fbpx
ಸಮಾಚಾರ

ಆಂಡ್ರೂ ಸೈಮಂಡ್ಸ್ ಅಲ್ಲದೆ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡ ಶ್ರೇಷ್ಠ ಕ್ರಿಕೆಟಿಗರು ಇವರೆ!

ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಆಂಡ್ರೂ ಸೈಮಂಡ್ಸ್ (46) ಕಾರು ಅಪಘಾತದಲ್ಲಿ ಶನಿವಾರ ಮೃತಪಟ್ಟರು. ತಾವು ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ದುರಂತ ಅಂತ್ಯ ಕಂಡರು. ಇವರು ತಮ್ಮ ವೃತಿ ಜೀವನದಲ್ಲಿ ಹಲವಾರು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡಿದ್ದಾರೆ. ಇವರಂತೆ ಇನ್ನು ಕೆಲ ಕ್ರಿಕೆಟಿಗರು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡಿದ್ದು ಅಂತವರ ಪಟ್ಟಿ ಇಲ್ಲಿದೆ.

ಆಂಡ್ರೂ ಸೈಮಂಡ್ಸ್:
ಆಸ್ಟ್ರೇಲಿಯಾ ತಂಡ ಮಾಜಿ ಕ್ರಿಕೆಟಿಗ. ಏಕಾಂಗಿಯಾಗಿ ಆಸ್ಟ್ರೇಲಿಯಾ ಪರ ಅದೆಷ್ಟೂ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಗೊತ್ತಿದ್ದೋ ಗೊತ್ತಿಲ್ದೆ ಕೆಲವು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡಿದ್ದಾರೆ. 2005 ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುವ ಪಂದ್ಯದ ಹಿಂದಿನ ದಿನ ಮದ್ಯಪಾನ ಮಾಡಿದ ಕಾರಣ ಇವರನ್ನು ಅಮಾನತ್ತು ಮಾಡಲಾಗಿತ್ತು. 2008ರಲ್ಲಿ ತಂಡದ ಮೀಟಿಂಗ್‌ಗೆ ಪಾಲ್ಗೊಳ್ಳುವ ಬದಲು ಕುಡಿದು ಫಿಶಿಂಗ್ ಮಾಡಲು ಹೋಗಿದ್ದರು. ಇದಲ್ಲದೆ ಭಾರತ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್‌ ಅವರೊಂದಿಗೆ ಪಂದ್ಯದ ನಡುವೆ ಮಂಕಿಗೇಟ್‌ ವಿವಾದದಲ್ಲೂ ಭಾಗವಾಗಿದ್ದರು. ರೇಡಿಯೋ ಸಂದರ್ಶನದಲ್ಲಿ ಕುಡಿದು ಭಾಗಿಯಾಗಿದ್ದ ಇವರು ಕಿವೀಸ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ರನ್ನು ನಿಂಧಿಸಿದ್ದರು.

 

 

ಶೋಯಬ್ ಆಖ್ತರ್‌:
ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಮಾರಕ ಬೌಲಿಂಗ್ ಇಂದಲೇ ಪ್ರಖ್ಯಾತಿಗಳಿಸಿದವರು. 2003ರಲ್ಲಿ ಬಾಲ್‌ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದು 5 ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದರು. ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಪಾಲ್ ಆಡಮ್ಸ್‌ರನ್ನು ನಿಂಧಿಸಿ 3 ಪಂದ್ಯಗಳ ನಿಷೇದಕ್ಕೆ ಒಳಗಾದರು. 2006 ರಲ್ಲಿ ತಮ್ಮ ಬೌಲಿಂಗ್ ವೇಗವನ್ನು ಹೆಚ್ಚಿಸಲು ನಿಷೇಧಿತ ಮದ್ದು ಸೇವಿಸಿ 2 ವರ್ಷಗಳ ನಿಷೇಧಕ್ಕೊಳಗಾದರು. 007ರ ಏಕದಿನ ವಿಶ್ವಕಪ್ ವೇಳೆ ತಂಡದ ಸಹ ಆಟಗಾರ ಆಸಿಫ್‌ಗೆ ಬ್ಯಾಟ್‌ನಿಂದ ಹೊಡೆದು ಮತ್ತೊಂದು ವಿವಾದಕ್ಕೀಡಾಗಿದ್ದರು.

