ಕಾನ್ಸ್ ಚಿತ್ರೋತ್ಸವದಲ್ಲಿ ಶುಕ್ರವಾರ ಹೈಡ್ರಾಮಾ ನಡೆದಿದೆ. ರಷ್ಯಾ ಸೈನಿಕರು ಉಕ್ರೇನ್‌ನ ಮಹಿಳೆಯರ ಮೇಲೆ ನಡೆಸುತ್ತಿರುವ ಅತ್ಯಾಚಾರವನ್ನು ನಿಲ್ಲಿಸುವಂತೆ ಮಹಿಳೆಯೊಬ್ಬರು ಅರೆ ಬೆತ್ತಲಾಗಿ ನಿಂತು ಪ್ರತಿಭಟಿಸಿದ್ದು, ಹಠಾತ್ ಘಟನೆಯಿಂದ ಎಲ್ಲರೂ ಕಂಗಾಲಾಗಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ತನ್ನ ಬಟ್ಟೆ ಕಳಚಿದ ಮಹಿಳೆ, ಉಕ್ರೇನ್ ಬಾವುಟದ ಬಣ್ಣಗಳನ್ನು ಲೇಪಿಸಿದ ದೇಹವನ್ನು ಪ್ರದರ್ಶಿಸಿದ್ದಾರೆ.
ಪ್ರತಿಷ್ಠಿತ ಈವೆಂಟ್‌ನ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‌ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಯೂಕ್ರೇನಿಯನ್ ಮಹಿಳೆ ಪ್ರತಿಭಟನೆಯನ್ನು ನಡೆಸಿದರು. ರೆಡ್ ಕಾರ್ಪೆಟ್ ಗೌರವದ ಸಂದರ್ಭದಲ್ಲಿ ಬಟ್ಟೆ ಕಿತ್ತೆಸೆದು ಬೆತ್ತಲಾಗಿ ಎಲ್ಲರ ಮಧ್ಯ ಅಪರಿಚಿತ ಪ್ರತಿಭಟನಾಗಾರ್ತಿ ಬಂದು ನಿಂತು ಕೂಗಾಡಲು ಶುರು ಮಾಡಿದಳು. ಆಕೆಯ ಎದೆಯ ಮೇಲೆ ಯೂಕ್ರೇನ್ ಧ್ವಜದ ನೀಲಿ ಮತ್ತು ಹಳದಿ ಬಣ್ಣಗಳಲ್ಲಿ “ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ” ಎಂಬ ಸಂದೇಶ ಬರೆಯಲಾಗಿತ್ತು.
In Cannes,half-naked activist in bloody shorts ran onto the red carpet.her boobs,against the background of the 🇺🇦 , she had the inscription:“stop raping us.”She was quickly rounded up and taken away. It all happened during the premiere of the film“3 K Years of Longing." pic.twitter.com/gBc2QPtB7T
— Maiseg (@maisesag) May 21, 2022
ಮಹಿಳೆಯೂ ಆಕೆಯ ಎದೆಯ ಮೇಲೆ ಉಕ್ರೇನ್ ಧ್ವಜದ ನೀಲಿ ಮತ್ತು ಹಳದಿ ಬಣ್ಣದಲ್ಲಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾಳೆ. ಕಾಲು ಮತ್ತು ತೊಡೆಯಲ್ಲಿ ಕೆಂಪು ಬಣ್ಣದಲ್ಲಿ ಚಿತ್ರೀಸಿಕೊಂಡಿದ್ದಾಳೆ. ಮಹಿಳೆ ಕೂಗಾಡಲು ಪ್ರಾರಂಭ ಮಾಡುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‍ಗಳು ಆಕೆಯನ್ನು ಸುತ್ತಿಕೊಂಡು ರೆಡ್ ಕಾರ್ಪೆಟ್‍ನಿಂದ ಕೆಳಗೆ ಇಳಿಸಿದ್ದಾರೆ.
ಕಾನ್ ಸಿನಿಮೋತ್ಸವ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಇದು ಕೂಡ ಒಂದು. ಈ ಫಿಲ್ಮ್ ಫೆಸ್ಟಿವಲ್ನಲ್ಲಿ ತಮ್ಮ ಸಿನಿಮಾ ಪ್ರಸಾರ ಕಾಣಲಿ ಎಂದು ಅನೇಕರು ಆಶಿಸುತ್ತಾರೆ. ಅಂತಹ ಅವಕಾಶ ಸಿಕ್ಕರೆ ನಿಜಕ್ಕೂ ಅದು ಅದೃಷ್ಟವೇ ಸರಿ. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಈ ರೀತಿಯ ಘಟನೆ ನಡೆದಿರುವುದು ಅನೇಕರಿಗೆ ಮುಜುಗರ ತಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
