fbpx
ಸಮಾಚಾರ

ರಿಲೀಸ್ ಆಯ್ತು ವಿಕ್ರಾಂತ್ ರೋಣ ಮೊದಲ ಹಾಡು: ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ ‘ರಾ ರಾ ರಕ್ಕಮ್ಮ..’ ಮ್ಯೂಸಿಕ್

ಟೀಸರ್ ಹಾಗೂ ಪೋಸ್ಟರ್ ಮೂಲಕ ಗಮನ ಸೆಳೆದ ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ..’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಇದು ಅವರ ಫ್ಯಾನ್ಸ್​ಗೆ ಸಖತ್ ಇಷ್ಟವಾಗಿದೆ. ಕಿಕ್ ಕೊಡುವ ರೀತಿಯಲ್ಲಿ ಈ ಹಾಡನ್ನು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

 

 

3 ನಿಮಿಷ 43 ಸೆಕೆಂಡುಗಳ ಗಡಂಗ್ ರಕ್ಕಮ್ಮ..ರಾ…ರಾ ಹಾಡಿನಲ್ಲಿ ಜಾಕ್ವೆಲಿನ್, ಕಿಚ್ಚ ಸುದೀಪ್ ಜತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಹಾಡಿನ ನಡುವೆ ಸಿನಿಮಾ ಚಿತ್ರೀಕರಣದ ತುಣುಕುಗಳನ್ನು ತೋರಿಸಲಾಗಿದೆ. ಬಿ.ಅಜನೀಶ್‌ ಲೋಕನಾಥ್‌ ಸಂಗೀತ ಕೇಳುಗರನ್ನು ಕುಂತಲ್ಲೇ ಕುಣಿಸಿದೆ. ಅನೂಪ್‌ ಭಂಡಾರಿ ಸಾಹಿತ್ಯ ಈ ಹಾಡಿಗಿದ್ದು, ಜಾನಿ ಮಾಸ್ಟರ್‌ ಕಲಾವಿದರಿಂದ ಹೆಜ್ಜೆ ಹಾಕಿಸಿದ್ದಾರೆ. ವಿಲಿಯಂ ಡೇವಿಡ್‌ ಕ್ಯಾಮೆರಾ ಕೈಚಳಕ ಈ ಸಿನಿಮಾಗಿದೆ. ಹಾಡಿನ ಸಾಹಿತ್ಯ ಹಾಗೂ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

 

 

ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ಚಿತ್ರದಲ್ಲಿ ಬಾಲಿವುಡ್​ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್​ ಪಾತ್ರದ ಹೆಸರು ಗಡಂಗ್​ ರಕ್ಕಮ್ಮ. ಈ ಹೆಸರನ್ನೇ ಬಳಸಿಕೊಂಡು‘ರಾ ರಾ ರಕ್ಕಮ್ಮ..’ ಎಂಬ ಸ್ಪೆಷಲ್‌ ಸಾಂಗ್ ಮಾಡಲಾಗಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಹಲ ಚಲ್ ಸೃಷ್ಟಿಸಿದೆ.

 

 

ಒಂದೊಂದು ಭಾಷೆಯಲ್ಲಿ ಒಂದೊಂದು ದಿನ ರಿಲೀಸ್​
ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಸಾಂಗ್ ಏಕ ಕಾಲದಲ್ಲಿ ರಿಲೀಸ್ ಮಾಡಲಾಗುತ್ತದೆ. ಆದರೆ, ‘ವಿಕ್ರಾಂತ್​ ರೋಣ’ ಬೇರೆ ತಂತ್ರ ಬಳಸಿದೆ. ‘ರಾ ರಾ ರಕ್ಕಮ್ಮ..’ ಲಿರಿಕಲ್ ಸಾಂಗ್ ಒಂದೊಂದು ಭಾಷೆಯಲ್ಲೂ ಒಂದೊಂದು ದಿನಾಂಕದಂದು ಈ ಹಾಡು ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಇಂದು ರಿಲೀಸ್ ಆಗಿದ್ದು ಹಿಂದಿಯಲ್ಲಿ ಮೇ 24ಕ್ಕೆ ಮಧ್ಯಾಹ್ನ 01.05 ಕ್ಕೆ ಬಿಡುಗಡೆಯಾಗುತ್ತಿದ್ದು, ತೆಲುಗಿನಲ್ಲಿ ಮೇ 24 ರಂದು ಮಧ್ಯಾಹ್ನ 01.05ಕ್ಕೆ ಈ ಹಾಡು ಬಿಡುಗಡೆಯಾಗಲಿದೆ ಎಂದು ಕಿಚ್ಚ ಮಾಹಿತಿ ನೀಡಿದ್ದಾರೆ. ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 01.05ಕ್ಕೆ ಹಾಗೂ ಮಲಯಾಳಂನಲ್ಲಿ ಮೇ 27 ರಂದು 01.05ಕ್ಕೆ ಈ ಲಿರಿಕಲ್ ಹಾಡು ರಿಲೀಸ್ ಆಗುತ್ತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top