fbpx
ಸಮಾಚಾರ

ಚೇತನಾ ರಾಜ್​ ನಿಧನದ ಬಗ್ಗೆ ರಮ್ಯಾ ಪ್ರತಿಕ್ರಿಯೆ; ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

ಚಿತ್ರರಂಗದಲ್ಲಿ ಯಶಸ್ಸು ಗಳಿಸಬೇಕು ಎಂಬ ಕನಸು ಹೊತ್ತಿದ್ದ 22ರ ಹರೆಯದ ನಟಿ ಚೇತನಾ ರಾಜ್ ನೆನ್ನೆ ನಿಧನರಾಗಿದ್ದು ದುಃಖದ ಸಂಗತಿ. ಅವರು ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಚಿಕಿತ್ಸೆ ಫಲಕಾರಿಯಾಗದೆ ಶಸ್ತ್ರಚಿಕಿತ್ಸೆಯ ವೈಪಲ್ಯದದಿಂದ ಸಾವನ್ನಪ್ಪಿದ್ದರು. ಈ ಘಟನೆ ಕುರಿತು ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿದ್ದ ಕಿರುತೆರೆ ನಟಿ ಚೇತನಾ ರಾಜ್‌ (22) ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಅವರು, ಚಿತ್ರೋದ್ಯಮದಲ್ಲಿ ಕಂಡುಬರುವ ತಾರತಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಬರಹವೊಂದನ್ನೂ ಪೋಸ್ಟ್ ಮಾಡಿದ್ದಾರೆ.

 

 

‘’ಚಿತ್ರರಂಗದಲ್ಲಿ ಮಹಿಳೆಯರಿಗೆ ಅವಾಸ್ತವಿಕ ಬ್ಯೂಟಿ ಸ್ಟಾಂಡರ್ಡ್‌ಗಳನ್ನು ಹೇರಲಾಗಿದೆ. ಮಹಿಳೆಯರು ನಿರ್ದಿಷ್ಟ ರೀತಿಯಲ್ಲಿಯೇ ಕಾಣಬೇಕು ಎಂಬ ಒತ್ತಡ ಹೇರಲಾಗುತ್ತಿದೆ. ನನ್ನ ಪಾದದಲ್ಲಿದ್ದ ಗೆಡ್ಡೆಯನ್ನು ತೆಗೆದ ನಂತರ ನಾನೂ ಕೂಡ ತೂಕ ಇಳಿಸಲು ಒದ್ದಾಡುತ್ತಿದ್ದೇನೆ. ನಾನೀಗ ತೂಕ ಇಳಿಸಿಕೊಳ್ಳುತ್ತಿದ್ದೇನೆ. ಆದರೆ, ನನ್ನದೇ ರೀತಿಯಲ್ಲಿ ನನಗೆ ಹೊಂದಾಣಿಕೆಯಾಗುವಂತೆ ತೂಕ ಇಳಿಸಿಕೊಳ್ಳುತ್ತಿದ್ದೇನೆ. ಆದರೆ, ಈ ಬ್ಯೂಟಿ ಸ್ಟಾಂಡರ್ಡ್ ಪುರುಷರಿಗೆ ಇಲ್ಲ.’’

 

 

“ಡೊಳ್ಳುಹೊಟ್ಟೆ ಇಟ್ಟುಕೊಂಡು, ತಲೆಗೆ ವಿಗ್​ ಹಾಕಿಕೊಂಡಿರುವ 65 ವರ್ಷ ವಯಸ್ಸಿನ ನಟನನ್ನು ಈಗಲೂ ಹೀರೋ ಅಂತ ಪರಿಗಣಿಸಲಾಗುತ್ತದೆ. ಆದರೆ ಮಹಿಳೆಯ ವಿಚಾರದಲ್ಲಿ ಹಾಗಿಲ್ಲ. ಆಕೆಯ ದೇಹದ ತೂಕ ಸ್ವಲ್ಪ ಹೆಚ್ಚಿದರೂ ಕೂಡ ಅವಳನ್ನು ಆಂಟಿ, ಅಜ್ಜಿ ಅಂತ ಟ್ರೋಲ್​ ಮಾಡಲಾಗುತ್ತದೆ. ಮಹಿಳೆಯರು ಹೇಗಿರಬೇಕು ಎಂಬುದನ್ನು ಜಗತ್ತು ಹೇಳುವುದು ಬೇಡಈ ಇಂಡಸ್ಟ್ರಿ ನಟಿಯರ ಪಾತ್ರದ ವಿಚಾರವಾಗಿ ಇನ್ನೂ ಸುಧಾರಣೆ ಆಗಬೇಕು. ಇಂಡಸ್ಟ್ರಿ ಬದಲಾಗಬೇಕು. ಈ ವಿಷಯದ ಕುರಿತು ಮಹಿಳೆ ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ರಮ್ಯಾ ಆಗ್ರಹಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top