fbpx
ಸಮಾಚಾರ

ಐಪಿಎಲ್ ನಲ್ಲಿ ವಿಶೇಷ ಸಾಧನೆ ಮಾಡಲು ಚಹಲ್ ಗೆ ಬೇಕಾಗಿರೋದು ಕೇವಲ ಒಂದು ಹೆಜ್ಜೆ ಮಾತ್ರ!

ಪ್ರಸ್ತುತ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಶ್ರೇಷ್ಠ ಸ್ಪಿನ್ನರ್ ಯುಜುವೇಂದ್ರ ಚಹಲ್ ಉತ್ತಮ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಇವರ ಹೆಸರಲ್ಲಿ ಮತ್ತೊಂದು ಧಾಖಲೆ ನಿರ್ಮಿಸಲು ಬೇಕಿರೋದು ಕೇವಲ ಒಂದೇ ವಿಕೆಟ್.

ಆರ್ ಸಿ ಬಿ ಪರ ಉತ್ತಮ ಬೌಲಿಂಗ್ ಮಾಡಿ ತಂಡಕ್ಕೆ ಬ್ರೇಕ್ ಥ್ರೂ ಕೊಡುತಿದ್ದ ಯುಜಿ ಇದೀಗ ರಾಜಸ್ಥಾನ್ ತಂಡದ ಪರ ಅದೇ ರೀತಿ ಪ್ರದರ್ಶನ ತೋರುತ್ತಿದ್ದಾರೆ. ತಮ್ಮ ಸ್ಪಿನ್ ಕೈಚಳಕದಿಂದ ಈ ಬಾರಿಯ ಐಪಿಎಲ್ ನಲ್ಲಿ 26 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ ಇನ್ನೊಂದು ವಿಕೆಟ್ ಉರುಳಿಸಿದರೆ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಇದಕ್ಕೆ ಮೊದಲು ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಸಿ ಎಸ್ ಕೆ ತಂಡದ ಮಾಜಿ ಸ್ಪಿನ್ನರ್ ಇಮ್ರಾನ್ ತಾಹಿರ್(26) ಪಾತ್ರರಾಗಿದ್ದರು. ಈಗಾಗಿ ಚಹಲ್ ಇನ್ನೊಂದು ವಿಕೆಟ್ ತೆಗೆದರೆ 27 ವಿಕೆಟ್ ನೊಂದಿಗೆ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಇನ್ನು ಇಲ್ಲಿಯವರೆಗೂ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪಟ್ಟಿಯಲ್ಲಿ ಆರ್ ಸಿ ಬಿ ತಂಡದ ಬೌಲರ್ ಹರ್ಷಲ್ ಪಟೇಲ್ (32) ಮತ್ತು ಸಿ ಎಸ್ ಕೆ ತಂಡದ ಆಟಗಾರ ಡ್ವೇನ್ ಬ್ರಾವೋ(32) ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top