ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದ ಬಳಿ ಯುವಕನೋರ್ವ ಹುಚ್ಚಾಟ ಮೆರದಿದ್ದಾನೆ. ಜಲಾಶಯದ ಗೋಡೆ ಹತ್ತಿದ್ದ ಯುವಕ ನೋಡ ನೊಡುತ್ತಿದ್ದಂತೆಯೇ ಬ್ಯಾಲೆನ್ಸ್ ತಪ್ಪಿ ಹಾರಿ ಕೆಳಗೆ ಬಿದ್ದಿದ್ದಾನೆ. ಈ ಭಯಾನಕ ದೃಶ್ಯ ಅಲ್ಲಿದ್ದವರ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಯುವಕನ ಕೋತಿಯಾಟಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದ ಬಳಿ ಯುವಕನೋರ್ವ ಹುಚ್ಚಾಟ ಮೆರದಿದ್ದಾನೆ pic.twitter.com/5T1BGXgWfb
— GBKM (@officialGBKM) May 23, 2022
ಈತ ಗೌರಿಬಿದನೂರು ತಾಲ್ಲೂಕು ಮೂಲದವರು ಎನ್ನಲಾಗಿದೆ. ಈ ಘಟನೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವತ್ತು ಅಡಿಗಿಂತಲೂ ಹೆಚ್ಚು ಎತ್ತರದಿಂದ ಬಿದ್ದ ಪರಿಣಾಮ ಸ್ವಲ್ಪ ಪೆಟ್ಟಾಗಿದೆ ಎಂದು ವರದಿಯಾಗಿದ್ದು ಆತ ಸದ್ಯ ಆಪ್ಸತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಹೀಗೆ ತಡೆಗೋಡೆಯ ಮೇಲೆ ಹತ್ತುವವರ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದೆ. ಧುಮುಕುವ ನೀರಿನಲ್ಲಿ ನಾಲ್ಕಾರು ಯುವಕರು ಒಟ್ಟಿಗೆ ತಡೆಗೋಡೆಯನ್ನು ಹತ್ತುವುದು, ಪೈಪೋಟಿಗೆ ಬಿದ್ದಂತೆ ಮೇಲೆ ಏರುವುದು…ಇಂತಹ ದೃಶ್ಯಗಳು ಸಾಮಾನ್ಯ ಎನಿಸಿವೆ. ಕಡಿದಾದ ತಡೆಗೋಡೆಯಿಂದ ಸ್ವಲ್ಪ ಜಾರಿದರೂ ಕೆಳಕ್ಕೆ ಬೀಳಬೇಕಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
