fbpx
ಸಮಾಚಾರ

ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಆಯ್ಕೆಯಾಗದ ನತದೃಷ್ಟ ಕ್ರಿಕೆಟಿಗರು ಇವರೇ

ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುವ ಟಿ೨೦ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿ ಇನ್ನುಳಿದ ಆಟಗಾರರಿಗೆ ಅವಕಾಶವನ್ನು ನೀಡಿದ್ದಾರೆ. ಆದರೆ ಇದರಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಪ್ರಸ್ತುತ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಅಂತವರ ಪಟ್ಟಿ ಇಲ್ಲಿದೆ.

ಶಿಖರ್ ಧವನ್:
ಭಾರತ ಕಂಡಂತ ಶ್ರೇಷ್ಠ ಬ್ಯಾಟ್ಸಮನ್ ಇವರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅವರ ಹೆಸರನ್ನು ಪ್ರಕಟಿಸಿಲ್ಲ. ಇದು ಇವರಿಗೆ ಬಹಳಷ್ಟು ಬೇಸರವನ್ನು ತಂದಿದೆ. ಪ್ರಸ್ತುತ ಋತುವಿನ ಐಪಿಎಲ್ ನಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಧವನ್ 13 ಇನ್ನಿಂಗ್ಸ್‌ಗಳಲ್ಲಿ 421 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 122 ಆಗಿತ್ತು.

 


ಸಂಜು ಸ್ಯಾಮ್ಸನ್:
ರಾಜಸ್ಥಾನ್ ತಂಡದ ನಾಯಕನಾಗಿರುವ ಇವರಿಗೂ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಸ್ಥಾನ ಸಿಕ್ಕಿಲ್ಲ. ಪ್ರಸ್ತುತ ಐಪಿಎಲ್ ನಲ್ಲಿ ರಾಜಸ್ಥಾನ್ ತಂಡವನ್ನು ಮುನ್ನಡೆಸಿ ಪ್ಲೇಆಫ್ ಹಂತದವರೆಗೂ ತೆಗೆದುಕೊಂಡು ಹೋಗಿದ್ದಾರೆ. ಪ್ರಸ್ತುತ ಐಪಿಎಲ್ ನಲ್ಲಿ ಇವರು ಇದುವರೆಗೆ 14 ಇನ್ನಿಂಗ್ಸ್‌ಗಳಲ್ಲಿ 147 ಸ್ಟ್ರೈಕ್ ರೇಟ್‌ನೊಂದಿಗೆ 374 ರನ್ ಗಳಿಸಿದ್ದಾರೆ.

 

 

ರಾಹುಲ್ ತ್ರಿಪಾಠಿ:
ಯುವ ಆಟಗಾರರು ಟೀಮ್ ಇಂದ ತಂಡವನ್ನು ಸೇರುತ್ತಿದ್ದಾರೆ. ಆದರೆ ರಾಹುಲ್ ತ್ರಿಪಾಠಿಯ ಅವರಿಗೆ ಅದೃಷ್ಟ ಕೈ ಇಡಿಯುತಿಲ್ಲ ಎಂದು ಹೇಳಬಹುದು. ಏಕೆಂದರೆ ಪ್ರಸ್ತುತ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಇವರಿಗೆ ಟೀಮ್ ಇಂಡಿಯಾ ದಲ್ಲಿ ಸ್ಥಾನ ಸಿಗುತ್ತಿಲ್ಲ. ಪ್ರಸ್ತುತ ಐಪಿಎಲ್ ನಲ್ಲಿ ಇವರು 14 ಇನ್ನಿಂಗ್ಸ್‌ಗಳಲ್ಲಿ 158 ಸ್ಟ್ರೈಕ್‌ರೇಟ್ ನೊಂದಿಗೆ 413 ರನ್ ಗಳಿಸಿದ್ದಾರೆ.

 


ಪೃಥ್ವಿ ಶಾ:
ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಈ ಯುವ ಆಟಗಾರ ಡೆಲ್ಲಿ ತಂಡದ ಮೋಸ್ಟ ಡೇಂಜರಸ್ ಆಟಗಾರ. ಇವರು 10 ಇನ್ನಿಂಗ್ಸ್‌ಗಳಲ್ಲಿ 153 ಸ್ಟ್ರೈಕ್ ರೇಟ್‌ನೊಂದಿಗೆ 283 ರನ್ ಗಳಿಸಿದರು. ಪವರ್ ಪ್ಲೇ ಅಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಇವರಿಗಿದ್ದರು ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

 

 

ಮೊಹ್ಸಿನ್ ಖಾನ್:
ಲಕ್ನೋ ಸೂಪರ್ ಜೈಂಟ್ಸ್‌ ತಂಡ ಯುವ ಬೌಲರ್ ಇವರು. ಇವರು ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಆಡಿರುವ 8 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ್ದಾರೆ. ತಮ್ಮ ತಂಡ ಪ್ಲೇ ಆಫ್ ತಲುಪಲು ಇವರ ಪಾತ್ರ ತುಂಬಾ ಮುಖ್ಯವಾಗಿತ್ತು. ಆದರೆ ಟೀಮ್ ಇಂಡಿಯಾ ಇವರನ್ನು ಸಹ ಕೈಬಿಟ್ಟಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top