 

 

ಕೆವಿನ್ ಪೀಟರ್ಸನ್:
ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಪೀಟರ್ಸನ್ ತಂಡದ ಕೋಚ್ ಪೀಟರ್ ಮೋರ್ಸ್‌ ಅವರೊಂದಿಗೆ
ಜಗಳ ಮಾಡಿಕೊಂಡ ಕಾರಣ ಇಸಿಬಿ ಇವರಿಬ್ಬರನ್ನು ತಂಡದಿಂದ ಹೊರ ಹಾಕಿತ್ತು. ಐಪಿಎಲ್ ನಲ್ಲಿ ಆಡಲು ಬೋರ್ಡ್ ಅನುಮತಿ ನೀಡದೆ ಇದ್ದ ಕಾರಣ 2012ರಲ್ಲಿ ಏಕದಿನ ಕ್ರಿಕೆಟ್‌ನಿಂದಲೇ ನಿವೃತ್ತಿಯಾಗಿದ್ದರು. ಕೊನೆಯದಾಗಿ 2014ರಲ್ಲಿ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಕೋಚ್‌ ಆಂಡಿ ಪ್ಲವರ್‌ ಅವರೊಂದಿಗಿದ್ದ ಮನಸ್ತಾಪದಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇವರನ್ನು ತಂಡದಿಂದ ಹೊರ ಹಾಕಿತ್ತು.

 


ಎಸ್‌. ಶ್ರೀಶಾಂತ್‌:
ಭಾರತ ವಿಶ್ವಪಕ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀಶಾಂತ್ ಮೊದಲಿನಿಂದಲೂ ವಿವಾದಗಳನ್ನು ತಮ್ಮ ಮೇಲೆ ಎಳೆದುಕೊಂಡಿದ್ದರು. 2013ರ ಐಪಿಎಲ್ ನಲ್ಲಿ ರಾಜಸ್ಥಾನ್ ಪರ ಆಡಿದ ಅವರು ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದರು. ಇದೇ ಕಾರಣಕ್ಕೆ ಬಿಸಿಸಿಐ ಇವರಿಗೆ ಅಜೀವ ನಿಷೇದಾಜ್ಞೆ ಹೇರಿತ್ತು. ಕೊನೆಗೆ ಹಲವು ವರ್ಷಗಳ ಕಾನೂನು ಹೋರಾಟ ನಡೆಸಿ ಇದರಿಂದ ಹೊರಬಂದಿದ್ದರು. ಆದರೆ ಅಷ್ಟರಲ್ಲಿ ಇವರ ಕ್ರಿಕೆಟ್ ಬದುಕು ಬಹುತೇಕ ಅಂತ್ಯವಾಗಿತ್ತು.

 

 

ಮೊಹಮ್ಮದ್ ಆಸಿಫ್:
ಪಾಕಿಸ್ತಾನದ ಮಾರಕ ವೇಗಿಗಳಲ್ಲಿ ಇವರು ಸಹ ಒಬ್ಬರು. 2008ರಲ್ಲಿ ನಿಷೇಧಿತ ಸ್ಟೆರಾಯ್ಡ್‌ ಬಳಸಿ ಸಿಕ್ಕಿಬಿದ್ದಿದ್ದರಿಂದ ಕೆಲಕಾಲ ಅವರನ್ನು ಪಿಸಿಬಿ ನಿಷೇಧಿಸಿತ್ತು. 2010ರ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಪಾಟ್ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿ ಸಲ್ಮಾನ್ ಭಟ್, ಮೊಹಮ್ಮದ್ ಅಮಿರ್ ಜೊತೆಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಜೊತೆಗೆ 5 ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top