ಆರ್ ಸಿ ಬಿ ತಂಡದ ಬೌಲಿಂಗ್ ವಿಭಾಗದ ಟ್ರಂಪ್ ಕಾರ್ಡ್ ಆಗಿರುವ ಹರ್ಷಲ್ ಪಟೇಲ್ ಗುಜರಾತ್ ವಿರುದ್ಧ ನೆಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಬೆರಳಿಗೆ ಬಾಲ್ ತಾಗಿ ಅವರ ಬೆರಳಿನಿಂದ ರಕ್ತ ಸುರಿದ ಕಾರಣ ಪಂದ್ಯದ ಅರ್ಧದಲ್ಲೇ ಮೈದಾನ ಬಿಟ್ಟು ಹೊರನಡೆದರು. ಇದರಿಂದ ಕೆಲ ಕಾಲ ಆರ್ ಸಿ ಬಿ ಅಭಿಮಾನಿಗಳಿಗೆ ಬೇಸರ ಉಂಟಾಗಿತ್ತು. ಮತ್ತು ಮುಂದಿನ ಪಂದ್ಯದಲ್ಲಿ ಹರ್ಷಲ್ ಆಡುವುದಿಲ್ಲವೇ? ಎಂಬ ಅನುಮಾನ ಉಂಟಾಗಿತ್ತು. ಆದರೆ ಇದಕೆಲ್ಲಾ ಉತ್ತರ ಸಿಕ್ಕಿದೆ.
ಮುಂಬೈ ಮತ್ತು ಡೆಲ್ಲಿ ನಡುವೆ ನಡೆದ ಪಂದ್ಯದಲ್ಲಿ ಮುಂಬೈ ಗೆಲುವಿನೊಂದಿಗೆ ಆರ್ ಸಿ ಬಿ ಪ್ಲೇ ಆಫ್ ತಲುಪಿದೆ. ಇದೀಗ ಆರ್ ಸಿ ಬಿ ಕಪ್ ಗೆಲ್ಲಲು ಬೇಕಾಗಿರೋದು ಕೇವಲ 3 ಪಂದ್ಯಗಳಲ್ಲಿ ಗೆಲುವು. ಇಂತಹ ಸಂಧರ್ಭದಲ್ಲಿ ಹರ್ಷಲ್ ಪಟೇಲ್ ಅವರ ಅಲಭ್ಯತೆ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ ಮುಂದಿನ ಪಂದ್ಯದಲ್ಲಿ ಆಡುವುದಾಗಿ ಸ್ವತಃ ಹರ್ಷಲ್ ಪಟೇಲ್ ಅವರೇ ವಿವರಿಸಿದ್ದಾರೆ.
ಶಾರ್ಟ್ ಕವರ್ಸ್ನಲ್ಲಿ ಚೆಂಡನ್ನು ಹಿಡಿಯುವಾಗ ಬಲಗೈಗೆ ಗಾಯವಾಗಿತ್ತು. ಇದಾದ ಬಳಿಕ ತಮ್ಮ ಕೈಗೆ ಒಲಿಗೆ ಹಾಕಲಾಗಿತ್ತು ಹಾಗೂ 3 ಅಥವಾ 4 ದಿನಗಳ ಬಳಿಕ ಅವುಗಳನ್ನು ತೆಗೆಯಲಾಗಿತ್ತು. ಹಾಗಾಗಿ, ಪ್ಲೇಆಫ್ಸ್ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ,” ಎಂದು ಹರ್ಷಲ್ ಪಟೇಲ್ ಹೇಳಿರುವುದನ್ನು ಆರ್ಸಿಬಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
