fbpx
ಸಮಾಚಾರ

ಅಪ್ಪನ ಲಾಕರ್ ನಿಂದ 4 ಲಕ್ಷ ಕದ್ದ 8-9 ವರ್ಷದ ಮಕ್ಕಳು!ಅಷ್ಟು ದುಡ್ಡನ್ನ ಏನು ಮಾಡಿದ್ರು ಗೊತ್ತಾ?

ಚಿಕ್ಕ ವಯಸ್ಸಿನ ಇಬ್ಬರು ಸಹೋದರರು ಸ್ನೇಹಿತರು ತೋರಿಸಿದ ದುಡ್ಡಿನ ಆಸೆಗೆ ತಮ್ಮ ತಂದೆಯ ಲಾಕರ್ ನಲ್ಲಿದ್ದ 4 ಲಕ್ಷ ಹಣ ಕದ್ದು ತಂದೆಗೆ ಅನುಮಾನ ಬರದೇ ಇರಲಿ ಎಂದು ಕೋಟ ನೋಟು ಇಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 25 ದಿನಗಳ ಕಾಲ ಸಹೋದರರು ಈ ಹಣದಲ್ಲಿ ಮಜಾ ಮಾಡಿದ್ದಾರೆ.

ಬಾಲಕರ ಕುಟುಂಬ ಸುಮಾರು 8 ವರ್ಷಗಳಿಂದ ಮೆಡ್ಚಲ್ ಜಿಲ್ಲೆಯ ಜೀಡಿಮೆಟ್ಲದ ಎಸ್‌ಆರ್ ನಾಯಕ್ ನಗರದಲ್ಲಿ ವಾಸವಾಗಿದ್ದರು. ಇವರ ತಂದೆ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು ಮತ್ತು ತಾಯಿ ಮನೆಯಲ್ಲಿ ಸಣ್ಣದೊಂದು ಚಿಲ್ಲರೆ ಅಂಗಡಿ ನಡೆಸುತ್ತಿದ್ದರು. ಈ ಅಣ್ತಮ್ಮರಿಗೆ 4-15 ವರ್ಷದ ಸಹೋದರರ ಜೊತೆ ಗೆಳೆತನ ಬೆಳೆಯಿತು.

ಬೇಸಿಗೆ ರಜೆ ಇದ್ದ ಕಾರಣ ಅಣ್ಣ ತಮ್ಮಂದಿರು ಇಬ್ಬರೇ ಮನೆಯಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಿದ್ದರು. ಇವರ ಜೊತೆ 14-15 ವರ್ಷದ ಗೆಳೆಯರು ಜೊತೆಯಾಗಿದ್ದಾರೆ. ಅಣ್ತಮ್ಮಂದಿರು ಪ್ರತಿ ದಿನ ಆಟವಾಡಲು ಹೊರಗೆ ಹೋದಾಗ ತಮ್ಮ ಜೊತೆ ಸ್ವಲ್ಪ ಹಣ ತೆಗೆದುಕೊಂಡು ಹೋಗುತ್ತಿದ್ದರು. ನಂತರ ಹತ್ತಿರ ಇದ್ದ ಬೇಕರಿಗೆ ಹೋಗಿ ತಿನಿಸುಗಳನ್ನು ಖರೀದಿಸಿ ತಮ್ಮ ಸ್ನೇಹಿತರೊಂದಿಗೆ ಅಂಚಿಕೊಂಡು ತಿನ್ನುತ್ತಿದ್ದರು. ಇದನ್ನು ಗಮನಿಸಿದ ಸಹೋದರರು ಅವರಿಂದ ಹಣವನ್ನು ಲಪಟಾಯ್ಸುವ ಪ್ರಯತ್ನ ಮಾಡಿದರು.

ಅಣ್ತಮ್ಮರಿಗೆ ಇಲ್ಲಸಲ್ಲದ ಅಸೆ ಹುಟ್ಟಿಸಿ ವಿವಿಧ ಕಾರಣಗಳಿಂದ ಸಹೋದರರು ಸುಮಾರು 4 ಲಕ್ಷ ಹಣವನ್ನು ಹಂತ ಹಂತವಾಗಿ ಲಪಟಾಯಿಸಿದರು. ಅಣ್ತಮ್ಮರಿಂದ ಲಪಟಾಯಿಸಿದ ಹಣದಿಂದ 14-15 ವರ್ಷದ ಸಹೋದರರು ಮೊಬೈಲ್​ ಫೋನ್​, ಸ್ಮಾರ್ಟ್​ ವಾಚ್​, ಗೇಮಿಂಗ್​ ಸೆಂಟರ್​, ರೆಸ್ಟೋರೆಂಟ್​ ಸೇರಿದಂತೆ ಇನ್ನಿತರ ಸ್ಥಳಕ್ಕೆ ತೆರಳಿ ಸಖತ್​​ ಎಂಜಾಯ್​ ಮಾಡಿದ್ದಾರೆ.

ಲಾಕರ್ ನಲಿದ್ದ ಹಣವನ್ನು ಲಪಟಾಯ್ಸಿದ ನಂತರ ತಮ್ಮ ತಂದೆಗೆ ಅನುಮಾನ ಬಂದು ತಮಗೆ ಬಯ್ಯಬಹುದು ಎಂಬ ಕಾರಣಕ್ಕೆ ಅಂಗಡಿಗೆ ತೆರಳಿ ನಕಲಿ ನೋಟುಗಳನ್ನು ಖರೀದಿಸಿ ಮತ್ತೆ ಲಾಕರ್‌ನಲ್ಲಿ ಇರಿಸಿದ್ದರು. ಘಟನೆ ನಡೆದು ಕೆಲವು ದಿನಗಳ ನಂತರ ಅಪ್ರಾಪ್ತ ವಯಸ್ಸಿನ ತಂದೆ ಹಣ ಪಡೆಯಲು ಲಾಕರ್ ತೆಗೆದಾಗ ಅದರಲ್ಲಿ ನಕಲಿ ನೋಟುಗಳು ಇರುವುದು ಬೆಳಕಿಗೆ ಬಂದಿದೆ. ಇದರಿಂದ ಅನುಮಾನಗೊಂಡ ತಂದೆ ಕೂಡಲೇ ಪೊಲೀಸರಿಗೆ ಕರೆ ಮಾಡಿ ದೂರನ್ನು ಧಾಖಲಿಸಿದರು. ದೂರನ್ನು ಧಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

ತನಿಖೆ ಶುರು ಮಾಡಿದ ಪೊಲೀಸರು ಅಪ್ರಾಪ್ತ ಮಕ್ಕಳಿಬ್ಬರ ಮೇಲೆ ಅನುಮಾನ ವ್ಯಕ್ತವಾದ ಕಾರಣ ಅವರನ್ನು ಪ್ರಶ್ನಿಸಿದರು. ಮುಗ್ದ ಮಕ್ಕಳು ತಮ್ಮ ಸ್ನೇಹಿತರು ತಮ್ಮ ಬಳಿ ಹಣ ತರಿಸಿಕೊಂಡ ಬಗ್ಗೆ ವಿವರವಾಗಿ ತಿಳಿಸಿದರು. ಇದರಿಂದ ಪೊಲೀಸರಿಗೆ ಸತ್ಯಂಶದ ಅರಿವಾಗಿ 14-15 ವರ್ಷದ ಸಹೋದರರನ್ನು ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top