fbpx
ಸಮಾಚಾರ

ಸಣ್ಣ ವಿಷಯಕ್ಕೆ ಪರಸ್ಪರ ಹೊಡೆದಾಡಿಕೊಂಡ ಬೀಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು!

ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಗಲಾಟೆಗಳು ನಡೆಯುತ್ತಿರುವುದನ್ನು ನಾವು ಕೇಳಿದ್ದೇವೆ. ಇದೀಗ ಇಂತದ್ದೇ ಒಂದು ಘಟನೆ ಬೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಜನರ ಜೀವ ರಕ್ಷಿಸುವ ಹೊಣೆ ಹೊತ್ತಿರುವ ಮೆಡಿಕಲ್ ವಿದ್ಯಾರ್ಥಿಗಳೇ ಇದೀಗ ಈ ರೀತಿ ಜಗಳ ಮಾಡಿಕೊಂಡಿದ್ದಾರೆ.

ನಗರದ ಬೀಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಚುನಾವಣೆ ವಿಷಯಕ್ಕೆ ಜಗಳ ಮಾಡಿಕೊಂಡು ಒಬ್ಬರೊಬ್ಬರು ಹೊಡೆದಾಡಿಕೊಂಡಿದ್ದಾರೆ. ಎಂಬಿಬಿಎಸ್ ನ 4 ನೆೇ ವರ್ಷದ ವಿದ್ಯಾರ್ಥಿಗಳು ರಾಜಸ್ತಾನ ಮೂಲದ ವಿದ್ಯಾರ್ಥಿ ಬುರಾರಾಮ್ ಗೋಧರೆ ಅವರಿಗೆ ಒಡೆದು ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರ ಮಾಹಿತಿ ಪ್ರಕಾರ ಹಲ್ಲೆಗೊಳಗಾದ ವಿದ್ಯಾರ್ಥಿಯ ಮೂಗು, ಕಿರುಬೆರಳಿಗೆ ಗಾಯವಾಗಿದ್ದು, ಮೂಗಿನ ಶಸ್ತ್ರ ಚಿಕಿತ್ಸೆಗೆ ರಾಜಸ್ತಾನದ ಏಮ್ಸ್ ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇದರ ಕುರಿತು ಬೀಮ್ಸ್ ಆಡಳಿತಾಧಿಕಾರಿಯಿಂದ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ದಾಖಲಾದ ಕಾರಣ 15 ವಿದ್ಯಾರ್ಥಿಗಳ ವಿರುದ್ಧ FIR ದಾಖಲಿಸಿ ಅವರನ್ನು ಕಾಲೇಜ್ ಹಾಸ್ಟೆಲ್ ನಿಂದ ಹೊರಗೆ ದಬ್ಬಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top