ಕನ್ನಡ ಚಿತ್ರರಂಗದ ಈ ತಲೆಮಾರಿನ ನಾಯಕ ನಟರನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮುಂಚೂಣಿಯ ನಟರ ಸಾಲಿನಲ್ಲಿ ಮೊದಲು ನಿಲ್ಲುವವರು ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್. ತಮ್ಮ ವಿಭಿನ್ನ ಕಂಠ, ಮ್ಯಾನರಿಸಂ ಮತ್ತು ಮನೋಜ್ಞ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಸುದೀಪ್ ಅವರ ಜನಪ್ರಿಯತೆ ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯ, ದೇಶಗಳಲ್ಲಿಯೂ ಆವರಿಸಿದೆ.
ಇಂಥಾ ಕಿಚ್ಚ ಸುದೀಪ್ ಅವರ ಕುರಿತು ಮಹತ್ವದ ಮತ್ತು ಹೆಮ್ಮೆ ಪಡುವ ಮಾಹಿತಿಯೊಂದು ತಡವಾಗಿ ರಿವೀಲ್ ಆಗಿದೆ. ‘ಕ್ರಿಕೆಟ್ ಕಾಶಿ’ ಎಂದೇ ಕರೆಯಲ್ಪಡುವ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು ಇದೆ ಅನ್ನೋ ವಿಚಾರವನ್ನ ಸ್ವತಃ ನಟ ಕಿಚ್ಚ ಸುದೀಪ್ ಅವರೇ ರಿವೀಲ್ ಮಾಡಿದ್ದಾರೆ.
Our Kiccha, aka ‘Captain Cool’ ❤️
His name is on the Lord’s Cricket Ground!
Thanks for this fantastic chat @KicchaSudeep
Full interview coming very soon! #KicchaSudeep #sudeep #VikrantRona #kannada https://t.co/9kuAkgBAEl pic.twitter.com/rYK3fC3zQN— Pranava (@RedGeneral18) May 19, 2022
ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿರುವ ನಟ ಕಿಚ್ಚ ಸುದೀಪ್, ತಮ್ಮ ಹೆಸರು ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಗೋಡೆಯ ಇಟ್ಟಿಗೆ ಮೇಲಿರುವ ಮಹತ್ವದ ವಿಚಾರವನ್ನ ತಿಳಿಸಿದ್ದಾರೆ. ಹೀಗೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಮಹತ್ವದ ಮಾಹಿತಿಯನ್ನ ರಿವೀಲ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಲಾರ್ಡ್ಸ್ ನಲ್ಲಿ ಕ್ರಿಕೆಟ್ ಆಡಿದ್ದರು ಸುದೀಪ್:
ಸುದೀಪ್ ನಟನೆಯಷ್ಟೇ ಅಲ್ಲ, ಕ್ರಿಕೆಟ್’ನಲ್ಲೂ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೆಲಬ್ರಿಟಿ ಕ್ರಿಕೆಟ್ ಲೀಗ್ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್’ಮ್ಯಾನ್ ಆಗಿ ಕಿಚ್ಚ ಸುದೀಪ್ ಸಾಕಷ್ಟು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಕೆಸಿಸಿ ಎಂಬ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ಸನ್ನು ಕೂಡ ಕಂಡಿದ್ದಾರೆ. ಅಷ್ಟೇ ಅಲ್ಲದೆ ಇಂಗ್ಲೆಂಡ್ ನ ಲಾರ್ಡ್ಸ್ನಲ್ಲಿ ಸುದೀಪ್ ನಾಯಕತ್ವದ ವಿಶನೇರ್ ಕರ್ನಾಟಕ ತಂಡ ಟ್ರೋಫಿ ಗೆದ್ದು ಬೀಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
