ನಟಿ ಚೇತನಾ ರಾಜ್ ಫ್ಯಾಟ್ ಸರ್ಜರಿಯಿಂದ ಮೃತಪಟ್ಟ ನಂತರ ಇದೀಗ ಎಲ್ಲಾ ಕಡೇ ಫ್ಯಾಟ್ ಸರ್ಜರಿ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಫ್ಯಾಟ್ ಸರ್ಜರಿ ಎಂದರೆ ಏನು? ಇದು ಏಕೆ ಮಾಡುತ್ತಾರೆ? ಇದರಿಂದ ಆಗುವ ಸಮಸ್ಯೆಗಳೇನು? ಹೀಗೆ ಹಲವಾರು ಪ್ರಶ್ನೆಗಳು ಜನರ ಮನಸಲ್ಲಿ ಮೂಡಿದೆ. ಇವೆಲ್ಲ ಪ್ರಶ್ನೆಗೂ ಉತ್ತರ ನಮ್ಮ ಬಳಿ ಇದೆ.
ಫ್ಯಾಟ್ ಸರ್ಜರಿ ಎಂದರೇನು?
ಕೊಬ್ಬು ತೆಗೆಯಲು ಮಾಡುವ ಒಂದು ಸರ್ಜರಿಯನ್ನು ಫ್ಯಾಟ್ ಸರ್ಜರಿ ಎಂದು ಕರೆಯುತ್ತಾರೆ. ಇದರಲ್ಲಿ ಎರಡು ವಿಧಗಳಿವೆ. ಬಾರಿಯಾಟ್ರಿಕ್ ಮತ್ತು ಕಾಸ್ಮೆಟಿಕ್ ಲಿಪೊಸಕ್ಷನ್. ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಉದ್ದೇಶವು ತೂಕವನ್ನು ಕಡಿಮೆ ಮಾಡುವುದು.
ಇದನ್ನು ಯಾವಾಗ ಮಾಡಬೇಕು?
ಆಹಾರ ಮತ್ತು ವ್ಯಾಯಾಮ ವ್ಯಕ್ತಿಯ ದೇಹದ ತೂಕವನ್ನು ನಿಯಂತ್ರಿಸಲು ವಿಫಲವಾದಾಗ ಮತ್ತು ಹೆಚ್ಚಿನ ತೂಕವನ್ನು ಕಡಿಮೆಗೊಳಿಸಲು ಸಾಧ್ಯವಾಗದೇ ಗಂಭೀರ ಅರೋಗ್ಯ ಸಮಸ್ಯೆ ಎದುರುಸುತ್ತಿರುವವರು ಈ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಬೇಕು.
ಬಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಯ ಅಡ್ಡ ಪರಿಣಾಮಗಳು:
ಯಾವುದೇ ಶಸ್ತ್ರ ಚಿಕಿತ್ಸೆಯು ಒಂದಲ್ಲ ಒಂದು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಅದೇ ರೀತಿ ಬಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಯಿಂದ ಒಬ್ಬರು ತಮ್ಮ ಆಹಾರಕ್ರಮದಲ್ಲಿ ಶಾಶ್ವತ ಆರೋಗ್ಯಕರ ಬದಲಾವಣೆಗಳನ್ನು ಮಾಡಬೇಕು ಮತ್ತು ದೀರ್ಘಾವಧಿಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಿಯಮಿತ ವ್ಯಾಯಾಮವನ್ನು ಮಾಡಬೇಕು.
ಯಾರು ಈ ಚಿಕಿತ್ಸೆ ಮಾಡಿಸಿಕೊಳ್ಳಬಾರದು?
ಬಾಡಿ ಮಾಸ್ ಇಂಡೆಕ್ಸ್ (BMI) 40 ಅಥವಾ ಅದಕ್ಕಿಂತ ಹೆಚ್ಚಿನ (ತೀವ್ರ ಸ್ಥೂಲಕಾಯತೆ) ಇರುವವರಿಗೆ ಮತ್ತು ಟೈಪ್-2 ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ತೀವ್ರ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮುಂತಾದ ಗಂಭೀರ ತೂಕ-ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇದನ್ನು ಮಾಡಿಸಿಕೊಳ್ಳಬಾರದು.
ಲಿಪೊಸಕ್ಷನ್ ಸರ್ಜರಿ ಎಂದರೇನು?
ಇದು ಕೂಡ ತೂಕ ಇಳಿಸಲು ಮಾಡುವ ಶಸ್ತ್ರ ಚಿಕಿತ್ಸೆಯ ಒಂದು ವಿಧಾನ. ಇದು ಹೆಚ್ಚಾಗಿ ಸೌಂದರ್ಯದ ಉದ್ದೇಶಕ್ಕಾಗಿ ಮಾಡಿಸಿಕೊಳ್ಳುತ್ತಾರೆ. ಇದನ್ನು ಸ್ಥಳೀಯ ಅರಿವಳಿಕೆ ಅಡಿಯಲ್ಲಿ ಮಾಡಲಾಗುತ್ತದೆ.
ಫ್ಯಾಟ್ ಸರ್ಜರಿಯ ಅಪಾಯಗಳೇನು?
ಇದರಿಂದ ಎಂಬಾಲಿಸಮ್ ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಎದುರಾಗಬಹುದು. ಇದು ಶ್ವಾಸಕೋಶದ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು, ತೀವ್ರವಾದ ಹೃದಯಾಘಾತವಾಗಬಹುದು. ಮತ್ತು ಸರಿಯಾದ ಸಿದ್ಧತೆಯಿಲ್ಲದೆ ಶಸ್ತ್ರಚಿಕಿತ್ಸೆ ಮಾಡಿದರೆ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿ ಜೀವವೇ ಹೋಗಬಹುದು.
ಲಿಪೊಸಕ್ಷನ್ ಅಪಾಯಗಳೇನು?
ಇದು ಕೊಬ್ಬಿನ ಕೋಶವನ್ನು ಶಾಶ್ವತವಾಗಿ ತೆಗೆದುಹಾಕಿ ದೇಹದ ಆಕಾರವನ್ನು ಬದಲಾಯಿಸುತ್ತದೆ. ಈ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಆರೋಗ್ಯಕರ ಜೀವನಶೈಲಿಯನ್ನು ನಡೆಸದಿದ್ದರೆ ಆರೋಗ್ಯದ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರುತ್ತದೆ. ಇನ್ನು ಹೆಚ್ಚು ಚರ್ಮವನ್ನು ತೆಗೆದುಹಾಕದಿದ್ದರೆ ಚರ್ಮದಲ್ಲಿ ಗಂಟು ಅಥವಾ ಡೆಂಟ್ಗಳು ಇರಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
