ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಮೇಲೆ ವಿಪರೀತ ಕುತೂಹಲ ಹುಟ್ಟುಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ, ಚಿತ್ರದ ಬಗ್ಗೆ ಸುದೀಪ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಕೋಡಿಯೊಡೆಯುತ್ತಿದೆ.
‘ವಿಕ್ರಾಂತ್ ರೋಣ ಸಿನಿಮಾದ ವಿದೇಶಿ ವಿತರಣೆಗೆ ಇತ್ತೀಚೆಗೆ ಭರ್ಜರಿ ಡೀಲ್ ನಡೆದಿದ್ದು ಹಳೆಯ ಸುದ್ದಿ. ಈಗ ವಿಕ್ರಾಂತ್ ರೋಣದ ಹಿಂದಿ 3 ಡಿ ಅವತರಣಿಕೆಯ ವಿತರಣೆಯ ಹಕ್ಕನ್ನು ಪಿವಿಆರ್ ಸಂಸ್ಥೆ ಪಡೆದುಕೊಂಡಿದೆ. ಪಿವಿಆರ್ ದೇಶದಾದ್ಯಂತ ಚಿತ್ರ ಪ್ರದರ್ಶನ ಕ್ಷೇತ್ರದಲ್ಲಿ (ಮಲ್ಟಿಪ್ಲೆಕ್ಸ್) ತೊಡಗಿಕೊಂಡಿದೆ. ಈಗ ಚಿತ್ರ ವಿತರಣೆಗೂ ಮುಂದಾಗಿದೆ. ಈ ಹಕ್ಕುಗಳ ಮಾರಾಟದ ಮೊತ್ತ ಇನ್ನಷ್ಟೇ ಗೊತ್ತಾಗಬೇಕಾಗಿದೆ. ‘ವಿಕ್ರಾಂತ್ ರೋಣ’ ಹಿಂದಿ ವರ್ಷನ್ಗೆ ಸ್ವತಃ ಸಲ್ಮಾನ್ ಖಾನ್ ಸಾಥ್ ನೀಡಿ ಆನೆಬಲ ತುಂಬಿದ್ದಾರೆ. ಮತ್ತೊಂದು ಕಡೆ ‘ವಿಕ್ರಾಂತ್ ರೋಣ’ ಡಿಸ್ಟ್ರಿಬ್ಯೂಟ್ ಮಾಡಲಿದೆ ‘ಪಿವಿಆರ್’ ಸಂಸ್ಥೆ.
When good intentions and efforts meet great strengths.
Welcome on board @PicturesPVR ..
🥂🤜🏽🤛🏽#VikrantRona pic.twitter.com/73scF8xYzG— Kichcha Sudeepa (@KicchaSudeep) May 20, 2022
ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ ೩ಡಿ ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
