಡಿರುವ ಅವಮಾನ ಎಂದು ಹೇಳುತ್ತಿದ್ದಾರೆ. ಇದರಿಂದ ಸಲ್ಮಾನ್ ಖಾನ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top