ಐಪಿಎಲ್ 2022 ಟೂರ್ನಿಯ ಪ್ಲೇ ಫ್ ಹಂತಕ್ಕೆ ನಾಲ್ಕನೇ ತಂಡವಾಗಿ ಆರ್‌ಸಿಬಿ ಲಗ್ಗೆ ಇಟ್ಟಿದೆ. ಶನಿವಾರ ನಡೆದ ಐಪಿಎಲ್ 2022ರ 15ನೇ ಋತುವಿನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುತ್ತಿದ್ದಂತೆ, ಪ್ಲೇ-ಆಫ್ ಸ್ಥಾನಗಳನ್ನು ನಿರ್ಧರಿಸಲಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಪ್ಲೆ ಆಫ್ ಪ್ರವೇಶಿಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಕಳೆದ ಮೂರು ವರ್ಷಗಳಲ್ಲಿ ಬೇರೆ ಯಾವುದೇ ತಂಡ ಮಾಡಿರದ ಸಾಧನೆಯೊಂದನ್ನ ಮಾಡಿರುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಏನದು ಅಂತೀರಾ? ಮುಂದೆ ಓದಿ
ಈ ಬಾರಿ ಪ್ಲೇಆಫ್ ಪ್ರವೇಶಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಮೂರನೇ ಬಾರಿಗೆ ಲಗ್ಗೆಯಿಟ್ಟಂತಾಗಿದೆ. 2020, 2021,ರಲ್ಲಿ ಕೂಡ ಆರ್ಸಿಬಿ ಪ್ಲೇಯರ್ ಎಂಟ್ರಿ ಕೊಟ್ಟಿತ್ತು.. ಈಗ 2022ರಲ್ಲಿಯೂ ಪ್ಲೇಆಫ್ ಪ್ರವೇಶಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ.. ಕಳೆದ ಮೂರು ವರ್ಷಗಳಲ್ಲಿ(2020,2021,2022) ಬೇರೆ ಯಾವುದೇ ತಂಡ ಈ ಸಾಧನೆಯನ್ನು ಮಾಡಿಲ್ಲ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
