34 ವರ್ಷಗಳ ಹಿಂದೆ 65 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಟಿಯಾಲ ಸೆಂಟ್ರಲ್ ಜೈಲಿನಲ್ಲಿದ್ದ ಸಿಧು ಅವರನ್ನು ಪಟಿಯಾಲದಲ್ಲಿರುವ ರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಸಿಧು ಅವರು ವೇಯ್ಟ್ ಅಲರ್ಜಿಯಿಂದ ಬಳಲುತ್ತಿದ್ದಾರೆ ಎಂದು ಸಿಧು ಪರ ವಕೀಲರು ತಿಳಿಸಿದ್ದಾರೆ.
Punjab | Congress leader Navjot Singh Sidhu brought to Rajindra Hospital, Patiala for a medical checkup. Details awaited.
He was lodged in Patiala central jail on May 20th after Supreme Court imposed one-year rigorous imprisonment on him in the 1988 road rage case. pic.twitter.com/s0k5xBByd9
— ANI (@ANI) May 23, 2022
ಏನಿದು ಪ್ರಕರಣ?
1988ರ ಡಿಸೆಂಬರ್ 27ರಂದು ಪಟಿಯಾಲದ ಶೆರನ್ವಾಲಾ ಗೇಟ್ ಕ್ರಾಸಿಂಗ್ ಬಳಿ ಸಿಧು, ಹಾಗೂ ಇನ್ನೊಬ್ಬ ಆರೋಪಿ ರೂಪಿಂದರ್ ಸಿಂಗ್ ಸಂಧು ಅವರು ಜಿಪ್ಸಿ ವಾಹನದಲ್ಲಿ ಬರುತ್ತಿದ್ದರು. ಆಗ ಗುರ್ನಾಮ್ ಸಿಂಗ್, ಜಸ್ವಿಂದರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿ ಮದುವೆಗಾಗಿ ಹೋಗಲು ಬ್ಯಾಂಕ್ನಿಂದ ಹಣ ಡ್ರಾ ಮಾಡಲು ತೆರಳುತ್ತಿದ್ದರು.
ಗುರ್ನಾಮ್ ಸಿಂಗ್ ಅವರು ಮಾರುತಿ ಕಾರ್ ಚಾಲನೆ ಮಾಡುತ್ತಿದ್ದರು. ಕ್ರಾಸಿಂಗ್ ಬಳಿ ಜಿಪ್ಸಿ ರಸ್ತೆ ಮಧ್ಯೆ ನಿಂತಿರುವುದು ಕಂಡುಬಂತು. ಆಗ ತಮ್ಮ ಕಾರು ತೆರಳಲು ಜಾಗ ಮಾಡಿಕೊಡುವಂತೆ ಸಿಧು ಮತ್ತು ಸಂಧು ಅವರಿಗೆ ಸೂಚಿಸಿದ್ದರು. ಆಗ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಗುರ್ನಾಮ್ ಸಿಂಗ್ ಅವರ ಮೇಲೆ ಸಿಧು ಹಲ್ಲೆ ನಡೆಸಿದ್ದರು. ಮೊದಲೇ ಅನಾರೋಗ್ಯದ ಸಮಸ್ಯೆ ಹೊಂದಿದ್ದ ಗುರ್ನಾಮ್ ಸಿಂಗ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ಅಲ್ಲಿ ಮೃತಪಟ್ಟಿದ್ದರು. ಸಿಧು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು. ಆಗ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಸಿಧು, ಕೆಲವು ದಿನ ಜೈಲಿನಲ್ಲಿದ್ದರು.
. 1999 ರಲ್ಲಿ, ಪಟಿಯಾಲದ ಸೆಷನ್ಸ್ ನ್ಯಾಯಾಲಯವು ಸಿಧು ಮತ್ತು ಅವರ ಸಹಚರರನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಖುಲಾಸೆ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 2006 ರಲ್ಲಿ ಸಿಧುವನ್ನು ತಪ್ಪಿತಸ್ಥ ನರಹತ್ಯೆಯ ಅಪರಾಧಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
2018 ರಲ್ಲಿ ಸಿಧು ಸುಪ್ರೀಂ ಕೋರ್ಟ್ಗೆ ಮೊರೆ ಹೋದರು. ಒಂದೇ ಏಟಿಗೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಯಾವುದೇ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹಿರಿಯ ನಾಗರಿಕರಿಗೆ ನೋವುಂಟು ಮಾಡಿದ ಕಾರಣಕ್ಕೆ ಸಿಧುವನ್ನು ತಪ್ಪಿತಸ್ಥ ಎಂದು ಪರಿಗಣಿಸಿತು. ಸಿಧುಗೆ ಜೈಲು ಶಿಕ್ಷೆ ಮತ್ತು ₹ 1,000 ದಂಡ ವಿಧಿಸಲಾಯಿತು.
2018ರ ತೀರ್ಪಿನಲ್ಲಿ ಲೋಪ ವಾಗಿದೆ ಎಂಬುದು ದಾಖಲೆಗಳನ್ನು ನೋಡಿದರೇ ತಿಳಿಯುತ್ತದೆ ಮತ್ತು ಈ ಲೋಪವನ್ನು ಸರಿಪಡಿಸುವ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರ ಪೀಠವು ಹೇಳಿದೆ.
ಸಿಧು ಅವರು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರ. ಎತ್ತರದ ದಷ್ಟಪುಷ್ಟ ವ್ಯಕ್ತಿ. ತಮಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿಗೆ ತಮ್ಮ ಕೈಯಿಂದ ಹೊಡೆದರೆ ಎಷ್ಟು ಜೋರಾಗಿ ಏಟು ಬೀಳಬಹುದು ಎಂಬುದೆಲ್ಲ ಸಿಧು ಅವರಿಗೆ ತಿಳಿದಿತ್ತು ಎಂಬ ಮಹತ್ವದ ವಿಚಾರವನ್ನು ಕೋರ್ಟ್ ಆಗ ನಿರ್ಲಕ್ಷಿಸಿತ್ತು ಎಂದು ಪೀಠವು ವಿವರಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
